ನರಗುಂದ:
ತಾಲ್ಲೂಕಿನ ಶಿರೋಳ ಗ್ರಾಮದ ಶ್ರೀ ಮಾದಾರ ಚನ್ನಯ್ಯ ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ೬೯ ನೇ ಮಹಾಪರಿನಿರ್ವಾಣ ದಿನದ ಕಾರ್ಯಕ್ರಮ ನಡೆಯಿತು.
ಪೂಜ್ಯ ಶಾಂತಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡುತ್ತ, ಚಾತುವರ್ಣ ವ್ಯವಸ್ಥೆ ಜಾರಿಯಲ್ಲಿದ್ದ ಕಾಲ, ಮನುಷ್ಯ ಮನಷ್ಯರಲ್ಲಿ ತಾರತಮ್ಯ, ಜಾತಿಯತೆಯನ್ನು ಹೋಗಲಾಡಿಸಿ, ಜಾತ್ಯಾತೀತ ವ್ಯವಸ್ಥೆ ನಿರ್ಮಾಣ ಮಾಡಿದವರು ಬಸವಾದಿ ಶಿವಶರಣರು.
ವೇದ ಕೇಳಿದವರ ಕಿವಿಯಲ್ಲಿ ಕಾಯ್ದ ಶೀಸ ಹೊಯ್ದ ಪ್ರಸಂಗಗಳು ನಡೆಯುತ್ತಿರುವ ಸಂದರ್ಭದಲ್ಲಿ ಮಹಾಮಾನವತಾವಾದಿ ವಿಶ್ವಗುರು ಬಸವಣ್ಣನವರೊಂದಿಗೆ ಸಮಸ್ತ ಕಲ್ಯಾಣದ ಶರಣ ಸಂಕುಲವು ಅಲ್ಲಮಪ್ರಭುದೇವರನ್ನು ಶೂನ್ಯ ಪೀಠದಲ್ಲಿ ಕೂಡ್ರಿಸುವ ಮೂಲಕ ವಿಶ್ವದ ಮೊದಲ ಸಂಸತ್ತನ್ನು ನಿರ್ಮಾಣ ಮಾಡಿದವರು ಬಸವಣ್ಣನವರು.

ಸ್ವಾತಂತ್ರ್ಯಾ ನಂತರದ ಭಾರತದ ಸಂವಿಧಾನದಲ್ಲಿ ಇಂದಿಗೂ ಬಸವಾದಿ ಶಿವಶರಣರ ವಚನಗಳ ಮೂಲ ಆಶಯಗಳಿಗೆ ಪೂರಕವಾದ ಕಾಯ್ದೆಗಳಿರುವುದನ್ನು ನಾವು ತಿಳಿದುಕೊಳ್ಳಬೇಕು. ಮೇಲು-ಕೀಳು, ಅಸ್ಪೃಶ್ಯತೆ, ಅಪಮಾನ, ತಾರತಮ್ಯಗಳನ್ನು ದೂರಮಾಡಿ ಸಮ-ಸಮಾಜ ನಿರ್ಮಾಣ ಮಾಡಲು ಡಾ. ಬಿ. ಆರ್. ಅಂಬೇಡ್ಕರ್ ಅವರು ಸಾಕಷ್ಟು ಶ್ರಮಿಸಿದರು.
ಸ್ತ್ರೀ ಸಮಾನತೆ, ಸ್ತ್ರೀ ಶಿಕ್ಷಣದೊಂದಿಗೆ ಎಲ್ಲರಿಗೂ ಶಿಕ್ಷಣ ದೊರೆಯಬೇಕು ಎಂದು ಪ್ರತಿಪಾದಿಸಿದರು, ಬಲಿಷ್ಠ ಭಾರತಕ್ಕೆ ಉತ್ತಮ ಸಂವಿಧಾನ ರಚಿಸಿ ಕೊಡುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಿದರು.
ಸರ್ ಸಿದ್ಧಪ್ಪ ಕಂಬಳಿ ಅವರೊಂದಿಗಿನ ಉತ್ತಮ ಒಡನಾಟ ಹೊಂದಿದ ಅಂಬೇಡ್ಕರ್ ಅವರು ಬುಧ್ಧ, ಬಸವೇಶ್ವರರ ತತ್ವಾದರ್ಶಗಳಿಗೆ ಪೂರಕವಾದ ಅಂಶಗಳನ್ನು ಸಂವಿಧಾನದಲ್ಲಿ ಅಳವಡಿಸಿ ‘ಸಂಪ್ರದಾಯಕ್ಕಿಂತ ಸಂವಿಧಾನ ದೊಡ್ಡದು’ ಎಂದು ಹೋರಾಡಿದರು.
ಆ ಮೂಲಕ ಸರ್ವರಿಗೂ ಸಮ ಪಾಲು ಸರ್ವರಿಗೂ ಸಮ ಬಾಳು ಎಂಬ ಸಾಮಾಜಿಕ ಜೀವನದ ಮೂಲ ಆಶಯಗಳನ್ನು ಸಂವಿಧಾನದ ಮೂಲಕ ಜಾರಿಯಲ್ಲಿ ತಂದಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ ಅಧ್ಯಕ್ಷೆ ಹನಮವ್ವ ಹಿರೇಮನಿ, ಅತಿಥಿಗಳಾಗಿ ಶೇಖರಯ್ಯ ನಾಗಲೋಟಿಮಠ, ನಿವೃತ್ತ ಶಿಕ್ಷಕರಾದ ವಿ.ಕೆ. ಮರೆಗುದ್ದಿ, ತಾ.ಪಂ. ಮಾಜಿ ಸದಸ್ಯರಾದ ಬಸಣ್ಣ ಕುಪ್ಪಸ್ತ, ಗೂಡುಸಾಬ ಯಲಿಗಾರ, ಬಸಣ್ಣ ಗಡ್ಡಿ, ಯಂಕಪ್ಪ ಶಾಂತಗೇರಿ, ತಾ.ಪಂ. ಮಾಜಿ ಅಧ್ಯಕ್ಷರಾದ ಪ್ರಕಾಶಗೌಡ ತಿರಕನಗೌಡ್ರ, ಬಾಲು ಮೂಲಿಮನಿ ಇದ್ದರು.
ಸಂಸ್ಥೆಯ ಸಿಬ್ಬಂದಿಗಳಾದ ಶ್ರೀಧರ ಬೇವಿನಕಟ್ಟಿ, ಸೋಮಶೇಖರಪ್ಪ ಗೊರವರ, ಪ್ರಭುಲಿಂಗ ಶಿರಯಣ್ಣವರ, ಭೂಪತಿರಾಜ ಧೋತರದ, ಪ್ರೀತಿ ಹಂಚಿನಮಠ, ಕಾಳಮ್ಮ ಕಮ್ಮಾರ, ಮಲ್ಲಪ್ಪ ಸಂಗಳದ, ಚಂದ್ರಕಾಂತ ಕಾಡದೇವರಮಠ, ಶಿವಾನಂದ ಪೂಜಾರ, ಗಂಗಾಧರ ಫಾರಗೆ ಇದ್ದರು.
ಉಪನ್ಯಾಸಕ ಶಂಕರ ಕುಪ್ಪಸ್ತ ಪ್ರಾಸ್ಥಾವಿಕವಾಗಿ ಮಾತನಾಡಿದರು, ವೀರನಗೌಡ, ಸ್ವಾಗತಿಸಿದರು, ಶ್ರೀಕಾಂತ ದೊಡಮನಿ ನಿರೂಪಿಸಿ, ಸಂಸ್ಥೆಯ ಪ್ರಾಚಾರ್ಯ ಬಸವರಾಜ ಸಾಲಿಮಠ ವಂದಿಸಿದರು.
