ಕಲಬುರ್ಗಿ:
ಬಸವ ಸಮಿತಿಯ ಅನುಭವ ಮಂಟಪದಲ್ಲಿ ಸಂಗಮ್ಮ ಶಿವಶರಣಪ್ಪ ಪಾಟೀಲ, ಕಡಗಂಚಿ ಅವರ ಸ್ಮರಣಾರ್ಥ ಜರುಗಿದ ಅರಿವಿನ ಮನೆ 879ನೆಯ ದತ್ತಿ ಕಾರ್ಯಕ್ರಮದಲ್ಲಿ ಮಹಾಂತೇಶ ಕುಂಬಾರ ಅವರು ಮಾತನಾಡಿದರು.
ಬಸವ ಮಾರ್ಗ ಅತ್ಯಂತ ಕಠಿಣವೂ ಅಲ್ಲ ಅತ್ಯಂತ ಸುಲಭವವು ಅಲ್ಲ ಮಧ್ಯಮ ಮಾರ್ಗದ್ದಾಗಿದೆ. ಮನುಷ್ಯನಲ್ಲಿ ನಾನು ಎಂಬ ಅಹಂಕಾರ ನನ್ನದು ಎಂಬ ಮಮಕಾರ ಅಳಿಯಬೇಕು. ಆಣವ ಮಲ ಮಾಯಾಮಲ ಕಾರ್ಮಿಕ ಮಲ ಕಳೆದು ಷಟಸ್ಥಲ ಮಾರ್ಗಕ್ಕೆ ಭಕ್ತ ಬರಬೇಕೆಂಬುದು ಶರಣರ ಚಿಂತನೆಯಾಗಿತ್ತು.

ಷಟಸ್ಥಲ ಮಾರ್ಗಕ್ಕೆ ಬರಲು ವ್ಯಕ್ತಿತ್ವ ವಿಕಸನವಾಗಬೇಕು. ಪರಿಪೂರ್ಣ ವ್ಯಕ್ತಿತ್ವ ಉಳ್ಳವನನ್ನು ದೇವರು ಇಷ್ಟಪಟ್ಟು ತನ್ನಡೆಗೆ ಕರೆದುಕೊಳ್ಳುತ್ತಾನೆ. ತನುಮನ ಭಾವ ಶುದ್ಧೀಕರಿಸಿಕೊಳ್ಳಬೇಕು. ನಡೆ-ನುಡಿ ಎರಡು ಒಂದೇ ಮಾಡಿಕೊಂಡಾಗ ಷಟಸ್ಥಲ ಮಾರ್ಗ ಸುಲಭವಾಗುತ್ತದೆ.
ದೇಹವೆಂಬುದು ಪ್ರಸಾದ ಕಾಯವಾಗಬೇಕು ಆಗ ಮಾನವ ದೇವನಾಗುತ್ತಾನೆ ಎಂದರು.
ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸ್ವತಿ ಕೂಬಾ, ಉಪಾಧ್ಯಕ್ಷರಾದ ಡಾ. ಜಯಶ್ರೀ ದಂಡೆ, ಕಾರ್ಯದರ್ಶಿ ಡಾ. ಆನಂದ ಸಿದ್ಧಾಮಣಿ, ಡಾ.ಕೆ. ಎಸ್. ವಾಲಿ, ಶರಣಗೌಡ ಪಾಟೀಲ್ ಪಾಳ, ಪ್ರಾಧ್ಯಾಪಕ ಡಾ. ಶಿವಶರಣಪ್ಪ ಮೋತಕಪಲ್ಲಿ, ಪ್ರಾಧ್ಯಾಪಕಿ ಡಾ. ಮೀನಾಕುಮಾರಿ ಪಾಟೀಲ, ರೇವಣಸಿದ್ಧ ಪಾಟೀಲ, ಬಂಡಪ್ಪ ಕೇಸುರ್, ಉದ್ದಂಡಯ್ಯ ಭಾಗವಹಿಸಿದರು.
