ಭಾಲ್ಕಿ:
ಶತಾಯಷಿ ಡಾ. ಚೆನ್ನಬಸವಪಟ್ಟದ್ದೇವರ 136ನೇ ಜಯಂತ್ಯುತ್ಸವ ಅಂಗವಾಗಿ ಅವರ ಜನ್ಮಸ್ಥಳ ಆಗಿರುವ ಕಮಲನಗರದಿಂದ ಡಿ.12ರಂದು ಬಸವಜ್ಯೋತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 9ಗಂಟೆಗೆ ನಾಡೋಜ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಕಮಲನಗರದಿಂದ ಪಾದಯಾತ್ರೆ ಹೊರಟು ಡಿಗ್ಗಿ, ಹೊಳಸಮುದ್ರ ಮಾರ್ಗವಾಗಿ ಸಂಗಮದಲ್ಲಿ ವಾಸ್ತವ್ಯ ಮಾಡಲಾಗುತ್ತದೆ.
ಮರುದಿನ 13ರಂದು ಸಂಗಮದಿಂದ ಹೊರಟು ಆಳಂದಿ, ಡೋಣಗಾಪುರ ಗ್ರಾಮದ ಮಾರ್ಗವಾಗಿ ಸಂಜೆ 5ಗಂಟೆಗೆ ಭಾಲ್ಕಿಯ ಚೆನ್ನಬಸವಾಶ್ರಮ ತಲುಪಲಿದೆ.
ಕಮಲನಗರದಿಂದ ಭಾಲ್ಕಿ 35 ಕಿ.ಮೀ. ಅಂತರ ಆಗಲಿದೆ. ಜಿಲ್ಲೆಯ ಸದ್ಭಕ್ತರು ಬಸವಜ್ಯೋತಿ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಹಿರೇಮಠ ಸಂಸ್ಥಾನದ ಪ್ರಕಟಣೆಯ ಮೂಲಕ ಕೋರಲಾಗಿದೆ.
