ಮಹಾದೇವಿಯಕ್ಕಗಳ ಸಮ್ಮೇಳನಕ್ಕೆ ಸಂಭ್ರಮದ ತೆರೆ
ಕಲಬುರಗಿ:
ಪ್ರಶಸ್ತಿ, ಪುರಸ್ಕಾರ ಹಾಗೂ ಸನ್ಮಾನಗಳು ಬದುಕಿಗೆ ಹೆಜ್ಜೆ ಗುರುತುಗಳು ನಿಜ. ಆದರೆ ನಾನು ಇವುಗಳನ್ನು ಎಚ್ಚರಿಕೆಯ ಗಂಟೆ ಎಂದು ಭಾವಿಸಿದ್ದೇನೆ ಎಂದು ಮಾಜಿ ಸಚಿವೆ ಡಾ. ಲೀಲಾದೇವಿ ಆರ್. ಪ್ರಸಾದ ಹೇಳಿದರು.
ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋದನ ಕೇಂದ್ರ, ಬಸವ ಸಮಿತಿ ಆಶ್ರಯದಲ್ಲಿ ನಗರದ ಅನುಭವ ಮಂಟಪದಲ್ಲಿ ಭಾನುವಾರ ನಡೆದ ಮಹಾದೇವಿಯಕ್ಕಗಳ ಸಮ್ಮೇಳನ-15 ಸಮಾರೋಪ ಸಮಾರಂಭದಲ್ಲಿ ಡಾ.ಬಿ.ಡಿ. ಜತ್ತಿ ವೈರಾಗ್ಯನಿಧಿ ಅಕ್ಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಮಹಿಳೆಯರ ಬದುಕು ಗುಲಾಬಿ ಹೂವಿನ ರೀತಿ. ಸಾರ್ವಜನಿಕ ಬದುಕಿನಲ್ಲಿ ನಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.

ಮಂಗಲದ ಹರವು (ಸಮಾರೋಪ) ನುಡಿಗಳನ್ನಾಡಿದ ಪ್ರಾಧ್ಯಾಪಕಿ ಪ್ರೊ. ಸುಲೇಖಾ ಮಾಲಿ ಪಾಟೀಲ ಮಾತನಾಡಿ, ಜಗತ್ತಿನ ಹಲವು ಅದ್ಭುತಗಳಲ್ಲಿ ಅಕ್ಕಮಹಾದೇವಿ ಕೂಡ ಒಬ್ಬರು. ಅವರ ಹೆಸರಿನಲ್ಲಿ ಎರಡು ದಿನಗಳ ಕಾಲ ನಡೆದಿರುವ ಉಪನ್ಯಾಸ, ಚರ್ಚೆ, ಸಂವಾದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅರ್ಥಪೂರ್ಣವಾಗಿದ್ದವು ಎಂದು ತಿಳಿಸಿದರು.
ಮಹಿಳೆಯರೇ ಸೇರಿಕೊಂಡು ಇಡಿಯಾಗಿ ಅವರೇ ಕಾರ್ಯಕ್ರಮ ರೂಪಿಸಿರುವುದಲ್ಲದೆ, ಶರಣರ ವಚನಗಳನ್ನು ನಿರ್ವಚನ ಮಾಡಿರುವುದು ಮಹಿಳೆಯರಲ್ಲಿನ ಪ್ರತಿಭೆ ಅನಾವರಣಗೊಳಿಸಲು ನೆರವಾಗಿತು ಎಂದು ಅವರು ತಿಳಿಸಿದರು.
ಇದೇ ವೇಳೆಯಲ್ಲಿ ರೇಖಾ ಪಾಟೀಲ (ರೊಟ್ಟಿ ಕಾಯಕ), ಜಗದೇವಿ ಶಿಕ್ಕರಗೋಳ (ಖಾನಾವಳಿ ಕಾಯಕ), ರೇಖಾ ತೆಲ್ಲೂರ (ಬ್ಯೂಟಿ ಪಾರ್ಲರ್) ಹೀಗೆ ವಿವಿಧ ಕಾಯಕ ವೃತ್ತಿಯವರಿಗೆ ಗೌರವ ಸನ್ಮಾನ ಮಾಡಲಾಯಿತು.

ಸಮ್ಮೇಳನಾಧ್ಯಕ್ಷೆ ಪುಷ್ಪಾ ವಾಲಿ ಅಧ್ಯಕ್ಷತೆ ವಹಿಸಿದ್ದರು. ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ, ಕಾರ್ಯಾಧ್ಯಕ್ಷೆ ಡಾ. ಜಯಶ್ರೀ ದಂಡೆ ವೇದಿಕೆಯಲ್ಲಿದ್ದರು.
ಬೀದರ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಅರ್ಪಿತಾ, ಭಾಗ್ಯಶ್ರೀ, ರೂಪಾಲಿ, ರಾಜಾಬಾಯಿ, ದೀಪಿಕಾ, ನೇಹಾ, ರೇಣುಕಾ, ಸ್ನೇಹಾ, ಜೈ ಭವಾನಿ, ನವ್ಯಾ ಇತರರಿಂದ ಮಹಾಕ್ರಾಂತಿ ನಾಟಕ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಡಾ. ಭವಾನಿ ಚಟ್ನಳ್ಳಿ ನಿರೂಪಿಸಿದರು. ಡಾ. ಭಾಗ್ಯಜ್ಯೋತಿ ವಂದಿಸಿದರು.

Leela akka is a role model in our family.Her dedication towards family, Political career, profound knowledge about Sharana Shahitya,deep study about Akka mahadevi is remarkable.
She deserves this award. It is a Prestigious moment for our family.🙏🙏.