ಮೈಸೂರು:
ನಗರದ ಅಗ್ರಹಾರದಲ್ಲಿರುವ ಹೊಸಮಠದ ಆವರಣದ ನಟರಾಜ ಸಭಾಂಗಣದಲ್ಲಿ ಡಿಸೆಂಬರ್ 23ರಂದು ಬೆಳಿಗ್ಗೆ 10.30ಕ್ಕೆ ಬಸವಪ್ರಣೀತ ಲಿಂಗಾಯತ ಧರ್ಮ ದಿನದರ್ಶಿಕೆ ಬಿಡುಗಡೆ ಮತ್ತು ಶರಣ ಒಕ್ಕಲಿಗ ಮುದ್ದಣ್ಣ ಅವರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ 10 ಜನ ಪ್ರಗತಿಪರ ರೈತರನ್ನು ಸನ್ಮಾನಿಸಲಾಗುತ್ತದೆ. ಶಾಸಕರಾದ ಜಿ.ಟಿ. ದೇವೇಗೌಡರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಹೊಸಮಠದ ಪೂಜ್ಯ ಚಿದಾನಂದ ಸ್ವಾಮೀಜಿ ಸಾನಿಧ್ಯ ವಹಿಸುತ್ತಾರೆ.
ಬಂದೂರು ಗ್ರಾಮ, ಅರಸೀಕೆರೆ ತಾಲ್ಲೂಕಿನ ಪೂಜ್ಯ ಮಹಾಲಿಂಗ ಸ್ವಾಮೀಜಿ, ವಿಶ್ವಗುರು ಬಸವಣ್ಣ, ವೈರಾಗ್ಯನಿಧಿ ಅಕ್ಕಮಹಾದೇವಿಯವರ ಕುರಿತು ಉಪನ್ಯಾಸ ನೀಡುತ್ತಾರೆ. ನೀಲಕಂಠೇಶ್ವರ ಮಠದ ಪೂಜ್ಯ ಸಿದ್ದಮಲ್ಲಸ್ವಾಮಿಗಳು ದಿನದರ್ಶಿಕೆ ಬಿಡುಗಡೆ ಮಾಡುತ್ತಾರೆ. ಮುಖ್ಯ ಅತಿಥಿಗಳಾಗಿ ಸೋಮಶೇಖರ ಮಲೆಯೂರು, ಚಿದಾನಂದ, ಶಿವಬುದ್ದಿ ಹಲ್ಲರೆ ಮತ್ತು ಶಿವಲಿಂಗಪ್ಪನವರು ಭಾಗವಹಿಸುತ್ತಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಬಸವ ಭಾರತ ಫೌಂಡೇಶನ್ ಅಧ್ಯಕ್ಷರು ಮತ್ತು ಬಸವ ಭಾರತ ಪತ್ರಿಕೆಯ ಸಂಪಾದಕರಾದ ಶಿವರುದ್ರಪ್ಪ ವಹಿಸಿಕೊಳ್ಳುವರು.
ಕಾರ್ಯಕ್ರಮಕ್ಕೆ ಶರಣ ಬಂಧುಗಳು, ಶರಣಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಬಸವ ಭಾರತ ಫೌಂಡೇಶನ್ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.

