ಹಲವು ಜಿಲ್ಲೆಗಳಲ್ಲಿ ಬಸವಣ್ಣ ಹೆಸರಿನ ಹಿಂದೂ ಸಮಾವೇಶಕ್ಕೆ ಸಿದ್ಧತೆ

ಬಸವ ಮೀಡಿಯಾ
ಬಸವ ಮೀಡಿಯಾ

ಡಿಸೆಂಬರ್ 29 ಬಬಲೇಶ್ವರಕ್ಕೆ ಬರಲು ಕನ್ನೇರಿ ಸ್ವಾಮಿಗೆ ಆಹ್ವಾನ

ವಿಜಯಪುರ

ಬಬಲೇಶ್ವರದ ನಂತರ ಗದಗ, ವಿಜಯಪುರ, ಬೆಳಗಾವಿ, ಧಾರವಾಡ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ‘ಬಸವಾದಿ ಶರಣರ’ ಹಿಂದೂ ಸಮಾವೇಶ ನಡೆಸಲು ಸಿದ್ಧತೆ ನಡೆದಿದೆ ಎಂದು ಶಿರೋಳದ ರಾಮಾರೂಢ ಮಠದ ಶಂಕರಾರೂಢ ಸ್ವಾಮೀಜಿ ಬುಧವಾರ ಹೇಳಿದರು.

ನಗರದಲ್ಲಿ ಉಚ್ಚಾಟಿತ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಹಾಗೂ ಅನೇಕ ಹಿಂದುತ್ವ ಪರ ಮುಖಂಡರ ಜೊತೆ ಮಾಧ್ಯಮಗಳೊಂದಿಗೆ ಮಾತನಾಡಿದರು.

“ದೇಶದಲ್ಲಿ ಹಿಂದೂಗಳ ಮೇಲೆ ಅತ್ಯಾಚಾರ, ಅನಾಚಾರ ನಡೆಯುತ್ತಿದೆ. ಅದನ್ನು ನಿಲ್ಲಿಸಲು ಹಾಗೂ ಹಿಂದೂ ಸಂಸ್ಕೃತಿಯ ಆಚಾರ ವಿಚಾರಗಳನ್ನು ಯುವ ಪೀಳಿಗೆಗೆ ಮುಟ್ಟಿಸಲು ಡಿಸೆಂಬರ್ 29 ಬಬಲೇಶ್ವರದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಎಲ್ಲ ಮತ, ಪಂಥಗಳ 300 ಸ್ವಾಮೀಜಿಗಳು ಹಾಗೂ 25,000 ಹಿಂದೂ ಅಭಿಮಾನಿಗಳು ಪಕ್ಷಾತೀತವಾಗಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ,” ಹೇಳಿದರು.

ಬಬಲೇಶ್ವರ ಸಮಾವೇಶಕ್ಕೆ ಕನ್ನೇರಿ ಸ್ವಾಮಿಯವರಿಗೆ ಅಹ್ವಾನ ನೀಡಿ ಭಾಗವಹಿಸಲು ಆಗ್ರಹಿಸಲಾಗಿದೆ. ವಿಜಯಪುರ ಜಿಲ್ಲೆಯಿಂದ ಅವರ ನಿರ್ಬಂಧದ ಅವಧಿ ಮುಗಿದಿದೆ ಎಂದು ಶಂಕರಾರೂಢ ಸ್ವಾಮೀಜಿ ತಿಳಿಸಿದರು.

ಲಿಂಗಾಯತ ಧರ್ಮ ಸ್ಥಾಪಿಸಿದ ಬಸವಣ್ಣನವರ ಹೆಸರಿನಲ್ಲಿ ಹಿಂದೂ ಸಮಾವೇಶ ಯಾಕೆ ಎಂದು ಪತ್ರಕರ್ತರಿಂದ ಬಂದ ಪ್ರಶ್ನೆಗೆ ಬಸವಣ್ಣ ಹಿಂದೂ ಅಲ್ಲ ಅನ್ನುವುದು ತಪ್ಪು ಎಂದರು.

“ಶರಣರ ವಚನಗಳ ಅಂಕಿತ ನಾಮ ಹಿಂದೂ ದೇವಾಲಯಗಳ ದೇವರುಗಳ ಹೆಸರುಗಳೇ ಆಗಿವೆ. ಆದರೆ ಕೆಲವು ಮಠಾಧಿಪತಿಗಳು ನಾವು ಬೇರೆ ಅವರು ಬೇರೆ ಎಂದು ಹೊರಟಿದ್ದಾರೆ. ಅವರಿಗೆ ಎಡಪಂಥೀಯರು ಸಹಕಾರ ಕೊಡುತ್ತಿದ್ದಾರೆ,” ಎಂದು ಆರೋಪಿಸಿದರು.

ಈಶ್ವರಪ್ಪ ಮಾತನಾಡಿ “ಬೆಳಗಾವಿ ಸಭೆಯಲ್ಲಿ ನಡೆದ ನಿರ್ಣಯದಂತೆ ಹಲವಾರು ಜಿಲ್ಲೆಗಳಲ್ಲಿ ‘ಬಸವಾದಿ ಶರಣರ’ ಹಿಂದೂ ಸಮಾವೇಶ ನಡೆಸಲು ಸಿದ್ಧತೆ ನಡೆಯುತ್ತಿದೆ. ಕನ್ನೇರಿ ಸ್ವಾಮಿ ಸೇರಿ ಹಿಂದೂಗಳಿಗೆ ಬಹಳ ಅನ್ಯಾಯವಾಗುತ್ತಿದೆ. ಅದಕ್ಕೆ ಜನಾಂದೋಲನ ನಡೆಸಬೇಕಾಗಿದೆ. ಎಲ್ಲೆಲ್ಲಿ ಸಮಾವೇಶ ಆಗುತ್ತದೆಯೋ ಅಲ್ಲೆಲ್ಲಾ ಭಾಗವಹಿಸುತ್ತೇನೆ. ಕರ್ನಾಟಕದಲ್ಲಿ ಮುಂದಿನ ಬಾರಿ ಹಿಂದುತ್ವದ ಸರಕಾರ ಬರುತ್ತದೆ,” ಎಂದರು.


ಸಂಘ ಪರಿವಾರದ ಸಮಾವೇಶದ ಪೂರ್ವಭಾವಿ ಸಭೆ

ಪತ್ರಕರ್ತರಿಂದ ಬಂದ ಪ್ರಶ್ನೆಗೆ ಉತ್ತರಿಸುತ್ತಾ ಶಂಕರಾರೂಢ ಸ್ವಾಮೀಜಿ ಬಬಲೇಶ್ವರದಲ್ಲಿ ಸಮಾವೇಶ ನಡೆಸಲು ಬಹಳ ದಿನಗಳಿಂದ ಆಲೋಚನೆಯಿತ್ತು. “ಇದು ಕನ್ನೇರಿ ಸ್ವಾಮಿ ಪರವೂ ಅಲ್ಲ, ಸಚಿವ ಎಂ ಬಿ ಪಾಟೀಲ್ ವಿರುದ್ಧ ಶಕ್ತಿ ಪ್ರದರ್ಶನವೂ ಅಲ್ಲ,” ಎಂದು ಹೇಳಿದರು.

ಆದರೆ ಅಕ್ಟೋಬರ್ ತಿಂಗಳಲ್ಲಿ ಜಿಲ್ಲೆಯಿಂದ ಕನ್ನೇರಿ ಸ್ವಾಮಿಯ ನಿರ್ಬಂಧದ ವಿಚಾರವಾಗಿ ಮಾತನಾಡುತ್ತ ಶಾಸಕ ಬಸನ ಗೌಡ ಯತ್ನಾಳ್ ಬಬಲೇಶ್ವರದಲ್ಲಿ ಎಂ ಬಿ ಪಾಟೀಲ್ ವಿರುದ್ಧ ಸಮಾವೇಶ ನಡೆಸುವುದಾಗಿ ಸವಾಲ್ ಹಾಕಿದ್ದರು.

ನ್ಯಾಯಾಲಯದಲ್ಲಿ ಗೆದ್ದು ಭವ್ಯ ಮೆರವಣಿಗೆ ಮುಖಾಂತರ ವಿಜಯಪುರಕ್ಕೆ ಶ್ರೀಗಳನ್ನ ಕರೆ ತರುತ್ತೇವೆ. ಎಂ.ಬಿ.ಪಾಟೀಲರೇ ನೀವು ಸುಮ್ಮನೆ ಮುಖ, ತಿ* ಮುಚ್ಚಿಕೊಂಡು ಇರಬೇಕು ಅಷ್ಟೆ ಎಂದು ಬಾಯಿ ಹರಿಬಿಟ್ಟಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/ILsKluXiq8VG6CRftVzc2g

Share This Article
6 Comments
  • ಲಿಂಗಾಯತರನ್ನು ಮತ್ತೆ ಮೂರ್ಖರನ್ನು ಮಾಡಲು ಆರೆಸ್ಸೆಸ್ ಗ್ಯಾಂಗ್ ಬರುತ್ತಿದೆ

  • ಈಶ್ವರಪ್ಪನಂತವರು ಅಗಿಯೋ ಖೆಡ್ಡಾಕ್ಕೆ ಬೀಳುವಷ್ಟು ದಡ್ಡರೇ ಲಿಂಗಾಯತರು

    • ಲಿಂಗಾಯತ ಅಭಿಮಾನ ಇದ್ದಂತ ಯಾರೇ ಇರಲಿ ಇದು ತಿಳ್ಕೊಳ್ಬೇಕು ಬಸವಣ್ಣ ಸ್ಥಾಪಿಸಿದ್ದು ಲಿಂಗಾಯತ ಧರ್ಮ ಅದು ಎಲ್ಲಾ ಧರ್ಮದಂತೆ ಭಿನ್ನವಾಗಿದೆ, ಅದು ಹಿಂದೂ ಧರ್ಮದಿಂದ ಬೆರ್ಪಟ್ಟಿದೆ. ಯಾರ್ ಸಭೆ ಮಾಡೋರು ಹಿಂದೂ ಎಂದು ಮಾಡ್ಲಿ, ಆದರೆ ಅದಕ್ಕೆ ಲಿಂಗಾಯೆತಾ ಹಿಂದೂ ಸಮಾವೇಶ ಮಾಡುವದು ಅವರ ಕೆಟ್ಟ ಉದೇಶ, ಲಿಂಗಯೇತ ಧರ್ಮ ಹಾಳ್ ಮಾಡುವ ಉದೇಶವೆ ಬೇರೇನೂ ಅಲ್ಲ,

  • ಬಸವಣ್ಣನವರ ವಿಚಾರಗಳನ್ನು ತತ್ವಗಳನ್ನು ದಮನ ಮಾಡಲು ಈಶ್ವರಪ್ಪ ಯತ್ನಾಳ ಅಂತವರಿಂದ ಸಾಧ್ಯವಿಲ್ಲ

    • ರಾಜಕೀಯದಲ್ಲಿ ಧರ್ಮ ಸೇರಿಸಿ ಜನರ ದಿಕ್ಕು ತಪ್ಪಿಸುವ ಹುನ್ನಾರವಿದು. ಜನರು ಅಷ್ಟು ಮೂರ್ಖರಲ್ಲ. ಅದರಲ್ಲೂ ಲಿಂಗಾಯತ ಸಮೂದಾಯವನ್ನು ಛಿದ್ರ ಛಿದ್ರ ಮಾಡುವ ಹುನ್ನಾರಕ್ಕಾಗಿ ಪ್ರಯತ್ನ ನಡೆದಿದೆ. ಇಲ್ಲಿ ಏನೂ ಗೊತ್ತಿರದ ಕೆಲವು ಲಿಂಗಾಯತ ಸಮೂದಾಯಕ್ಕೆ ಬಸವಪರ ಮಠಾಧೀಶರು ತಿಳಿಹೇಳುವ ಅವಶ್ಯಕತೆ ಇದೆ. ಒಂಬೖನೂರು ವರ್ಷಗಳಿಂದ ಸಂಘರ್ಷ ನಡೆದರೂ ಬಸವಣ್ಣನವರ ತತ್ವವನ್ನು ಯಾರೂ ಅಲ್ಲಡಿಸಲಾಗಿಲ್ಲ ಇಂತಹ ಪುಟಗೋಸಿಗಳಿಗೆ ಏನೂ ಮಾಡಲು ಸಾಧ್ಯವಿಲ್ಲ!

  • ಬಸವಣ್ಣನವರ ಹೆಸರಿನ ದುರ್ಬಳಕೆ. ಇವರು ಪಶ್ಚಾತಾಪ ಪಡುತ್ತಾರೆ

Leave a Reply

Your email address will not be published. Required fields are marked *