ಇಡೀ ಹಿಂದೂ ಸಮಾಜದ ಕ್ಷಮೆ ಕೇಳಲು ಈಶ್ವರಪ್ಪರಿಂದಲೂ ಎಚ್ಚರಿಕೆ
ಬಬಲೇಶ್ವರ
ಮೊದಲು ಹಿಂದೂ ನಂತರ ಲಿಂಗಾಯತರು ಎಂದು ಹೇಳದಿದ್ದರೆ ಹಳ್ಳಿ ಹಳ್ಳಿಗೆ ಕಾಲಿಡಲು ಬಿಡುವುದಿಲ್ಲ ಎಂದು ಕಾಡಸಿದ್ದೇಶ್ವರ ಮಠದ ಕನ್ನೇರಿ ಸ್ವಾಮಿ ಸೋಮವಾರ ಲಿಂಗಾಯತ ಮಠಾಧೀಶರಿಗೆ ಹಾಗೂ ಬಸವ ಸಂಘಟನೆಗಳಿಗೆ ಎಚ್ಚರಿಕೆ ನೀಡಿದರು.
ಬಬಲೇಶ್ವರದಲ್ಲಿ ನಡೆದ ‘ಬಸವಾದಿ ಶರಣರ ಬೃಹತ್ ಹಿಂದೂ ಸಮಾವೇಶ’ದಲ್ಲಿ ಮಾತನಾಡುತ್ತ “ಅನೇಕ ಮಠಾಧೀಶರು ಈ ವಿವಾದ ಕಲ್ಲಿಸುವಂತೆ ಕೋರಿದ್ದಾರೆ. ಆದರೆ ಎಲ್ಲರಿಗೂ ಒಂದೇ ಮಾತು ಹೇಳಿರುವೆ. ನಾವು ಮೊದಲು ಹಿಂದೂ ನಂತರ ಲಿಂಗಾಯತರು ಎಂದು ಹೇಳಿ, ನಾನು ಇಲ್ಲಿಗೆ ಬಿಡುತ್ತೇನೆ, ಇಲ್ಲವಾದರೆ ಹಳ್ಳಿ ಹಳ್ಳಿಗೆ ನಿಮಗೆ ಕಾಲಿಡಲು ನಾನು ಬಿಡುವುದಿಲ್ಲ. ಜೊತೆಗೆ ವೀರಶೈವ ಲಿಂಗಾಯತ ಒಂದೇ ಎನ್ನಬೇಕು,” ಎಂದು ಹೇಳಿದರು.

“ಹೊಸ ಧರ್ಮ ಕಟ್ಟುವ ಮಾತು ಆಡುವವರು ಹೊಸ ಮಠ ಕಟ್ಟಿ, ಹಳೆ ಮಠ ಖಾಲಿ ಮಾಡಿ ಎಂದು ಭಕ್ತರು ಹೇಳಬೇಕು. ಅಂತವರು ಸನಾತನ ಧರ್ಮದ ಮಠ, ಲಿಂಗ, ಕಾವಿ, ರುದಾಕ್ಷಿ, ಮಂತ್ರ ಬಿಡಬೇಕು. ಆದರೆ ಕಾವಿ ಬಿಟ್ಟರೆ ನಿಮಗೆ ಊಟ ಸಿಗುವುದು ಕಷ್ಟವಾಗುತ್ತದೆ. ಸಮಾಜವನ್ನು ದಾರಿ ತಪ್ಪಿಸುವುದನ್ನು ಬಂದ್ ಮಾಡಿ, ಎಂದರು.
“ಕೆಲವರು ಬಸವಾದಿ ಶರಣರನ್ನು ಪೇಟೆಂಟ್ ಮಾಡಿಕೊಂಡಿದ್ದಾರೆ, ಬಸವಾದಿ ಶರಣರು ಯಾರ ಅಪ್ಪನ ಸ್ವತ್ತಲ್ಲ, ಬಸವಾದಿ ಶರಣರ ತತ್ವಗಳು ಹಿಂದೂ ಧರ್ಮದ ಭಾಗವೇ.
ತಲೆಗಡುಕ ಗ್ಯಾಂಗ್ ಬಸವಣ್ಣನವರನ್ನು ನಾಸ್ತಿಕರನ್ನಾಗಿ ಬಿಂಬಿಸುವ ಕಾರ್ಯ ಮಾಡುತ್ತಿರುವುದು ನೋವಿನ ಸಂಗತಿ.
ಬಸವಣ್ಣನವರು ಕರ್ಮ ಸಿದ್ಧಾಂತವನ್ನು ಬಹಳ ಚೆನ್ನಾಗಿ ಒಪ್ಪಿಕೊಂಡಿದ್ದರು, ಪೂರ್ವಜನ್ಮ, ಪುನರ್ ಜನ್ಮವನ್ನು ಒಪ್ಪಿಕೊಂಡಿದ್ದರು,” ಎಂದರು.
ಈ ಸಂದರ್ಭದಲ್ಲಿ ಕನ್ನೇರಿ ಸ್ವಾಮಿ ಬಸವಣ್ಣನವರ ‘ಸಂಚಿತ ಕರ್ಮ ಬಿಡದು, ಯಾವ ಲೋಕದಲ್ಲಿದ್ದರೂ ಕರ್ಮ ಬಿಡದು’ ವಚನದ ಸಾಲು ಉಲ್ಲೇಖಿಸಿದರು.

“ದೇವನೊಬ್ಬ ನಾಮ ಹಲವು ಎಂದು ಒಪ್ಪಿಕೊಳ್ಳುವವರು ಹಿಂದೂಗಳು, ಪುರುಷ ಸೂತ್ರದಲ್ಲಿ ಬರುವ ಮಾತುಗಳನ್ನೇ ಬಸವಣ್ಣನವರು ಹೇಳಿದ್ದಾರೆ, ಹೀಗಾಗಿ ಬಸವಾದಿ ಪ್ರಮಥರು ಸಹ ಹಿಂದೂಗಳೇ.
ಬಸವಾದಿ ಶರಣರನ್ನು ಕೆಲವರು ಪೇಟೆಂಟ್ ಮಾಡಿಕೊಂಡಿದ್ದಾರೆ. ಜನರಲ್ಲಿ ತಪ್ಪು ತಿಳಿವಳಿಕೆ ಮೂಡಿಸಿದ್ದಾರೆ. ಇದನ್ನು ಹೋಗಲಾಡಿಸಲು ಬಸವಾದಿ ಶರಣರ ಹಿಂದೂ ಸಮಾವೇಶ ಮಾಡಿದ್ದೇವೆ. ಬಸವಣ್ಣ ಯಾರ ಅಪ್ಪನ ಸ್ವತ್ತಲ್ಲ, ” ಎಂದರು.
“ನಾನು ಬಿಜಾಪುರ ಮಂದಿ. ಹೀಗಾಗಿ ಬಿಜಾಪುರ ಭಾಷೆಯಲ್ಲಿ ಮಾತನಾಡಿದ್ದೇನೆ, ನಾನು ಒಂದು ಬಾಂಬು ಒಗೆದಿರುವುದಕ್ಕೆ ಕೆಲವರಿಗೆ ಹಾರ್ಟ್ ಅಟಾಕ್ ಆಗಿದೆ,” ಎಂದರು.
ಈಶ್ವರಪ್ಪರಿಂದಲೂ ಎಚ್ಚರಿಕೆ
ಸಮಾವೇಶದಲ್ಲಿ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ “ಸಚಿವರೊಬ್ಬರು ಕನ್ನೇರಿ ಸ್ವಾಮಿಗೆ ಕ್ಷಮೆ ಕೇಳಲು ಹೇಳಿ ದೊಡ್ಡ ಅಪರಾಧ ಮಾಡಿದ್ದಾರೆ. ನೀವು ಇಡೀ ಹಿಂದೂ ಸಮಾಜದ ಕ್ಷಮೆ ಕೇಳಬೇಕು,” ಎಂದು ಆಗ್ರಹಿಸಿದರು.
“ಬಬಲೇಶ್ವರ ಜನ ಮುಂದಿನ ಚುನಾವಣೆಯಲ್ಲಿ ನಿಮಗೆ ಬುದ್ದಿ ಕಲಿಸುತ್ತಾರೆ. ಸಮಾವೇಶ ಬರೀ ಟ್ರೇಲರ್, ಮುಂದೆ ಪಿಕ್ಚರ್ ತೋರಿಸುತ್ತೇವೆ,” ಎಂದರು.
ಸಂಘ ಪರಿವಾರ ಬಲ ಪ್ರದರ್ಶನ
ಪ್ರವೇಶ ನಿರ್ಬಂಧ ತೆರವಾದ ಎರಡು ವಾರಗಳ ಬಳಿಕ ಜಿಲ್ಲೆಗೆ ಬಂದ ಕನ್ನೇರಿ ಸ್ವಾಮಿಯನ್ನು ನೂರಾರು ಸಾಧುಗಳು, ಸಾವಿರಾರು ಭಕ್ತರು ಸ್ವಾಗತಿಸಿದರು.
ಕನೇರಿ ಶ್ರೀಗಳಿಗೆ ಸ್ವಾಗತ ಕೋರುವ ಬ್ಯಾನರ್, ಕಟೌಟ್‌ಗಳು, ಸ್ವಾಗತ ಕಮಾನುಗಳು ಬಬಲೇಶ್ವರ ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ರಾರಾಜಿಸುತ್ತಿದ್ದವು.

ವಿಜಯಪುರದಿಂದ ಬಬಲೇಶ್ವರದ ವರೆಗೆ ನೂರಾರು ಯುವಕರು ಬೈಕ್ ರ‍್ಯಾಲಿ ನಡೆಸಿದರು. ಮಹಿಳೆಯರು ಪೂರ್ಣಕುಂಭ ಮೆರವಣಿಗೆ ಮೂಲಕ ಕನ್ನೇರಿ ಸ್ವಾಮಿಯನ್ನು ಬರಮಾಡಿಕೊಂಡರು.
ಜೈ ಶ್ರೀರಾಮ್, ಭಾರತ್ ಮಾತಾಕಿ ಜೈ ಘೋಷಣೆಗಳ ಜೊತೆಗೆ ಶಂಖ, ಕಹಳೆ ವಾದನ ಮೊಳಗಿತು.
ವಿಜಯಪುರ ಜಿಲ್ಲೆ ಸೇರಿದಂತೆ ನೆರೆಯ ಬಾಗಲಕೋಟೆ, ಬೆಳಗಾವಿ ಹಾಗೂ ಮಹಾರಾಷ್ಟ್ರದ ಕಡೆಯಿಂದಲೂ ಭಕ್ತರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಲಿಂಗಾಯತ ಪೂಜ್ಯರ ಭಾಷಣ ಪ್ರಸಾರ:
ನಿಜಗುಣಾನಂದ ಸ್ವಾಮೀಜಿ, ಸಾಣೆಹಳ್ಳಿ ಸ್ವಾಮೀಜಿ, ಭಾಲ್ಕಿ ಬಸವಲಿಂಗ ಪಟ್ಟದೇವರ ಹಿಂದೂ ಧರ್ಮ ವಿರೋಧಿಸಿ ಮಾಡಿರುವ ಹಳೆಯ ಭಾಷಣಗಳ ಧ್ವನಿ ಮುದ್ರಿಕೆಯನ್ನು ಸಮಾವೇಶದಲ್ಲಿ ಭಕ್ತರಿಗೆ ಕೇಳಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರು ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.
ಸಮಾವೇಶಕ್ಕೆ ಅಡಚಣೆ
ಬಿಜೆಪಿ ಮುಖಂಡ ವಿಜುಗೌಡ ಪಾಟೀಲ, ‘ಸಮಾವೇಶಕ್ಕೆ ಕೆಲವರು ಅಡ್ಡಿ ಪಡಿಸಲು ಯತ್ನಿಸಿದರು. ಯಾರೂ ಸ್ವಾಮೀಜಿಗಳು ಬರುವುದಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ಸ್ವಾಮೀಜಿಗಳು ಬರದಂತೆ ತಡೆಯಲಾಯಿತು. ಆದರೂ 50,000 ಜನ ಅಂಜದೇ ಬಂದಿದ್ದಾರೆ’ ಎಂದರು.
ಸಿಂದಗಿ ಸಾರಂಗಮಠದ ಸ್ವಾಮೀಜಿ, ಬಳ್ಳಾರಿ ಕಲ್ಯಾಣ ಮಠದ ಸ್ವಾಮೀಜಿ, ಬುರಾಣಪುರದ ಯೋಗೀಶ್ವರ ಮಾತಾ, ಶಿರೋಳದ ಶಂಕರಾರೂಢ ಸ್ವಾಮೀಜಿ, ಯಾದಗಿರಿ ಶೋಭುದೇಶ ಸ್ವಾಮೀಜಿ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಮುಖಂಡರಾದ ವಿಜುಗೌಡ ಪಾಟೀಲ, ಉಮೇಶ ಕೋಳಕೂರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮೊದಲಾದವರು ಉಪಸ್ಥಿತರಿದ್ದರು.

ಇದು ಮೆಂಟಲ್ ಕೇಸ್. ನಿಮ್ಹಾನ್ಸ್ ಸೇರಿಸಿದರೆ ಲೋಕಕಲ್ಯಾಣವಾಗುತ್ತದೆ
ಪಾಪ ಅವರ ಅನುಭವ ಎಲ್ಲರೂ ಅನುಭವಿಸಬೇಕೆಂಬ ಇಚ್ಚೆಯೋ ಅಥವ……
ನಿನ್ಯಾವಲೇ
ಎಲ್ಲಿಗೆ ಬಿಡಲ್ವಂತೆ ಲಿಂಗಾಯತರನ್ನ?
ಈಶ್ವರಪ್ಪ ನಾವು ಏನು ತಪ್ಪು ಮಾಡಿದ್ದೇವೆ ಎಂದು ಎಲ್ಲ ಹಿಂದೂಗಳ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ?
ಕರ್ಮ ಸಿದ್ದಾಂತವನ್ನ ಪಾಲಿಸುವ ಹಿಂದೂ ಧರ್ಮ ಹೇಗೆ ತಾನೆ ಕಾಯಕ ಸಿದ್ದಾಂತ ಪಾಲಿಸುವ ಲಿಂಗಾಯತ ಧರ್ಮದ ಮೂಲವಾಗುತ್ತದೆ?
ಸಮಸಮಾಜ X ಶ್ರೇಣೀಕೃತ ಜಾತಿ ವ್ಯವಸ್ಥೆ
ಕಾಯಕ X ಕರ್ಮ
ದಾಸೋಹ X ದಾನ
ಪುನರ್ಜನ್ಮವಿಲ್ಲ X ಪುನರ್ಜನ್ಮ
ಇವಿಷ್ಟೆ ಸಾಕು ನಮಗೂ ಮತ್ತು ಹಿಂದೂ ಆಚರಣೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಅರಿಯಲು.
ಕನ್ನ ಹಾಕುವ ಲಕ್ಷಣವಿರುವವರೆಲ್ಲ ಇವತ್ತು ನಮ್ಮನ್ನ ಆ ಸನಾತನ ಧರ್ಮದ ಗುಲಾಮರನ್ನಾಗಿ ಮಾಡಲು ಹಾವಿನಪುರದ ಚಡ್ಡಿಗಳಿಗೆ ಮಾತು ಕೊಟ್ಟಿರುವುದು ನಿಚ್ಚಳವಾಗಿ ಗೋಚರವಾಗುತ್ತಿದೆ.
ಸಮಸಮಾಜವನ್ನ ಕಟ್ಟೋಣ ಬರುವಿರ ಕನ್ನೇರಿಯವರೆ?
ಕನ್ನೇರಿ ಸ್ವಾಮಿ, ಈಶ್ವರಪ್ಪ ಇವರದ ಲಿಂಗಾಯತ ಧರ್ಮ, ಲಿಂಗಾಯತರು ಹಿಂದು ಎಂದು ಒತ್ತಾಹಿಸುವ ಹಾಗು ಹಳ್ಳಿಗಳ ಪ್ರವೇಶ ನಿದಿಸಲು ಇವರ್ಯಾರು. ಬಸವಣ್ಣ ನವರ ಅಚಾರ ವಿಚಾರ ಒಪ್ಪಿ ಪಾಲಿಸದ ಇವರೇಗೆ ಬಸವಾದಿ ಶರಣ? ಇವರ ನಡೆ ಇದೇರೀತಿ ಮುಂದುವರೆದರೆ ಇವರನ್ನೆ ಕರ್ನಾಟಕದೊಳಗೆ ಬಾರದಂತೆ ತಡೆಯುವಂತೆ ಸರ್ಕಾರ ಹಾಗೂ ಕಾನೂನು ಮೊರೆ ಹೋಗಬೇಕಾಗುತ್ತದೆ.
ವಿಕ್ರೃತ ಹಿಂದೂ ಧರ್ಮ ಅಭಿಮಾನ, ಸರ್ವಾಧಿಕಾರಿ ,ಅಹಂಕಾರದ ಬೆಂಕಿಯ ಮಾತುಗಳು ನಿನ್ನ ನಾಲಿಗೆಯನ್ನು ಸುಡುತ್ತದೆ. ಎಂಬ ಪರಿಜ್ಞಾನ ಇಲ್ಲದ ಈ ಅವಿವೇಕಿಗಳ
ಸೂಕ್ಕು ಅಡಗಿಸುವ ಶರಣರ ದಂಡು ಅಂಬಿಗರ ಚೌಡಯ್ಯನ ಮಾತಿನಂತೆ ಎಂಬ ಪಾದರಕ್ಷೆಯ ತೆಗೆದುಕೊಂಡು ಲಟಲಟನೆ ಪಟಪಟನೆ ಹೊಡೆಯುವ ಕಾಲ
ಬರುತಾವೋ ಎಂಬ ಶರಣರ ನುಡಿ ಸುಳ್ಳಾಗುವದಿಲ್ಲ
It was a BJP sponcerd Hindu programme
Frustrated few polticians including Bar and wine store owners started their election campaign pecksniffs can not be successful against Lingayats.
ಈ ಸ್ವಾಮೀಜಿ ರವರು ಮೊದಲು ಖಾವಿ ಬಿಟ್ಟು ಖಾದಿ ಹಾಕಿಕೊಳ್ಳುವುದು ಓಳ್ಳೇಯದು ಯಾರು ಯಾವ ಧರ್ಮ ಬೇಕಾದರೂ ಅನುಸರಿಸಬಹುದು ಹಾಗೂ ಸೇಪ೯ಡೆಯಾಗಬಹುದು ಮತ್ತು ಹೊಸ ಧರ್ಮ ವನ್ನು ಸ್ಥಾಪನೆ ಶಮಾಡಬಹುದು ಧರ್ಮ ಯಾರ ಅಪ್ಪನ ಮನೆ ಸ್ವತಲ್ಲ ಪ್ರಜಾಪ್ರಭುತ್ವ ಸಂವಿಧಾನ ದಲ್ಲಿ ಇದೆ ಮೊದಲು ಸಂವಿಧಾನ ವನ್ನು ಚೆನ್ನಾಗಿ ಓದಿಕೊಳ್ಳಿ ಅವಿವೇಕಿ ಮನುಷ್ಯ ರೇ
ಈ ಕನ್ನೇರಿ 👅 ಗೆ ಗೆ ಬುದ್ಧಿ ಭ್ರಮಮಣೆ ಆಗಿದೆ.ಇವನ ಸರ್ವಾಧಿಕಾರಿ ಧೋರಣೆ ಲಿಂಗಾಯತರಿಗೆ ಕಂಟಕ,ಅಂದರೆ ಇದರ ಹಿಂದೆ ಲಿಂಗಾಯತಕ್ಕೆ ಸಂಬಂಧ ಪಟ್ಟದ ಕೆಲವು ಪುಢಾರಿಗಳ ಸೇರಿಕೊಂಡು ಮತಿಗೇಡಿ ಸಮಾವೇಶ ಹಮ್ಮಿಕೊಂಡಿರುವುದು ವಿಪರ್ಯಾಸವೇ ಸರಿ.ಇಂಥಹ ಅಸಮಾನತೆಯನ್ನು ಮಾನವರ ಮೇಲೆ ಹೇರಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಹವಣಿಸುತ್ತಿದ್ದಾರೆ.ಈ ಮತಿಗೇಡಿ ಈಶ್ವರಪ್ಪ ಲಿಂಗಾಯತದ ಗಂಧ ಗೊತ್ತಿಲ್ಲದೇ ತನ್ನ ನಾಲಿಗೆಯನ್ನು ಹರಿ ಬಿಟ್ಟಿದ್ದಾನೆ.ಬಿಜೆಪಿ ಯಲ್ಲಿ ಇವನಿಗೆ ತಕ್ಕ ಶಾಸ್ತಿ ಆದರೂ ನಾಚಿಕೆ ಮಾನ ಮರ್ಯಾದೆ ಇಲ್ಲದವ.ಇಂಥವರಿಂಲೇ ಮುಂದೆ ಬಿಜೆಪಿಗೆನೇ ನಷ್ಟ, ಈ ತರಹದ ಅವಿವೇಕಿಗಳಿಂದ ಎಚ್ಚರ ಎಚ್ಚರ…