ಬೆಂಗಳೂರು
ಅಮ್ಮಾ …
ಅಜ್ಜ ನಡೆದನೆಂದು
ಅಪ್ಪನೂ ನಡೆದಿದ್ದಾನಂತೆ;
ನಾನೂ ನಡೆಯಬೇಕಂತೆ!
ಏಕೆಂದರೆ ಅಪ್ಪನ ಮಗನಲ್ಲವೆ ನಾನು?!
ಛೆ..!… ಕುಟ್ಟೆ ಹಿಡಿದ ಆಚಾರಕ್ಕೆಲ್ಲಾ
ಗೋಣು ಹಾಕುವ ದನವಾಗಿ …
ಹುಟ್ಟಿ … ಹುಟ್ಟಿಸಿ …
ಅರ್ಥವಿಲ್ಲದ ಸಂಪ್ರದಾಯದ
ಗೊಡ್ಡು ಕಷಾಯ ಕುಡಿದು
ರೋಗಿಯಾಗಿ ಸಾಯಬೇಕೇಕೆ?
ಅಮ್ಮಾ ….
ನನಗನಿಸುತ್ತಿದೆ…
ಅಜ್ಜ ಹಿಡಿದ ಸಂಪ್ರದಾಯದ ಬೆಲೂನಿಗೆ
ಅಪ್ಪನ ಆಚಾರ ವಿಚಾರಗಳ ಗಾಳಿ ತುಂಬಿ
ಪಟ್ಟಾಗಿ ಶಿವದಾರದ ಕಟ್ಹಾಕಿ…
ವಿಭೂತಿ ಬಳಿದು …
ಮೇಲೇರಬಿಟ್ಟರೆ…
ಅದೋ …ನೋಡಲ್ಲಿ …… ಬಸವನ ಕಂಡಂತೆ ..!!
ಮೈಮನವೆಲ್ಲಾ ಎಷ್ಟೋ …ಹಗುರಗೊ೦ಡಂತೆ !!
