ಉಳವಿ:
ಬಸವಾದಿ ಶರಣರ ಪರಮಪವಿತ್ರ ಸ್ಥಾನ ಹಾಗೂ ಷಟಸ್ಥಲ ಜ್ಞಾನಿ ಚೆನ್ನಬಸವಣ್ಣನವರ ಐಕ್ಯಸ್ಥಳವಾಗಿರುವ ಉಳವಿಯ ಶಿವಪುರದಲ್ಲಿ 2025ರ ಬಸವಯೋಗ ಅಧ್ಯಯನ ಶಿಬಿರ ಕಳೆದ ಡಿಸೆಂಬರ್ ಕೊನೆಯ ವಾರದಲ್ಲಿ ಯಶಸ್ವಿಯಾಗಿ ನಡೆಯಿತು.

ದಟ್ಟ ಅರಣ್ಯದ ನಡುವೆ ಇರುವ ಶಿವಪುರದ ಬಸವಧಾಮ ಆಶ್ರಮದಲ್ಲಿ ಪೂಜ್ಯ ಚೆನ್ನಬಸವಾನಂದ ಸ್ವಾಮೀಜಿ ಅವರು ಸಾನಿಧ್ಯ ವಹಿಸಿದ್ದರು. ‘ಆನ್ಲೈನ್ ವಚನ ಅಧ್ಯಯನ ಕೂಟ’ದ ಸಹಯೋಗದಲ್ಲಿ ಅದರ ಸದಸ್ಯರೊಂದಿಗೆ ಡಿಸೆಂಬರ್ 20ರಿಂದ 27ರವರೆಗೆ ಶಿಬಿರವನ್ನು ಆಯೋಜಿಸಲಾಗಿತ್ತು.

ಕಳೆದ 7 ವರ್ಷಗಳಿಂದ ಈ ಶಿಬಿರ ಆಯೋಜಿಸಲಾಗುತ್ತಿದ್ದು, ಪ್ರತಿವರ್ಷ ಬಸವಾದಿ ಶರಣರ ತಾತ್ವಿಕ ವಿಚಾರಗಳನ್ನು ಅಧ್ಯಯನದ ವಸ್ತುವಾಗಿಟ್ಟುಕೊಂಡು ಬರಲಾಗಿದೆ. “ಅಷ್ಟಾವರಣಗಳ ವಿಸ್ತೃತ ಚಿಂತನ” ಎಂಬ ವಿಷಯದ ಮೇಲೆ 7 ನೇ ವರ್ಷದ ಶಿಬಿರ ಮಾಡಲಾಯಿತು.

ಅನುಭಾವಿಗಳಾದ ಭಾರತಿ ಕೆಂಪಯ್ಯ ಚಿಂತನ ಉಪನ್ಯಾಸ ನೀಡಿದರು. ಅಲ್ಲದೆ ವಿಷಯಾಧಾರಿತ ತಾತ್ವಿಕ ಚರ್ಚೆಗಳು ನಡೆದವು. ಪೂಜ್ಯ ಬಸವದೇವರು, ಕಿರಣ ಬೆಲ್ಲದ ಹಾಗೂ ಆನ್ಲೈನ್ ಅಧ್ಯಯನ ಕೂಟದ ಸರ್ವ ಸದಸ್ಯರು ಶಿಬಿರದಲ್ಲಿ ಸಹಭಾಗಿಗಳಾಗಿದ್ದರು.

ಶರಣು ಶರಣಾರ್ಥಿಗಳು 🙏🙏🌺
Youths and children need to be given priority . Atleast during holidays convenient to the children and youth such functions must be arranged .