ಆಳಂದ :
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು ಕೇಂದ್ರ ಘಟಕ ಹಾಸನ ವತಿಯಿಂದ ಕಲಬುರಗಿ ಜಿಲ್ಲೆಯ ಆಳಂದ ಶ್ರೀ ತೋಂಟದಾರ್ಯ ಅನುಭವ ಮಂಟಪದಲ್ಲಿ ೨೦೨೬ ಜನವರಿ ೧೧, ಭಾನುವಾರ ಹಮ್ಮಿಕೊಂಡಿರುವ “ಅಖಿಲ ಕರ್ನಾಟಕ ದ್ವಿತೀಯ ಶರಣ ಸಾಹಿತ್ಯ ಸಮ್ಮೇಳನದ”ಸರ್ವಾಧ್ಯಕ್ಷರನ್ನಾಗಿ ಇಳಕಲ್ಲ-ಚಿತ್ತರಗಿ ಶ್ರೀವಿಜಯ ಮಹಾಂತೇಶ್ವರ ಸಂಸ್ಥಾನಮಠದ ಪೂಜ್ಯ ಗುರುಮಹಾಂತ ಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಬಸವ ತತ್ತ್ವ ಪ್ರಸಾರದಲ್ಲಿ ಮಹತ್ವದ ಕೈಂಕರ್ಯ ಮಾಡುತ್ತಾ ಬಂದಿರುವ ಇಲಕಲ್ ಶ್ರೀಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಶ್ರೀ ತೋಂಟದಾರ್ಯ ಅನುಭವ ಮಂಟಪ ಆಳಂದ ಶ್ರೀ ಕೋರಣೇಶ್ವರ ಸ್ವಾಮೀಜಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷರು ಹಾಗೂ ಖ್ಯಾತ ಬಸವವಾದಿ ಶ್ರೀ ರಂಜಾನ್ ದರ್ಗಾ, ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ಕೇಂದ್ರ ಸಮಿತಿಯ ಟ್ರಸ್ಟಿಗಳಾದ ಪಿ. ದಿವಾಕರ ನಾರಾಯಣ, ಎಚ್.ಎಸ್.ಬಸವರಾಜ್, ನಾಗರಾಜ ದೊಡ್ಡಮನಿ, ದೇಸು ಆಲೂರು, ವಾಸು ಸಮುದ್ರವಳ್ಳಿ, ಸಾಹಿತಿ ಡಾ. ಎಚ್.ಕೆ. ಹಸೀನಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
