ನಂಜನಗೂಡು:
ತಾಲೂಕಿನ ಹಲ್ಲರೆ ಗ್ರಾಮದ ಬಸವತತ್ವ ಪ್ರಚಾರಕರು, ಜಾನಪದ ಕಲಾವಿದರಾದ ಶಿವಬುದ್ದಿ ಅವರನ್ನು 2025ನೇ ಸಾಲಿನ ಕರ್ನಾಟಕ ಬಯಲಾಟ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ. ಕೆ. ದುರ್ಗಾದಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ಷಿಕ ಪ್ರಶಸ್ತಿ ₹25 ಸಾವಿರ ನಗದು ಪುರಸ್ಕಾರದೊಂದಿಗೆ ನೆನಪಿನ ಕಾಣಿಕೆ ನೀಡಲಾಗುವುದು. ಹಲ್ಲರೆ ಶಿವಬುದ್ದಿಯವರು ಸೂತ್ರದ ಬೊಂಬೆಯಾಟ ಕ್ಷೇತ್ರದಲ್ಲಿ

ಸ್ವಂತ ತಂಡವನ್ನು ಕಟ್ಟಿಕೊಂಡು 40 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆಯನ್ನು ಗುರುತಿಸಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಧಾರವಾಡದಲ್ಲಿ ಫೆಬ್ರವರಿ ಮೊದಲ ವಾರ ನಡೆಯಲಿರುವ ಸಮಾರಂಭದಲ್ಲಿ ಹಲ್ಲರೆ ಶಿವಬುದ್ದಿಯವರನ್ನು ಗೌರವಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ದುರ್ಗಾದಾಸ್ ತಿಳಿಸಿದ್ದಾರೆ.
