ಮಾತಾಜಿ ಚಿಂತನೆ ಉಳಿಸಿ ಬೆಳಸಲು ಚನ್ನಬಸವಾನಂದ ಸ್ವಾಮೀಜಿ ಕರೆ

ಬಸವ ಮೀಡಿಯಾ
ಬಸವ ಮೀಡಿಯಾ

ಹುನಗುಂದ

ಧರ್ಮಗ್ರಂಥವನ್ನು ಮಾತಾಜಿ ಬರೆದು ಇಟ್ಟಿದ್ದಾರೆ.ಅದನ್ನು ಬಿಡುಗಡೆ ಮಾಡಬೇಕು ಎಂಬುದು ನಮ್ಮ ಆಶಯ. ವಚನ ಸಾಹಿತ್ಯದಲ್ಲಿ ಅನೇಕ ಸಂಶೋಧನೆಗಳನ್ನು ಮಾಡಿದ್ದಾರೆ. ಅದನ್ನು ಉಳಿಸಿ ಬೆಳಸಬೇಕು ಎಂದು ಹೇಳಿದರು.

ಮಂಗಳವಾರ ತಾಲ್ಲೂಕಿನ ಕೂಡಲಸಂಗಮ ಕ್ರಾಸ್ ಹತ್ತಿರ ಹೂವನೂರು ಗ್ರಾಮದಲ್ಲಿ ಬಸವಾತ್ಮಜೆ ವೇದಿಕೆಯಲ್ಲಿ ಆಯೋಜಿಸಿದ್ದ ಸ್ವಾಭಿಮಾನಿ ಶರಣ ಮೇಳ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಪೂಜ್ಯ ಚನ್ನಬಸವಾನಂದ ಸ್ವಾಮೀಜಿ ಅವರು ಮಾತನಾಡಿದರು.

ಸ್ವಾಭಿಮಾನಿ ಶರಣ ಮೇಳ ಉದ್ಘಾಟಿಸಿದ ಚಿಕ್ಕಮಗಳೂರಿನ ವಿಶ್ವಧರ್ಮ ಪೀಠದ ಜಯಬಸವಾನಂದ ಸ್ವಾಮೀಜಿ ಮಾತನಾಡಿ, ಚನ್ನಬಸವಾನಂದ ಸ್ವಾಮೀಜಿ ವಿಶ್ವದಾದ್ಯಂತ ಬಸವ ತತ್ವ ಪ್ರಚಾರ ಮಾಡುತ್ತಿದ್ದಾರೆ. ಹತ್ತಾರೂ ದೇಶಗಳಿಗೆ ಹೋಗಿ ಸ್ಥಳೀಯರನ್ನು ಕೂಡಿಸಿ ಲಿಂಗಾಯತ ಧರ್ಮದ ದೀಕ್ಷೆ ನೀಡಿದ್ದಾರೆ. ಶರಣ ಮೇಳಗಳು ಶರಣರ ಆಧ್ಯಾತ್ಮ ಸಂತೆ ಇದ್ದಂತೆ. ಬಸವಣ್ಣನವರ ತತ್ವ ಸಿದ್ಧಾಂತಗಳಿಗೆ ಕೊನೆ ಎಂಬುದಿಲ್ಲ ಎಂದರು.

ಬೀದರ ಬಸವ ಮಂಟಪದ ಮಾತೆ ಸತ್ಯಾದೇವಿ ಮಾತನಾಡಿ, ನಿಜವಾದ ಬಸವ ಮಾರ್ಗ ಸ್ವಾಭಿಮಾನಿ ಶರಣ ಮೇಳ. ನಾವು ನೀವೆಲ್ಲಾ ಸ್ವಪ್ರತಿಷ್ಠೆ ಮರೆತು ಬಸವ ತತ್ವ ಪ್ರಚಾರ ಮಾಡಿ ಲಿಂಗಾನಂದ ಅಪ್ಪಾಜಿ ಮತ್ತು ಮಾತಾಜಿ ಅವರ ಸಂಕಲ್ಪ ಪೂರೈಸೋಣ ಎಂದರು. ಸಿಂದಗಿ ಪ್ರಭು ಲಿಂಗ ಸ್ವಾಮೀಜಿ ಮಾತನಾಡಿದರು.

ತೆಲಂಗಾಣದ ಬಸವೇಶ್ವರ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು. ಬಸವಶ್ರೀ ಅಶೋಕ ಶೀಲವಂತ ದಂಪತಿ ಗುರುಬಸವ ಪೂಜೆ ನೆರವೇರಿಸಿದರು. ಚಿಕ್ಕಮಗಳೂರ ರಾಷ್ಟ್ರೀಯ ಬಸವ ದಳದ ಬಾಣೂರು ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು.

ಚಳ್ಳಕೆರೆ ಹಡಪದ ಅಪ್ಪಣ್ಣ ಮಹಾಮಠದ ಗುರು ಸ್ವಾಮೀಜಿ, ವಚನಶ್ರೀ ಮಾತಾಜಿ, ಲಿಂಗಾನಂದ ಸ್ವಾಮೀಜಿ, ಬೀದರ ಶಿವರಾಜ ಪಾಟೀಲ ಅತಿವಾಳ, ಬಸವಂತಪ್ಪ ಬಿರಾದಾರ, ರವಿಕಾಂತ ಬಿರಾದಾರ ಇದ್ದರು. ಅಶೋಕ ಬೆಂಡಿಗೇರಿ ಸ್ವಾಗತಿಸಿದರು. ಜಗದೇವಿ ಚಟ್ಟಿ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
Leave a comment

Leave a Reply

Your email address will not be published. Required fields are marked *