“ಹದ ಮಣ್ಣಲ್ಲದೆ ಮಡಕೆಯಾಗಲಾರದು.” ಅನುಭಾವ : ದೇವನೂರು ಪ್ರಶಾಂತಣ್ಣ

ಬಸವ ಮೀಡಿಯಾ
ಬಸವ ಮೀಡಿಯಾ

ನಂಜನಗೂಡು

ಫ.ಗು.ಹಳಕಟ್ಟಿ ನಗರದಲ್ಲಿ ಬಸವ ಮಾಸ ಸಮಿತಿ ವತಿಯಿಂದ ನಡೆಯುತ್ತಿರುವ ಬಸವಾದಿ ಶರಣರ ಕುರಿತಾದ ಜೀವನ ಮೌಲ್ಯ ಅನುಭಾವದ 27 ನೇ ಚಿಂತನದಲ್ಲಿ ಶರಣ ಚಿಂತಕರು, ಕೃಷಿಕರು, ಭಜನ ಕಲಾವೀದರಾದ ದೇವನೂರು ಪ್ರಶಾಂತಣ್ಣನವರಿಂದ ಕಾಯಕ ಶರಣರಾದ ಕುಂಬಾರ ಗುಂಡಯ್ಯ ಮತ್ತು ಅವರ ಮಡದಿ ಕೇತಲದೇವಿ ಹಾಗೂ ಹಡಪದ ಅಪ್ಪಣ್ಣನವರ ಜೀವನ ಮೌಲ್ಯ ಕುರಿತು ಅನುಭಾವ ನಡೆಯಿತು.

ಕುಂಬಾರ ಗುಂಡಯ್ಯನವರು ತಮ್ಮ ಕಾಯಕದಲ್ಲಿ ತೃಪ್ತಿ ಜೀವನ ನಡೆಸಿದವರು, ಅವರಂತೆಯೇ ಕೇತಲದೇವಿಯವರು ಸಹ ಸತಿಪತಿಗಳೊಂದಾದ ಭಕ್ತಿ ಹಿತವಾಗಿರ್ಪುದು ಶಿವಂಗೆ ಎಂಬಂತೆ ಬದುಕು ನಡೆಸಿದ ದಾಂಪತ್ಯ ಅವರುಗಳದಾಗಿತ್ತು ಎಂದರು. ಕಾಯಕದಲ್ಲಾಗಲಿ, ಆಧ್ಯಾತ್ಮಿಕ ಭಕ್ತಿಯಲ್ಲಾಗಲಿ ನಿಷ್ಠೆ ಇರಲೇಬೇಕು ಎಂಬುದು ಕೇತಲದೇವಿಯವರ ಕಟ್ಟುನಿಟ್ಟಿನ ಮಾತಾಗಿತ್ತು ಅದಕ್ಕೆ ಉದಾಹರಣೆ-
“ಹದ ಮಣ್ಣಲ್ಲದೆ ಮಡಕೆಯಾಗಲಾರದು.” ಈ ವಚನದಂತೆ ಶರಣರು ಮಾತಿನಲ್ಲಿ ನಿಷ್ಠೆ ತೋರಿ ಬದುಕಿದ್ದು ನಾವು ಕೂಡಾ ಶರಣರಂತೆ ಇಷ್ಟಲಿಂಗದ ಮೇಲೆ ನಂಬಿಕೆ ಇಟ್ಟು ಶ್ರದ್ಧಾ, ಭಕ್ತಿ, ನಿಷ್ಠೆಯಿಂದ ಬದುಕಲು ಸಾಧ್ಯವಿದೆ ಎಂದರು. ಮತ್ತು ಆಗ ಇದ್ದ ಸೂರ್ಯ, ಚಂದ್ರ, ಭೂಮಿ, ಗಾಳಿ, ನೀರು, ಪ್ರಕೃತಿಯು ಈಗಲೂ ಕೂಡಾ ಅದೇ ರೀತಿ ಇದೆ ಆದ್ದರಿಂದ ಎಲ್ಲಾ ಕಾಲಘಟ್ಟದಲ್ಲಿಯೂ ಶರಣರ ವಚನಗಳು ಹೊಂದಿಕೆಯಾಗಬಲ್ಲ ತತ್ವಸಿದ್ದಾಂತಗಳಾಗಿವೆ ಎಂದರು.

ಶರಣರಾದ ಗುಂಡಯ್ಯ ಮತ್ತು ಕೇತಲದೇವಿಯವರ ಹಾಗೂ ಹಡಪದ ಅಪ್ಪಣ್ಣನವರ ಬಗ್ಗೆ ಬಸವ ಪುರಾಣಗಳಲ್ಲಿ ಉಲ್ಲೇಖವಾಗಿವೆ ಎಂದರು.

ಅನುಭಾವ ನೀಡಿದ ಪ್ರಶಾಂತಣ್ಣನವರಿಗೆ ಬಸವ ಮಾಸ ಸಮಿತಿಯ ವತಿಯಿಂದ ಬಸವಣ್ಣನವರ ಭಾವಚಿತ್ರ ನೀಡಿ ಗೌರವ ಸಮರ್ಪಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ನೀಲಕಂಠಪ್ಪ ನಿರೂಪಣೆ ಮಾಡಿದರು. ಪ್ರಮೀಳಾ ಮಹಾದೇವಸ್ವಾಮಿ ಪ್ರಾರ್ಥಸಿದರು. ನಂದೀಶ್ವರ ಸ್ವಾಗಟಿಸಿದರು. ಸುರೇಶ ಹಂಗಳಪುರ ವಂದಿಸಿದರು. ಯಶಸ್ವಿನಿ ವಚನ ಮಂಗಳ ಮಾಡಿದರು. ದಾಸೋಹಿವನ್ನು ಶ್ರಿ ನಿಂಗಪ್ಪ ಹಾಗೂ ಕೈಲಾಸ್ ಮೂರ್ತಿ ಕುಟುಂಬ ವರ್ಗ ಕಿರಾಳು ನೆರೆವೇರಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
Leave a comment

Leave a Reply

Your email address will not be published. Required fields are marked *