“ಬಸವಣ್ಣ ಕೊಟ್ಟ ಈಶ್ವರ ಲಿಂಗವನ್ನು ಪೂಜಿಸಬೇಡಿ ಅಂತ ಹೇಳಿದರು, ಮೂಲೆಗೆ ಎಸೆಯಿರಿ ಅಂತ ಹೇಳಿದರು.”
ಶಿವಮೊಗ್ಗ
“ಲಿಂಗಾಯತ ಸಭೆಯಲ್ಲಿ ಈಶ್ವರಪ್ಪನವರಿಗೆ ಏನು ಕೆಲಸ ಅಂತ ಕೆಲವರು ಕೇಳುತ್ತಿದ್ದಾರೆ. ಅಂತವರು ಲಿಂಗಾಯತರಾಗಲು ಯೋಗ್ಯರಲ್ಲ. ಜಗಜ್ಯೋತಿ ಬಸವೇಶ್ವರರರು ಎಲ್ಲಾ ಸಮುದಾಯಗಳನ್ನು ಒಂದುಗೂಡಿಸಿದರು,” ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ. ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಜನವರಿ 13 ನಡೆದ ‘ಶಿವ ಸಂಕಲ್ಪ – ವೀರಶೈವ ಲಿಂಗಾಯತ ಒಕ್ಕೂಟ’ದ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
‘ಶಿವ ಸಂಕಲ್ಪ ಒಕ್ಕೂಟ’ ವೀರಶೈವ ಮತ್ತು ಲಿಂಗಾಯತ ಸಮಾಜಗಳನ್ನು ಹಿಂದುತ್ವದ ಚೌಕಟ್ಟಿನಲ್ಲಿ ಒಂದುಗೂಡಿಸಲು ಜನ್ಮತಾಳಿರುವ ಸಂಘ ಪರಿವಾರದ ಹೊಸ ವೇದಿಕೆ.
‘ಲಿಂಗ ಮೂಲೆಗೆ ಎಸೆಯಿರಿ’
“ಕೆಲವರು ಲಿಂಗಾಯತ ಸ್ವಾಮೀಜಿಗಳು ಸಮಾಜ ಒಡೆಯುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಎಲ್ಲಾ ಸ್ವಾಮೀಜಿಗಳನ್ನು ಕೆಟ್ಟದಾಗಿ ಬೈಯುವ ಅವಶ್ಯಕತೆಯಿಲ್ಲ. ಗೊಂದಲ ಶುರುವಾಗಿದ್ದು ಜಾತಿ ಗಣತಿಯ ಸಂದರ್ಭದಲ್ಲಿ. ಆಗ ಅನೇಕರು ಹಿಂದೂ ಬರೆಸಬೇಡಿ ಅಂತಾ ಕರೆ ಕೊಟ್ಟರು. ಬಸವಣ್ಣ ಕೊಟ್ಟ ಈಶ್ವರ ಲಿಂಗವನ್ನು ಪೂಜಿಸಬೇಡಿ ಅಂತ ಹೇಳಿದರು, ಮೂಲೆಗೆ ಎಸೆಯಿರಿ ಅಂತ ಹೇಳಿದರು.
ಅದನ್ನೆಲ್ಲಾ ನೋಡಿ ನಾನು ಸುಮ್ಮನೆ ಕೂರಲು ಆಗುವುದಿಲ್ಲ. ಅದಕ್ಕೆ ‘ಶಿವ ಸಂಕಲ್ಪ ಒಕ್ಕೂಟ’ಕ್ಕೆ ಬೆಂಬಲವಾಗಿ ಬಂದಿದ್ದೇನೆ. ನಾವೆಲ್ಲರೂ ಒಂದೇ ಎನ್ನುವ ಭಾವನೆ ‘ಶಿವ ಸಂಕಲ್ಪ’ ಮೂಡಿಸಲಿದೆ,” ಎಂದು ಈಶ್ವರಪ್ಪ ಹೇಳಿದರು.
ಈಶ್ವರಪ್ಪ ಕುರುಬರಲ್ಲ, ವೀರಶೈವರು
ಜಿಲ್ಲಾ ಪಂಚಮಸಾಲಿ ಸಂಘದ ಮಾಜಿ ಅಧ್ಯಕ್ಷ ಎಚ್ ವಿ ಮಹೇಶ್ವರಪ್ಪ ಮಾತನಾಡಿ “ಈಶ್ವರಪ್ಪನವರ ಕಾರ್ಯಕ್ರಮಕ್ಕೆ ಹೋಗಬೇಡಿ ಅಂತ ಕೆಲವರು ವಿರೋಧ ಮಾಡಿದರು. ಆದರೆ ನಾನು ಈಶ್ವರಪ್ಪ ಕುರುಬರಲ್ಲ ಮೊದಲಿನಿಂದಲೂ ವೀರಶೈವರೇ, ಯಾಕಂದರೆ ವೀರಶೈವರಿಗೆ ಬೇಕಾದಷ್ಟು ಸಹಾಯ ಮಾಡಿದ್ದಾರೆ ಎಂದು ಅವರಿಗೆ ಬುದ್ದಿ ಹೇಳಿದೆ,” ಎಂದರು.

ಸಮಾಜವನ್ನು ಒಡೆಯಬೇಡಿ: ಕಾಂತೇಶ್
ಕಾರ್ಯಕ್ರಮದಲ್ಲಿ ಭಾಗವಹಿಸಿದ ಈಶ್ವರಪ್ಪನವರ ಮಗ ಹಾಗೂ ಉದಯೋನ್ಮಖ ರಾಜಕಾರಣಿ ಕಾಂತೇಶ್ “ಇಡೀ ವಿಶ್ವದಲ್ಲಿ ಹಿಂದುಗಳಿಗೆ ಇರುವುದು ಒಂದೇ ರಾಷ್ಟ್ರ ಭಾರತ. ಆದರೆ ದೇಶವನ್ನು, ಸಮಾಜವನ್ನು ಒಡೆಯುವಂತಹ ಕೆಲಸ ಅನೇಕರಿಂದ ದಿನಾ ನಡೆಯುತ್ತಿದೆ.
ಇಂತಹ ಸಂದರ್ಭದಲ್ಲಿ ವೀರಶೈವ, ಲಿಂಗಾಯತರನ್ನು ಒಗ್ಗೂಡಿಸಿ ಹಿಂದೂ ರಾಷ್ಟ್ರವನ್ನು ಉಳಿಸುವ ಕೆಲಸ ‘ಶಿವ ಸಂಕಲ್ಪ’ ಮಾಡಬೇಕು. ಹಲವಾರು ಪೂಜ್ಯರನ್ನು ಕರೆಸಿ ಅವರ ಪ್ರವಚನ ಏರ್ಪಡಿಸುವುದರ ಜೊತೆಗೆ ನಿರುದ್ಯೋಗ, ಶಿಕ್ಷಣ, ಅರೋಗ್ಯ ಕ್ಷೇತ್ರಗಳಲ್ಲಿಯೂ ‘ಶಿವ ಸಂಕಲ್ಪ’ ಕೆಲಸ ಮಾಡಲಿ,” ಎಂದು ಕರೆ ಕೊಟ್ಟರು.

‘ಶಿವಸಂಕಲ್ಪ’ದ ಬೆನ್ನೆಲುಬು ಈಶ್ವರಪ್ಪ
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಮೂರು ಸಾವಿರ ಮಠದ ರಾಜಯೋಗೀಂದ್ರ ಸ್ವಾಮೀಜಿ ಸಿದ್ದಾಂತ ಶಿಖಾಮಣಿಯ ಶ್ಲೋಕದಿಂದ ತಮ್ಮ ಭಾಷಣ ಶುರುಮಾಡಿ ವೀರಶೈವರು, ಲಿಂಗಾಯತರು ಒಂದೇ ಎಂದು ಪ್ರತಿಪಾದಿಸಿದರು.
“ವೀರಶೈವರು ಲಿಂಗಾಯತರು ಮಾತ್ರವಲ್ಲ, ಇಡೀ ಭಾರತದ ಹಿಂದೂ ಸಮಾಜ ಒಂದಾಗಿ ಬದುಕಬೇಕು. ವೀರಶೈವರನ್ನು ಲಿಂಗಾಯತರನ್ನು ಒಂದುಗೂಡಿಸಲು ಬಂದಿರುವ ‘ಶಿವಸಂಕಲ್ಪ’ದ ಬೆನ್ನೆಲುಬಾಗಿ ಈಶ್ವರಪ್ಪ ಇದ್ದಾರೆ.
ಶಿವಮೊಗ್ಗದಲ್ಲಿರುವ ಎಲ್ಲಾ ದೇವಸ್ಥಾನಗಳ ಜೀರ್ಣೋದ್ದಾರ ಮಾಡಿರುವ ಶ್ರೇಷ್ಠ ಹಿಂದೂ ಈಶ್ವರಪ್ಪ,” ಎಂದು ಹೇಳಿದರು.

‘ಶಿವ ಸಂಕಲ್ಪ’ ಯುವ ಪಡೆ
ಶಿವ ಸಂಕಲ್ಪ ಒಕ್ಕೂಟದ ಮಹಾಪೋಷಕ ವೇದಮೂರ್ತಿ ಮಹಾಲಿಂಗಯ್ಯ ಶಾಸ್ತ್ರೀ ಪ್ರಾಸ್ತಾವಿಕ ನುಡಿಗಳನ್ನಾಡಿ,
ಜಾತಿ ಗಣತಿ, ಬಸವ ಸಂಸ್ಕೃತಿ ಅಭಿಯಾನಗಳಂತಹ ವಿದ್ಯಮಾನಗಳಿಗೆ ಪ್ರತಿಕ್ರಿಯೆ ನೀಡಲು ಹೊಸ ಸಂಘಟನೆಯ ಅಗತ್ಯವಿತ್ತು ಎಂದು ಸೂಚಿಸಿದರು.
“ಒಬ್ಬೊಬ್ಬ ಸ್ವಾಮೀಜಿ, ರಾಜಕಾರಣಿಗಳಿಂದಲೂ ಒಂದೊಂದು ಹೇಳಿಕೆ ಬಂದು ಸಮಾಜದಲ್ಲಿ ಗೊಂದಲ ಮೂಡುತ್ತಿದೆ.
ಇದರ ಬಗ್ಗೆ ಜಾಗೃತಿ ಮೂಡಿಸಿ, ಒಳ ಪಂಗಡಗಳ ಒಗ್ಗೊಡಿಸಿ, ಜಾತಿ ನಿಂದನೆ ತಡೆಯಲು ನಿಸ್ವಾರ್ಥ ಯುವಕರ ಪಡೆಯಾಗಿ ‘ಶಿವ ಸಂಕಲ್ಪ’ಬಂದಿದೆ. ಇದರಲ್ಲಿ ಗಾಣಿಗ ಪಂಚಮಸಾಲಿ, ಬಣಜಿಗ, ಜಂಗಮ, ಎಲ್ಲಾ ಸಮಾಜದವರೂ ಇದ್ದಾರೆ.
ಇದರ ಬಗ್ಗೆ ನಮ್ಮ ಆತ್ಮೀಯರಾದ ಈಶ್ವರಪ್ಪ ಅವರ ಜೊತೆ ಚರ್ಚೆ ಮಾಡಿದಾಗ ಅವರು ಬರಿ ಲಿಂಗಾಯತ, ವೀರಶೈವ ಅಂತ ಹೋಗಬೇಡಿ ಇಂದು ಹಿಂದೂಗಳಿಗೆ ಬಹಳ ಅನ್ಯಾಯವಾಗುತ್ತಿದೆ. ಅದಕ್ಕೆ ಹಿಂದುತ್ವ ಅಜೆಂಡಾ ಇಟ್ಟುಕೊಂಡು ಹೋಗಿ, ಲಿಂಗಾಯತ, ವೀರಶೈವ, ಹಿಂದುಗಳನ್ನು ಒಟ್ಟಿಗೆ ಮಾಡಿ ಎಂದು ಮಾರ್ಗದರ್ಶನ ಮಾಡಿದರು,” ಎಂದು ಹೇಳಿದರು.

ಕಾರ್ಯಕ್ರಮಕ್ಕೆ ವಿರೋಧ
ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಅಧ್ಯಕ್ಷ ಜ್ಯೋತಿಪ್ರಕಾಶ್ ರವರು ವಿರೋಧವಿದ್ದರೂ ತಾವು ಕಾರ್ಯಕ್ರಮಕ್ಕೆ ಬಂದಿರುವುದಾಗಿ ಹೇಳಿದರು.
“ಶಿವಮೊಗ್ಗದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದಲ್ಲಿ ನಾವು ವೀರಶೈವರೇ ಅಲ್ಲ ಅಂತ ಹೇಳಿದರು. ನಾವೇನು ಲಿಂಗ ಕಟ್ಟಿಕೊಂಡಿಲ್ವಾ. ಲಿಂಗ ಕಟ್ಟಿಕೊಳ್ಳಿ ಅಂತಲೇ ಬಸವಣ್ಣ ಮತ್ತು ಪಂಚಪೀಠದವರೂ ಹೇಳಿರುವುದು,” ಎಂದು ತಿಳಿಸಿದರು.
ಶಿವ ಸಂಕಲ್ಪ ಒಕ್ಕೂಟ ಅಧ್ಯಕ್ಷರು ಹಾಗೂ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಈ.ವಿಶ್ವಾಸ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

‘ಕನ್ನೇರಿ ಸ್ವಾಮಿಗಿಂತ ಕೆಟ್ಟ ಭಾಷೆ ಬಳಸುತ್ತಿದ್ದೆ’
ಬಸವ ಸಂಸ್ಕೃತಿ ಅಭಿಯಾನದ ನಂತರ ಭುಗಿಲೆದ್ದ ಬೆಳಗವಣಿಗೆಗಳಲ್ಲಿ ಕನ್ನೇರಿ ಸ್ವಾಮಿ ಪರ ನಿಂತ ಮೊದಲ ರಾಜಕಾರಣಿಯೆಂದರೆ ಈಶ್ವರಪ್ಪ. ತಮಗೆ ಬಂದಿರುವ ಸಿಟ್ಟಿನಲ್ಲಿ ಲಿಂಗಾಯತ ಸ್ವಾಮಿಗಳ ಮೇಲೆ ಕನ್ನೇರಿ ಸ್ವಾಮಿಗಿಂತ ಕೆಟ್ಟ ಭಾಷೆ ಬಳಸುತ್ತಿದ್ದೆ, ಎಂದು ಅವರು ಸುದ್ದಿಗೋಷ್ಠಿಯಲ್ಲಿ ಕೆಲವು ವಾರಗಳ ಹಿಂದೆ ಎಚ್ಚರಿಸಿದ್ದರು.
ಬಬಲೇಶ್ವರದಲ್ಲಿ ನಡೆದ ಬಸವ ಹೆಸರಿನ ಹಿಂದೂ ಸಮಾವೇಶವೂ ಸೇರಿದಂತೆ ಕನ್ನೇರಿ ಸ್ವಾಮಿ ಪರ ನಡೆದ ಹಲವಾರು ಕಾರ್ಯಕ್ರಮಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿಶ್ವಹಿಂದೂ ಪರಿಷತ್ ರಮೇಶ್ ಬಾಬು, ಸೋಮಶೇಖರ್, ಶ್ರೀಕಾಂತ್, ಲಿಂಗಮೂರ್ತಿ ಸೋಮಣ್ಣ,ಕೆಂಚಪ್ಪ,ರೇಣುಖರಾಥ್ಯ,ರತ್ನಮ್ಮ,ಲಿಂಗಪ್ಪ,ಉಮೇಶ್ಆರಾಥ್ಯ,ರಾಜಣ್ಣ,ಮುರಗೇಶ್,ರುದ್ರೇಶ್, ಲೋಕೇಶ್, ವಿಕ್ರಂ, ಸುನಂದ, ಆಶಾ ಚನ್ನಬಸಪ್ಪ, ವಿಶ್ವಾಸ್, ಎನ್.ಜೆ. ಚನ್ನೇಶ್, ಶಂಕುತಲ, ಜಗ್ಗದೀಶ್, ಗೌರಮ್ಮ, ಶ್ರೀಕಾಂತ್, ಚನ್ನಪ್ಪ, ಪ್ರೇಮಾ ವೀರಯ್ಯ ಉಪಸ್ಥಿತರಿದರು.

ಈಶ್ವರ ಲಿಂಗ ಅಲ್ಲಪ್ಪಾ ಈಶ್ವರಪ್ಪ, ಇಷ್ಟ ಲಿಂಗ ಅನ್ನು
ಯಾರು, ಎಲ್ಲಿ ಲಿಂಗ ಮೂಲೆಗೆ ಎಸಿ ಅಂತ ಹೇಳಿದ್ರು,
ಏನು ಸಂಚು ಇದು, ಯಾಕೀ ಸುಳ್ಳು
😊😊👌👌
👌👌👌👌
ಲೇ ಚೆಡ್ಡಿ ಡಿಬಾರ್ಡ್ ಪುಟಗೋಸಿ ನಿನ್ನ ಹಿಂದುತ್ವ ಯಾರಿಗೆ ಬೇಕು? ನಿನ್ನನ್ನ ನಿನ್ನ ಹಿಂದುತ್ವವನ್ನು ಬಸವ ತತ್ವದ ನೆಲೆಯಲ್ಲಿ ಇನ್ನಿಲ್ಲದಂತೆ ಮಾಡುವುದೇ ಲಿಂಗಾಯತರಾದ ನಾವು ಬಸವಾದಿ ಶರಣರಿಗೆ ಸಲ್ಲಿಸುವ ಗೌರವ! ಪಾಪ ನೀನು ಯತ್ನಾಳ ಎಷ್ಟೇ ಬಸವತತ್ಕದ ವಿರುದ್ಧ ಹಾರಾಡಿದ್ರೂ ನಾಗಪುರದ ದಾರದವರು ನಿಮಗೆ ಬಾಗಿಲ ತೆಗೆಯೋದು ಡೌಟು ಕಣೋ…ನೀನು ನಿಜಕ್ಕೂ basava ತತ್ವದ ಸಿದ್ಧರಾಮಯ್ಯ ಸಮಾಜಕ್ಕೂ ಲಾಯಕ್ಕಾದವನಲ್ಲ… ತಿಳೀತಾ ಕುರಿ?!
ಈಶ್ವರಪ್ಪ ಬಾಯಿ ತೆರೆದರೆ ಬರೆ ಸುಳ್ಳು ಹೆಳುವ ಅವಕಾಶವಾದಿ ಮನುಷ್ಯ ಈಶ್ವರ ಲಿಂಗ ಹಾಗೂ ಇಷ್ಟಲಿಂಗ ಯಾವುದಕ್ಕೆ ಅನ್ನುತ್ತಾರೆ ಎನ್ನುವುದೆ ಗೊತ್ತಿಲ್ಲ ಈ ಈಶ್ವರಪ್ಪನಿಗೆ
👌👌👌
ಈಶ್ವರಪ್ಪ ಇಷ್ಟಲಿಂಗದ ಬಗ್ಗೆ ಮತ್ತು ಬಸವಾದಿಶರಣರ ಆಶಯವೇನು ಎನ್ನುವುದನ್ನು ತಿಳಿದು ಮಾತನಾಡು. ನಿನ್ನ ಯೋಗ್ಯತೆ ತಿಳಿದೇ ನಿಮ್ಮ ಸಮಾಜ ಹಾಗು ಪಕ್ಷ ನಿನ್ನನ್ನು ಕಡೆಗಣಿಸಿರುವುದು..
👌👌👌
ಇದು ಲಿಂಗಾಯತರ ಸಂಸ್ಕೃತಿಯನ್ನು ಹಾಳು ಮಾಡಲು RSS ನವರ ಕುತಂತ್ರ.RSS ನವರಿಗೆ ಏಕೆ ಬೇಕು ನಮ್ಮ ಲಿಂಗಾಯತರ ಉಸಾಬರಿ.ಕೇವಲ ಲಿಂಗಾಯತ ಅಷ್ಟೇ .
12ನೇ ಶತಮಾನದಲ್ಲಿ ಇದೇ ಬ್ರಾಹ್ಮಣರೂ ಬಿಜ್ಜಳ ರಾಜನ ಕಿವಿಯೂದಿ ಶರಣರ ಮಾರಣಹೋಮ ನಡೆಸಿ ಸಿಕ್ಕ ಸಿಕ್ಕ ವಚನಗಳನ್ನು ಸುಟ್ಟಹಾಕಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ ಹೀಗಾ 21ಶತಮಾನದಲ್ಲಿ ಅದೇ ಬ್ರಾಹ್ಮಣ ಆರ್ ಎಸ್ ಎಸ್ ನವರು ಹೊಡೆದು ಆಳುವ ನೀತಿಗೆ ಬಂದಿದ್ದಾರೆ ಬರಲಿ ಮುಂದಿನ ಚುನಾವಣೆ ಯಲ್ಲಿ ಇವರನ್ನು ಮನೆಗೆ ಕಲಿಸಿಸುವ ಸಂಕಲ್ಪ ಮಾಡಬೇಕು
ಬಸವಣ್ಣ ಕೊಟ್ಟ ಈಶ್ವರ ಲಿಂಗವನ್ನು ಪೂಜಿಸಬೇಡಿ ಅಂತ ಹೇಳಿದರು, ಮೂಲೆಗೆ ಎಸೆಯಿರಿ ಅಂತ ಹೇಳಿದರು.”
ಅಬ್ಬಾ ಭಲೇ ಭೇಷ ! ಸುಳ್ಳನ್ನು ಸಾವಿರ ಸಲ ಹೇಳಿ ಜನರಿಗೆ ತಾವು ಹೇಳುತ್ತಿರುವುದು ಸತ್ಯ ಎಂದು ಬಿಂಬಿಸಿ ಕೊಳ್ಳುವ ಹುನ್ನಾರು ಬಿಟ್ಟರೆ, ಇದರಲ್ಲಿ ಮತ್ತೇನು ಹುರುಳಿಲ್ಲ.