ಗಂಗಾವತಿ:
ಐವತ್ತು ವಿದ್ಯಾರ್ಥಿಗಳಿಂದ ಪ್ರಾರಂಭವಾದ ಸಿದ್ಧಗಂಗಾಮಠ ಅಕ್ಷರ, ಅರಿವು, ಆಶ್ರಯದ ಕೈಂಕರ್ಯದಲ್ಲಿ ಇಂದು ಹತ್ತು ಸಾವಿರ ವಿದ್ಯಾರ್ಥಿಗಳನ್ನು ಹೊಂದಿದೆ ಎಂದರೆ ಅದಕ್ಕೆ ಡಾ. ಶಿವಕುಮಾರ ಸ್ವಾಮಿಗಳ ಕರ್ತುತ್ವ ಶಕ್ತಿಯಿಂದಲೇ ಸಾಧ್ಯ. ಅಂತಹ ಮಹಾತ್ಮರು ಜೀವಿಸಿದ್ದ ಪುಣ್ಯ ಭೂಮಿಯಲ್ಲಿ ನಾವುಗಳಿದ್ದೇವೆ ಎಂಬುದು ಅಭಿಮಾನದ ಸಂಗತಿ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಸ್ಥಳೀಯ ಬಸವಪರ ಸಂಘಟನೆಗಳು ಶ್ರೀ ಕೊಟ್ಟೂರು ಬಸವೇಶ್ವರ ದೇವಸ್ಥಾನದ ವೇದಿಕೆಯಲ್ಲಿ ಆಯೋಜಿಸಲಾದ ಡಾ. ಶಿವಕುಮಾರ ಸ್ವಾಮಿಗಳ 108ನೇ ಗುರುವಂದನಾ ಸಮಾರಂಭದಲ್ಲಿ ಮಾತನಾಡಿದರು.
ಪೂಜ್ಯರ ಪುಣ್ಯಸ್ಮರಣೆಯ ಜೊತೆಗೆ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಬಂದಿರುವುದು ನಮ್ಮ ಸೌಭಾಗ್ಯವೆಂದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಷ್ಟ್ರೀಯ ಬಸವದಳದ ಕಾರ್ಯದರ್ಶಿ ವೀರೇಶ ಅಸರಡ್ಡಿ ಮಾತನಾಡಿ, ಬಸವ ಜಯಂತಿಯನ್ನು ನಾಲ್ಕೈದು ವರ್ಷಗಳಿಂದ ಪ್ರವಚನದ ಮುಖಾಂತರ ಆಚರಿಸುತ್ತಿರುವುದು ಸಂತೋಷದ ಸoಗತಿ ಎಂದರು.
ಸಿನಿಮಾ ನಟರಾದ ವಿಷ್ಣುತೀರ್ಥ ಜೋಶಿ ಮತ್ತು ಚನ್ನಬಸವ ಕೊಟಗಿ, ಅರಳಿ ನಾಗಭೂಷಣ, ದಿಲೀಪಕುಮಾರ ವಂದಾಲ, ಕೆ. ಬಸವರಾಜ ಮತ್ತು ಕವಿತಾ ಮಹೇಶಕುಮಾರ ಪೂಜ್ಯರೊಂದಿಗಿನ ತಮ್ಮ ಅನುಭವ ಹoಚಿಕೊoಡರು.
ಬಸವ ಜಯಂತಿ ಆಚರಣೆ ಸಮಿತಿ – 2025ರ ಸರ್ವಾಧ್ಯಕ್ಷ ಗಾಳಿ ರುದ್ರಪ್ಪನವರು ಎಲ್ಲ ಸಮಾಜದವರೊಂದಿಗೆ ಬಸವ ಜಯಂತಿ ಆಚರಣೆಗೆ ಕರೆ ನೀಡಿದರು. ಸ್ನೇಹಬಳಗದ ಅಧ್ಯಕ್ಷರಾದ ಶಾಮಮೂರ್ತಿ ಐಲಿ, ಅಮರೇಗೌಡ, ವೀರಣ್ಣ ಅರಹುಣಸಿ, ಶರಬಣ್ಣ ಇತರರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದಲ್ಲಿ ವಿದ್ಯಾಭ್ಯಾಸ ಪೂರೈಸಿದ ಎ.ಕೆ. ಮಹೇಶಕುಮಾರ ಕಾರ್ಯಕ್ರಮ ನಿರೂಪಿಸಿದರು. ನಂತರ ಎಲ್ಲರೂ ದಾಸೋಹದೊಂದಿಗೆ ವಚನ ಮಂಗಲ ಮಾಡಿದರು.
