ಚಿಟಗುಪ್ಪಾ:
ತಾಲೂಕಿನ ಕೊಡಂಬಲ ಗ್ರಾಮದಲ್ಲಿ ಈಚೆಗೆ ಭೋವಿ-ವಡ್ಡರ ಸಮಾಜದ ವತಿಯಿಂದ ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರರ 854ನೇ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಿತು.

ಕಲ್ಯಾಣ ಮಹಾಮನೆ, ಗಣತೀರ್ಥವಾಡಿ ಬಸವಪ್ರಭು ಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡುತ್ತ, ಸಮಾಜದಲ್ಲಿ ನಡೆಯುತ್ತಿರುವ ಲೋಪ-ದೋಷ, ಅಂಕು-ಡೊಂಕುಗಳನ್ನು ತಿದ್ದಲು ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಅವರ ತತ್ವ, ಸಿದ್ಧಾಂತಗಳು ಮತ್ತು ಅವರ ವಚನಗಳನ್ನು ಈ ರೀತಿ ವೇದಿಕೆ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಡಾ. ಸಿದ್ಧು ಪಾಟಿಲ, ಗ್ರಾಮ ಪಂಚಾಯತ ಅಧ್ಯಕ್ಷರು, ಪಂಚಾಯತ ಅಭಿವೃದ್ಧಿ ಅಧಿಕಾರಿ, ಭೋವಿ ವಡ್ಡರ ಸಮಾಜದ ಜಿಲ್ಲಾಧ್ಯಕ್ಷ ಹಣಮಂತ ಮಾಳಗಿಮನಿ, ಸಮಾಜದ ತಾಲ್ಲೂಕು ಅಧ್ಯಕ್ಷ ಲಕ್ಷ್ಮಣ ಭೋವಿ, ಹಣಮಂತ ಭೋವಿ, ಘಳಪ್ಪಾ ವಡೆಯರಾಜ, ಮಲ್ಲಿಕಾರ್ಜುನ ಪಾಟಿಲ ಹಾಗೂ ಗ್ರಾಮದ ಪ್ರಮುಖರು ಮತ್ತು ಭೋವಿ ವಡ್ಡರ ಸಮಾಜದ ಮುಖಂಡರು, ಯುವಕರು ತಾಯಂದಿರು ಉಪಸ್ಥಿತರಿದ್ದರು.

