ದೊಡ್ಡಮನಿ, ವಿಲಾಸವತಿ, ಸೋಮಶೇಖರ ಅವರಿಗೆ ಗುರುಬಸವ ಪುರಸ್ಕಾರ

ಬಸವ ಮೀಡಿಯಾ
ಬಸವ ಮೀಡಿಯಾ

ವಿಲಾಸವತಿ, ಡಾ. ದೊಡಮನಿ, ಡಾ. ಸೋಮಶೇಖರ ಆಯ್ಕೆ

ಬೀದರ:

ಈ ವರ್ಷದ ಗುರು ಬಸವ ಪುರಸ್ಕಾರಕ್ಕೆ ಹಿರಿಯ ಪರ್ತಕರ್ತ ಹಾಗೂ ಹರಳಯ್ಯ ಸಮಾಜದ ಮುಖಂಡರಾದ ಡಾ. ಮಾರ್ಕಂಡೇಯ ದೊಡ್ಡಮನಿ ಧಾರವಾಡ, ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಡಾ. ಸಿ. ಸೋಮಶೇಖರ ಅವರನ್ನು ಆಯ್ಕೆ ಮಾಡಲಾಗಿದೆ.

ಬಸವಗಿರಿಯಯಲ್ಲಿ ಪ್ರತಿವರ್ಷ ಆಚರಿಸಲಾಗುವ ವಚನ ವಿಜಯೋತ್ಸವದಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದು ಬಸವ ಸೇವಾ ಪ್ರತಿಷ್ಠಾನದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ತಿಳಿಸಿದ್ದಾರೆ.

ಸುಮಾರು ಮುಕ್ಕಾಲು ಶತಮಾನದಿಂದ ವಿವಿಧ ರಂಗದಲ್ಲಿ ಈ ಸಾಧಕರು ಸೇವೆ ಸಲ್ಲಿಸಿದ್ದಾರೆ, ಶರಣರ ಸಂಸ್ಕೃತಿಯನ್ನು ಮನೆ ಮನಕ್ಕೆ ತಲುಪಸಿಲು ದುಡಿದಿದ್ದಾರೆ. ಇವರ ಕಾರ್ಯಗಳು ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆಯುವಂತಾಗಿದ್ದು ಅವರ ಕಾರ್ಯದಕ್ಷತೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಶಸ್ತಿಯು ಪ್ರಶಸ್ತಿ ಪತ್ರ, ಫಲಕ ಒಳಗೊಂಡಿದ್ದು  ಪುರಸ್ಕಾರವನ್ನು ವಚನ ವಿಜಯೋತ್ಸವ  ಫೆಬ್ರವರಿ ೦೧ರ ಸಮಾರಂಭದಲ್ಲಿ ಪ್ರದಾನ ಮಾಡಲಾಗುವದು.

ಇಲ್ಲಿಯವರೆಗೆ ಕೇಂದ್ರದ ಮಾಜಿ ಸಚಿವ ಬೂಟಾಸಿಂಗ್ (೨೦೧೧) ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ (೨೦೧೨) ಹೋರಾಟಗಾರ ಅಣ್ಣಾ ಹಜಾರೆ (೨೦೧೩) ಮೂಢನಂಬಿಕೆ ವಿರೋಧಿ ಹೋರಾಟಗಾರ ದಿ. ನರೇಂದ್ರ ದಾಬೋಲ್ಕರ್‌ರಯ ಅವರಿಗೆ (೨೦೧೪) ವಿಶ್ರಾಂತ ನ್ಯಾಯಮೂರ್ತಿ ಶಿವರಾಜ ಪಾಟೀಲ (೨೦೧೫) ಡಾ. ಮಂದಾಕಿನಿ ಡಾ. ಪ್ರಕಾಶ ಆಮ್ಟೆ ದಂಪತಿಗಳಿಗೆ (೨೦೧೬) ಚಿತ್ರನಟ ನಾನಾಪಾಟೇಕರ್ (೨೦೧೭) ಖ್ಯಾತವೈದ್ಯ ಡಾ. ಖಾದರ (೨೦೧೮) ವಿಶ್ರಾಂತ ನ್ಯಾಯಾಧೀಶ ಎಚ್.ಎನ್, ನಾಗಮೋಹನದಾಸ (೨೦೧೯) ಇಸ್ರೋ ಅಧ್ಯಕ್ಷ ಡಾ. ಕೆ. ಶಿವನ್ (೨೦೨೦) ಡಾ. ಗೊ.ರು. ಚನ್ನವಸಪ್ಪ (೨೦೨೫) ಅವರಿಗೆ ನೀಡಿ ಗೌರವಿಸಲಾಗಿದೆ ಎಂದು ಅಕ್ಕ ತಿಳಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
Leave a comment

Leave a Reply

Your email address will not be published. Required fields are marked *