ನಂಜನಗೂಡು:
ಪಟ್ಟಣದಿಂದ ಚಾಮರಾಜನಗರಕ್ಕೆ ಹೋಗುವ ಹೆದ್ದಾರಿ ರಸ್ತೆಯಲ್ಲಿರುವ ಕೋಣನೂರು ಪಾಳ್ಯ ಗೇಟಿನ ವೃತ್ತಕ್ಕೆ ಬಸವಾದಿ ಶರಣ ಶಿವಯೋಗಿ ಸಿದ್ದರಾಮೇಶ್ವರ ವೃತ್ತವೆಂದು ಮತ್ತು ಗೇಟಿನಿಂದ ಗ್ರಾಮಕ್ಕೆ ತೆರಳುವ ರಸ್ತೆಗೆ ಸಿದ್ದರಾಮೇಶ್ವರ ರಸ್ತೆ ಎಂದು ಘೋಷಿಸಿ, ಫಲಕದೊಂದಿಗೆ ಉದ್ಘಾಟನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶರಣರ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷರಾದ ಬಸವಯೋಗೇಶ ಅವರಿಂದ ಸಿದ್ಧರಾಮೇಶ್ವರ ಕುರಿತು ಪ್ರವಚನ ನಡೆಯಿತು.

ಕಳೆದ ವರ್ಷ ಕೋಣನೂರು ಪಾಳ್ಯ ಗ್ರಾಮದ ಜನರಿಗೆ ಬಸವಯೋಗೇಶ ಅವರು ಸಿದ್ದರಾಮೇಶ್ವರರ ಬಗ್ಗೆ ಪ್ರವಚನ ಮಾಡಿಸಿ ಈ ಬಗ್ಗೆ ಅರಿವು ಮೂಡಿಸಿದ್ದನ್ನು ಸ್ಮರಿಸಬಹುದು. ಈ ವರ್ಷ ಪ್ರವಚನದ ಜೊತೆ ಸಿದ್ದರಾಮೇಶ್ವರರ ರಸ್ತೆ ಮತ್ತು ವೃತ್ತಕ್ಕೆ ನಾಮಕರಣ ಮಾಡಿಸಲಾಯಿತು.
ಗ್ರಾಮದ ಮುಖಂಡರೊಂದಿಗೆ ಶರಣ ಚಿಂತನೆಗಳ ಜೊತೆ ವಿಷಯ ಹಂಚಿಕೊಂಡಾಗ ಎಲ್ಲರೂ ಸಂತೋಷಗೊಂಡು ಪ್ರತಿವರ್ಷ ಸಿದ್ದರಾಮೇಶ್ವರರ ಜಯಂತಿ ಆಚರಿಸುತ್ತೇವೆಂದು ಘೋಷಿಸಿದರು.

ಕಾರ್ಯಕ್ರಮ ಆಯೋಜಕರಾದ ಕೋಣನೂರು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ವಸಂತಕುಮಾರ, ಕೋಣನೂರು ಪಾಳ್ಯ ಗ್ರಾಮದ ಯುವ ಮುಖಂಡರಾದ ಶೇಖರ ಎನ್. ಮತ್ತು ಸಂಗಡಿಗರು, ಬಸವ ಮಾಸ ಸಮಿತಿ ಅಧ್ಯಕ್ಷರಾದ ಪ್ರಭುಸ್ವಾಮಿ, ನಂಜನಗೂಡು ತಾಲೂಕು ಭೋವಿ ಸಮಾಜದ ಅಧ್ಯಕ್ಷರಾದ ಬಾಲಾಜಿ, ಸಂಘಟನಾ ಕಾರ್ಯದರ್ಶಿ ಪಾಳ್ಯ ಪಾಪಣ್ಣ, ಯಜಮಾನರುಗಳಾದ ರಾಮದಾಸ, ರಾಮು, ತಿಮ್ಮಪಡಿ, ರಾಜು, ಚಿಕ್ಕೆಜಮಾನರಾದ ಪಾಪಣ್ಣ ಹಾಗೂ ಕೋಣನೂರು ಪಾಳ್ಯ ಮುಖಂಡರು, ಮತ್ತಿತರರು ಕಾರ್ಯಕ್ರಮದಲ್ಲಿದ್ದು ಯಶಸ್ವಿಗೊಳಿಸಿದರು.
