ಸಮಾಜದಲ್ಲಿ ಅನ್ಯರ ಹಸ್ತಕ್ಷೇಪದ ವಿರುದ್ಧ ಎಂಟು ಪಕ್ಷಾತೀತ ನಿರ್ಣಯಗಳು
ಶಿವಮೊಗ್ಗ
ಲಿಂಗಾಯತರ, ವೀರಶೈವರ ವಿಚಾರದಲ್ಲಿ ತಲೆ ಹಾಕದಿರಲು ಮಾಜಿ ಮುಖ್ಯಮಂತ್ರಿ ಈಶ್ವರಪ್ಪ ಮತ್ತು ಅವರ ಮಗ ಕಾಂತೇಶ್ ಅವರಿಗೆ ನಗರದಲ್ಲಿ ನಡೆದ ಶರಣ ಸಮಾಜದ ಬೃಹತ್ ಸಭೆಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಲಿಂಗಾಯತ ಮತ್ತು ವೀರಶೈವರನ್ನು ಒಗ್ಗೂಡಿಸಲು ಈಶ್ವರಪ್ಪ ಮತ್ತು ಅವರ ಮಗ ಕಾಂತೇಶ್ ‘ಶಿವಸಂಕಲ್ಪ – ವೀರಶೈವ ಲಿಂಗಾಯತ ಒಕ್ಕೂಟ’ ಎಂಬ ಹೊಸ ಸಂಘಟನೆ ಶುರು ಮಾಡಿದ್ದಾರೆ.
ಶಿವಸಂಕಲ್ಪದ ಉದ್ಘಾಟನೆಯಲ್ಲಿ ಲಿಂಗಾಯತರು, ವೀರಶೈವರನ್ನು ಹಿಂದೂ ಸಮಾಜದೊಳಗೆ ಸೇರಿಸಲು ಶ್ರಮಿಸುವುದಾಗಿ ಹೇಳಿ, ನನ್ನನ್ನು ವಿರೋಧಿಸುತ್ತಿರುವವರು ಲಿಂಗಾಯತರಾಗಲು ಯೋಗ್ಯರಲ್ಲ ಎಂದು ಭಾಷಣ ಮಾಡಿದ್ದರು.
ಈ ಹಿಂದೆ ಲಿಂಗಾಯತ ಮಠಾಧೀಶರ ಬಗ್ಗೆ ಕನ್ನೇರಿ ಸ್ವಾಮಿ ಬಳಸಿದ್ದ ಅಶ್ಲೀಲ ಭಾಷೆಯನ್ನೂ ಸಮರ್ಥಿಸಿಕೊಂಡು ತಾವಾಗಿದ್ದರೆ ಅದಕ್ಕಿಂತಲೂ ಕೆಟ್ಟ ಭಾಷೆ ಬಳಸುತ್ತಿದ್ದೆ ಎಂದು ಹೇಳಿದ್ದರು.

ಜನವರಿ 17ರಂದು ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ನಡೆದ ಶರಣ ಸಮಾಜದ ಸಭೆಯಲ್ಲಿ ಸಮಾಜದ ಮುಖಂಡರು, ವಿವಿಧ ಉಪಪಂಗಡಗಳ ಪ್ರತಿನಿಧಿಗಳು ಪಕ್ಷಾತೀತವಾಗಿ ವೇದಿಕೆ ಹಂಚಿಕೊಂಡರು.
ಭವಿಷ್ಯದಲ್ಲಿ ಅನ್ಯರ ನೆರವಿನಿಂದ ನಡೆಯುವ ಯಾವುದೇ ಸಮಾಜ ಚಟುವಟಿಕೆಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಲು ಕರೆ ನೀಡಲಾಯಿತು. ಜೊತೆಗೆ ಯಾವುದೇ ಪೀಠಾಧ್ಯಕ್ಷರ ಬಗ್ಗೆ ಪ್ರತಿಕೂಲ ಹೇಳಿಕೆಗಳನ್ನು ನೀಡದಿರಲು ನಿರ್ಣಯಿಸಲಾಯಿತು.
ಲಿಂಗಾಯತ ಶ್ರೀಗಳಿಗೆ ಅಪಮಾನ
ಲಿಂಗಾಯತ ಮಠಾಧೀಶರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಸ್ವಾಮೀಜಿಯೊಬ್ಬರನ್ನು ಬೆಂಬಲಿಸಿ ಸಮುದಾಯದ ಶ್ರೀಗಳಿಗೆ ಅಪಮಾನ ಮಾಡಿದ್ದಾರೆ’ ಎಂದು ಸಭೆಯ ಆರಂಭದಲ್ಲಿ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜದ ಪ್ರಧಾನ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಮುಖಂಡ ಎಸ್.ಪಿ. ದಿನೇಶ್ ಕಿಡಿಕಾರಿದರು.

‘ಶಿವ ಸಂಕಲ್ಪ ಸಮಾವೇಶದಲ್ಲಿ ನನ್ನನ್ನು ವಿರೋಧಿಸುವವರು ಲಿಂಗಾಯತರೇ ಅಲ್ಲ ಎಂದು ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಬೇರೆ ಬೇರೆ ವೇದಿಕೆಗಳಲ್ಲಿ ವೀರಶೈವ–ಲಿಂಗಾಯತ ಸಮುದಾಯದ ಬಗ್ಗೆ ಮಾತನಾಡಿದ್ದಾರೆ. ಇದನ್ನು ನಿಲ್ಲಿಸಬೇಕು,” ಎಂದು ಹೇಳಿದರು.
ಅನುಮತಿ ಪಡೆಯದೇ ಫೋಟೊ
ಸಭೆಯಲ್ಲಿ ಮಾತನಾಡಿದ ಬಿಜೆಪಿ ನಾಯಕ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಶಿವಸಂಕಲ್ಪ ಕಾರ್ಯಕ್ರಮದಲ್ಲಿ ಅನುಮತಿಯಿಲ್ಲದೆ ತಮ್ಮ ಫೋಟೋ ಬಳಸಿಕೊಳ್ಳಲಾಗಿತ್ತು ಎಂದು ಆಪಾದಿಸಿದರು.

‘ಶಿವಸಂಕಲ್ಪ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ನನ್ನ ಅನುಮತಿ ಪಡೆಯದೇ ಹೆಸರು ಫ್ಲೆಕ್ಸ್ನಲ್ಲಿ ಫೋಟೊ ಹಾಕಿದ್ದರು. ವಿಶ್ವಾಸ್ ಮಹಾಲಿಂಗಶಾಸ್ತ್ರಿ (ಶಿವಸಂಕಲ್ಪದ ಸಂಘಟಕರು) ಇಬ್ಬರನ್ನೂ ಕರೆದು ಫ್ಲೆಕ್ಸ್ ತೆಗೆಯಲು ಹೇಳಿದ್ದೆ. ಕಾರ್ಯಕ್ರಮಕ್ಕೂ ಹೋಗಿಲ್ಲ’ ಎಂದು ತಿಳಿಸಿದರು.
‘ಸ್ವಂತ ಹಿತಕ್ಕೆ ಸಮಾಜದ ಹಿತ ಬಲಿಕೊಡುವುದು ಬಹಳ ದೊಡ್ಡ ಅಪರಾಧ. ನಮ್ಮ ಸಮಾಜದಲ್ಲಿ ಯಾರು ಬೇಕಾದರೂ ಕೈ ಆಡಿಸಬಹುದು ಎಂಬ ಧೋರಣೆ ಬೆಳೆದರೆ ಸಮಾಜ ದುರ್ಬಲ ಆಗಲಿದೆ,’ ಎಂದು ಹೇಳಿದರು.
‘ಧರ್ಮವನ್ನು ರಾಜಕೀಯಕ್ಕೆ, ರಾಜಕೀಯವನ್ನು ಧರ್ಮಕ್ಕೆ ತರುವುದು ಬೇಡ. ಸಮಾಜದ ಸಮಸ್ಯೆ ಬಂದಾಗ ಯಾವುದೇ ಪಕ್ಷ ಬೇಡ. ಮೊದಲು ನಾವು ಸರಿಯಾಗಬೇಕು ಎಂದು ಎಂದು ಕಿವಿಮಾತು ಹೇಳಿದರು.
ನಮಗೆ ಹೇಳಲು ಈಶ್ವರಪ್ಪ ಯಾರು?
‘ಈಶ್ವರಪ್ಪನವರನ್ನು ಒಪ್ಪದವರು ಲಿಂಗಾಯತರೇ ಅಲ್ಲ’ ಎನ್ನುವ ಮಾತನ್ನು ಮಾಜಿ ಶಾಸಕ ಆಯನೂರು ಮಂಜುನಾಥ್ ಖಂಡಿಸಿದರು.
‘ಜನಗಣತಿಯಲ್ಲಿ ವೀರಶೈವರು, ಲಿಂಗಾಯತರು ಹಿಂದೂಗಳೋ ಅಲ್ಲವೋ ಎಂದು ಬರೆಸುವಂತೆ ಹೇಳಲು ಈಶ್ವರಪ್ಪ ಯಾರು? ನಮ್ಮ ಸಮಾಜಕ್ಕೆ ಮಾರ್ಗದರ್ಶನ ನೀಡಲು ಸಾಕಷ್ಟು ನಾಯಕರು, ಮಠಾಧಿಪತಿಗಳು ಇದ್ದಾರೆ. ವೀರಶೈವ ಲಿಂಗಾಯತರ ವಿರುದ್ಧ ‘ಹಿಂದೂ ಧರ್ಮದ’ಹೆಸರಿನಲ್ಲಿ ಈಶ್ವರಪ್ಪ ಸಂಘಟನೆ ಮಾಡಿದ್ದಾರೆ,” ಎಂದು ಹೇಳಿದರು.

ನಿಮ್ಮ ಸಮಾಜದ ಒಳಪಂಗಡಗಳನ್ನು ಒಟ್ಟುಗೂಡಿಸುವ ಕೆಲಸ ಮಾಡಿದ್ದೀರಾ? ಅಥವಾ ರಾಜಕೀಯ ಲಾಭಕ್ಕಾಗಿ ಹಾಗೂ ನಿಮ್ಮ ಮತ್ತು ನಿಮ್ಮ ಮಗನ ರಾಜಕೀಯ ಭವಿಷ್ಯಕ್ಕಾಗಿ ಎಲ್ಲ ಸಮಾಜಗಳಲ್ಲೂ ಕೈ ಹಾಕುತ್ತಿದ್ದೀರಾ? ಎಂದು ಈಶ್ವರಪ್ಪನವರನ್ನು ಪ್ರಶ್ನಿಸಿದರು.
ನಮ್ಮ ಸಮಾಜದಲ್ಲಿ ನೂರು ಸಂಘಟನೆಗಳಿದ್ದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ‘ಎಲ್ಲವನ್ನೂ ಒಂದು ಮಾಡುತ್ತೇನೆ’ ಎಂದು ರಾಜಕಾರಣ ಮಾಡುವುದು ಸರಿಯಲ್ಲ.
ನಾವು ವಿಭಿನ್ನ ರಾಜಕೀಯ ಪಕ್ಷಗಳಲ್ಲಿ ಇರಬಹುದು. ಚುನಾವಣೆ ಬಂದಾಗ ಪಕ್ಷಗಳು ಮುಖ್ಯ. ಆದರೆ ಸಮಾಜದ ವಿಚಾರ ಬಂದಾಗ ಪಕ್ಷಗಳನ್ನು ಬದಿಗಿಟ್ಟು ಒಂದಾಗಬೇಕು. ಸಮಾಜಕ್ಕೆ ಅಪಮಾನ, ಅವಮಾನ ಅಥವಾ ಪ್ರತ್ಯಕ್ಷ–ಪರೋಕ್ಷ ದಾಳಿಗಳು ನಡೆದಾಗ, ನಾವು ಎಲ್ಲರೂ ವೀರಶೈವ ಲಿಂಗಾಯತರೆಂಬ ಒಂದೇ ಗುರುತಿನಲ್ಲಿ ನಿಲ್ಲಬೇಕು” ಎಂದು ಹೇಳಿದರು.
ಯಡಿಯೂರಪ್ಪ ವಿರೋಧಿ ನಡೆ
ಯಡಿಯೂರಪ್ಪನವರ ಶಕ್ತಿ, ಸಾಮರ್ಥ್ಯ ಕುಗ್ಗಿಸುವುದು ಶಿವ ಸಂಕಲ್ಪದ ಉದ್ದೇಶ ಎಂಬ ಮಾತೂ ಸಭೆಯಲ್ಲಿ ಕೇಳಿಬಂತು.
ಈಶ್ವರಪ್ಪ ಉದ್ದೇಶಪೂರ್ವಕವಾಗಿ ಯಡಿಯೂರಪ್ಪನವರ ವಿರುದ್ಧ ಸಂಘಟನೆ ಕಟ್ಟಿದ್ದು, ವೀರಶೈವ ಲಿಂಗಾಯತ ವಿರೋಧಿ ನಿಲುವು ತೆಗೆದುಕೊಂಡಿದ್ದನ್ನು ಸಮಾಜ ಮರೆತಿಲ್ಲ ಎಂದು ಆಯನೂರು ಮಂಜುನಾಥ್ ಹೇಳಿದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ಲಿಂಗಾಯತರ ಆಳ್ವಿಕೆ ವಿರೋಧಿಸಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿ ಹಿಂದುಳಿದವರನ್ನು ಎತ್ತಿ ಕಟ್ಟಿದ್ದು ಏಕೆ?’ ಎಂದು ಪ್ರಶ್ನಿಸಿದರು.
ಯುವಕರಿಗೆ ಸ್ಪಷ್ಟ ಸಂದೇಶ
ಈಶ್ವರಪ್ಪನವರ ಹಾಗೂ ಅವರ ಪುತ್ರ ಕಾಂತೇಶ್ರವರ ನಡೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಸಮಾಜದ ಹೆಸರಿನಲ್ಲಿ ಯುವಕರನ್ನು ದಿಕ್ಕು ತಪ್ಪಿಸುವ ಯಾವುದೇ ಪ್ರಯತ್ನವನ್ನು ವೀರಶೈವ ಲಿಂಗಾಯತ ಸಮಾಜ ಸಹಿಸುವುದಿಲ್ಲ.

ನಮ್ಮ ಸಮಾಜದಲ್ಲಿ ಈಗಾಗಲೇ ಹಲವಾರು ಸಂಘಟನೆಗಳಿವೆ, ಆದರೆ ಸಮಾಜಕ್ಕೆ ಸಂಬಂಧಿಸಿದ ಸಮಸ್ಯೆ ಎದುರಾದಾಗ ಎಲ್ಲರೂ ವೈಯಕ್ತಿಕ ಅಜೆಂಡಾಗಳನ್ನು ಬದಿಗೊತ್ತಿ ಒಗ್ಗೂಡಬೇಕಾಗಿದೆ. ಸಮಾಜದ ವಿಚಾರದಲ್ಲಿ ಅನಗತ್ಯವಾಗಿ ತಲೆಹಾಕಿ ಗೊಂದಲ ಸೃಷ್ಟಿಸುವವರ ವಿರುದ್ಧ ಗಟ್ಟಿಯಾದ ಎಚ್ಚರಿಕೆ ನೀಡಲು ನಾವು ಸಂಪೂರ್ಣವಾಗಿ ಸಿದ್ಧವಾಗಿದ್ದೇವೆ ಎಂದು ಖಡಕ್ ಸಂದೇಶ ನೀಡಿದರು.
ಕೇಸು ದಾಖಲಿಸಿ
‘ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವವರ ವಿರುದ್ಧ ಕೇಸು ದಾಖಲಿಸಿ. ಆಗ ಹೆದರುತ್ತಾರೆ’ ಎಂದು ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ ಹೇಳಿದರು.
ಸರ್ವಾನುಮತ ನಿರ್ಣಯಗಳು
1) ವೀರಶೈವ ಲಿಂಗಾಯತ ಸಮಾಜದ ಸಂಘಟನೆ–ಉಳಿವು–ಬೆಳವಣಿಗೆಗಾಗಿ ಸಾಮರಸ್ಯ ಮತ್ತು ಸಹಕಾರದೊಂದಿಗೆ ಸ್ಪಂದಿಸುವುದು.
2) ಅನ್ಯ ಸಮಾಜದ ನಾಯಕರ ನೇತೃತ್ವದಲ್ಲಿ ಸಮಾಜದಸಭೆ–ಸಮಾರಂಭ ನಡೆಸುವ ಪ್ರವೃತ್ತಿಯನ್ನು ಖಂಡಿಸುವುದು.
3) ಇಂತಹ ಚಟುವಟಿಕೆಗಳು ಸಮಾಜದ ಏಕತೆಗೆ ಹಾನಿಕಾರಕವೆಂದು ಘೋಷಿಸುವುದು.
4) ಸಮಾಜದ ಸಮಸ್ಯೆಗಳನ್ನುನಾವೇ ಬಗೆಹರಿಸಿಕೊಳ್ಳಬೇಕು; ಸ್ವಾರ್ಥಕ್ಕಾಗಿ ಸಮಾಜ ಒಡೆಯುವ ಪ್ರಯತ್ನಗಳನ್ನು ತಿರಸ್ಕರಿಸುವುದು.
5) ಭವಿಷ್ಯದಲ್ಲಿ ಅನ್ಯರ ನೆರವಿನಿಂದ ನಡೆಯುವ ಯಾವುದೇ ಸಮಾಜ ಚಟುವಟಿಕೆಗಳಿಗೆ ತೀವ್ರ ವಿರೋಧ.
6) ವೈಯಕ್ತಿಕ–ವ್ಯಾವಹಾರಿಕ ಸಂಬಂಧಗಳನ್ನು ಸಮಾಜದ ಮೇಲೆ ಹೇರಬಾರದು.
7) ಯಾವುದೇ ಮಠಾಧ್ಯಕ್ಷರು–ಪೀಠಾಧ್ಯಕ್ಷರ ಬಗ್ಗೆ ಪ್ರತಿಕೂಲ ಹೇಳಿಕೆಗಳನ್ನು ನೀಡಬಾರದು.
8) ಧಾರ್ಮಿಕ–ಪ್ರವಚನ ಕಾರ್ಯಕ್ರಮಗಳನ್ನು ಸಮಾಜದ ಎಲ್ಲ ಸಂಘಟನೆಗಳ ಸಹಕಾರದೊಂದಿಗೆ ಒಗ್ಗಟ್ಟಾಗಿ ನಡೆಸುವುದು.
ಸಭೆಯಲ್ಲಿ ಮಾಜಿ ಶಾಸಕರಾದ ಆಯನೂರು ಮಂಜುನಾಥ್, ಎಸ್. ರುದ್ರೇಗೌಡ್ರು, ಹೆಚ್.ಎಂ. ಚಂದ್ರಶೇಖರಪ್ಪ, ಸಮಾಜದ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್, ಎಸ್.ಪಿ. ದಿನೇಶ್, ಬಳ್ಳೇಕೆರೆ ಸಂತೋಷ್, ಸಿ.ಎಸ್. ಷಡಾಕ್ಷರಿ, ರುದ್ರೇಶ್, ಹೆಚ್.ಸಿ. ಯೋಗೀಶ್, ಬಾಳೇಕಾಯಿ ಮೋಹನ್, ರಾಜಶೇಖರ್ ಹೆಚ್.ಕೆ. ಮೋಹನ್ ಕುಮಾರ್, ತಮ್ಮಡಿಹಳ್ಳಿ ನಾಗರಾಜ್, ಸೇರಿದಂತೆ ಅನೇಕ ಗಣ್ಯರು ಹಾಗೂ ಉಪಪಂಗಡಗಳ ಪ್ರಮುಖರು ಭಾಗವಹಿಸಿದ್ದರು.
(ವರದಿ ಕೃಪೆ ಡಿಟೆಕ್ಟಿವ್ ನ್ಯೂಸ್ 24)

Who is Eshwarappa to poke his nose in lingayats, has he adopted ishtalinga on his body? He is a selfish politician bringing his son to limelight trying his level best.
ವೀರಶೈವ /ಲಿಂಗಾಯತ ರ ಬಗ್ಗೆ ಮಾತನಾಡಲು ಇವರಿಗೆ ಮಾತನಾಡಲು ಯಾವುದೇ ಹಕ್ಕು ಇಲ್ಲ. ನಾವೇನಾದರೂ ಅವರ ಧರ್ಮದ ಬಗ್ಗೆ ಮಾತಾನಾಡಿದ್ದರೆ ಅವರಿಗೆ ಹಕ್ಕು ಬರುತ್ತಿತ್ತು. ಇವರಿಗೆ ಸರಿಯಾದ ಪಾಠ ಕಲಿಸಬೇಕು.
ಕರೆಯದೆ ಬರುವವನ, ಬರೆಯದೆ ಓದುವವನ,
ಬರಿಗಾಲಲ್ಲಿ ನಡೆಯುವವನ
ಕರೆದು…… ಹೊಡೆ ಎಂದ ಸರ್ವಜ್ಞ.
I think he taken Lingadeeksha by a great swamiji. He adopted Lingayat
ಬಿಸಿ ಮುಟ್ಟಿಸಬೇಕು
ಬಸವ ಸಂಸ್ಕೃತಿ ಅಭಿಯಾನದ ಯಶಸ್ವಿಯ ನಂತರ ಹಲವು ಮಠಾಧೀಶರಿಗೆ ರಾಜಕಾರಣಿಗಳಿಗೆ ನಿದ್ದೆ ಬಾರದಂತಾಗಿದೆ. ಒಂದು ಕಡೆಗೆ ನಮ್ಮದೇ ಸಮಾಜ ಬಾಂಧವರಾದ ಕನ್ನೆರಿ, ಶ್ವಾಸ ಗುರು, ದಂಗಾಲ್ ಹೆಗಲ ಮೇಲೆ ಬಂದೂಕ ಇಟ್ಟು ಲಿಂಗಾಯಿತ ಸಮಾಜದ ಮೇಲೆ ಗುಂಡು ಹಾರಿಸಿದ್ದಾಯಿತು. ಅಲ್ಲಿಗೂ ಸುಮ್ಮನಿರದೆ ಕೆಲವು ರಾಜಕಾರಣಿಗಳಿಗೆ ಅಧಿಕಾರದ ಆಸೆ ತೋರಿಸುತ್ತಾ ಲಿಂಗಾಯತ ಸಮಾಜವನ್ನು ಒಡೆಯುವ ಕುತಂತ್ರವನ್ನು ಮುಂದುವರಿಸುತ್ತಲೇ ಇದ್ದಾರೆ.
ಯಾರೇ ಆಗಲಿ ತಮ್ಮ ಸಮಾಜದ ಸಂಘಟನೆ ಅಭಿವೃದ್ಧಿ ಕಡೆಗೆ ಒತ್ತುಕೊಡಲು ಸಾಧ್ಯವಾಗದೆ ಇದ್ದವರು ಮತ್ತೊಂದು ಸಮಾಜದ ಮೇಲೆ ಆಸಕ್ತಿ ಶ್ರದ್ದೆ ತೋರಿಸುತ್ತಿರುವುದು ಇದು ರಾಜಕೀಯ ಕುತಂತ್ರವಲ್ಲದೆ ಮತ್ತೇನು?
ವೀರಶೈವ ಲಿಂಗಾಯತ ಸಮಾಜವನ್ನು ದುರ್ಬಲಗೊಳಿಸುವಂತಹ ಯತ್ನಕ್ಕೆ ಯಾರೇ ಕೈ ಹಾಕಿದರೂ, ಎಲ್ಲರೂ ಸಂಘಟನಾತ್ಮಕವಾದಂತ ಹೋರಾಟ ಮಾಡುವುದು ಇಂದು ಅನಿವಾರ್ಯವಾಗಿದೆ. ಈಗಲಾದರೂ ಸಮಾಜ ಬಾಂಧವರು ಎಲ್ಲ ಪಂಗಡಗಳನ್ನು, ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಐಕ್ಯತೆಯಿಂದ ಮುನ್ನಡೆಯಬೇಕಾದ ಅನಿವಾರ್ಯತೆ ಇದೆ. ನಮ್ಮ ಸಮಾಜದ ಐಕ್ಯತೆಯನ್ನ ಉಳಿಸಲು ಸಾವಿರ ಮಠಾಧೀಶರಿದ್ದಾರೆ. ಧರ್ಮ ನಿಷ್ಠರಿದ್ದಾರೆ, ಬುದ್ಧಿಜೀವಿಗಳಿದ್ದಾರೆ, ನಮ್ಮ ಧರ್ಮಕ್ಕೆ ತನ್ನದಾದ ಇತಿಹಾಸ ಪರಂಪರೆ ಇದೆ. ಇದನ್ನೆಲ್ಲ ಮೀರಿ ಅನ್ಯರು ಮೂಗು ತೋರಿಸಿ ನಮ್ಮ ಸಮಾಜವನ್ನು ಉದ್ದಾರ ಮಾಡುವಂತಹದ್ದೇನು ಇಲ್ಲಿ ಇಲ್ಲ.
ಹೇಗೆ ಸಂಘಟನೆ ಮಾಡಬೇಕು ಎನ್ನುವುದು ನಮಗೆ ಗೊತ್ತಿದೆ. ಅವರವರ ಸಂಘಟನೆ ಅವರು ಮಾಡಿಕೊಂಡಿದ್ದರೆ ಒಳಿತು.