ಸಮಾನತೆಯ ಸಂಕೇತವಾಗಿ ಇಷ್ಟಲಿಂಗ ನೀಡಿದ ಬಸವಾದಿ ಶರಣರು

ಬೆಳಗಾವಿ:

ಲಿಂಗಾಯತ ಸಂಘಟನೆ ವತಿಯಿಂದ ಡಾ ಫ.ಗು. ಹಳಕಟ್ಟಿ ಭವನದಲ್ಲಿ ವಾರದ ಸಾಮೂಹಿಕ ಪ್ರಾಥ೯ನೆ ಮತ್ತು ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಅಂಗವಾಗಿ, ಅವರ ಕುರಿತು ನಿವೃತ್ತ ಪ್ರಾಚಾರ್ಯ ವಿರೂಪಾಕ್ಷಿ ದೊಡ್ಡಮನಿ ಉಪನ್ಯಾಸ ನೀಡಿದರು.

ಇಷ್ಟಲಿಂಗವನ್ನು ಬಸವಾದಿ ಶರಣರು ಸಮಾನತೆಯ ಸಂಕೇತವಾಗಿ ನಮಗೆಲ್ಲ ನೀಡಿದರು. ಇಷ್ಟಲಿಂಗ ಕುರಿತಾದ ಶಿವಯೋಗ ನಾವೆಲ್ಲ ಪ್ರತಿದಿನ ಮಾಡಬೇಕೆಂದರು.

ಗುರುಶಿಷ್ಯರ ಸಂಬಂಧ ಹೇಗಿರಬೇಕು ಎನ್ನುತ್ತಾ, ಶಿಷ್ಯರಿಗೆ ಉತ್ತಮ ಭೋದನೆಯನ್ನು ಗುರುವಾದವರು ಮಾಡಬೇಕು. ಗುರು ಒಳ್ಳೆಯ ಮಾಗ೯ದಶ೯ಕನಾಗಿರಬೇಕು. ಈಜಲು ಬಾರದ ವ್ಯಕ್ತಿ ಗುರುವಾದರೆ ಮುಳುಗುವವರನ್ನು ರಕ್ಷಿಸಬಹುದೇ ಎಂದು ಪ್ರಶ್ನಿಸಿದರು.

ಗುರು ಲೋಕಜ್ಞಾನ ಹೊಂದಿರಬೇಕು. ಜ್ಞಾನ ಇಲ್ಲದವ ಇನ್ನೊಬ್ಬರಿಗೆ ಜ್ಞಾನ ಕೊಡಬಲ್ಲನೆ ಎನ್ನುತ್ತಾ, ನುಡಿದಂತೆ ನಡೆಯಬೇಕು. ಮಾನವನ ಆಸೆಗೆ ಮಿತಿಯಿಲ್ಲ. ಆಸೆ ಚಿಂತೆಗೀಡು ಮಾಡುತ್ತದೆ. ಚಿಂತೆಯಿಂದ ಮುಕ್ತರಾದವರು ಯಾರು? ಬಡತನಕ್ಕೆ ಉoಬುವ ಚಿಂತೆ, ಇoತಿ ಹಲವಾರು ಚಿಂತೆಯಲ್ಲಿ ಮುಳುಗಿ ಹೊಗಿದ್ದಾರೆ ಎಂದು ವಚನದಲ್ಲಿ ಹೇಳುತ್ತಾರೆ. ನನಗೆ ಸಾಕು ಎಂಬ ಭಾವನೆ ಬರುವಂತಾಗಬೇಕು. ಮನುಷ್ಯನ ಆಸೆಗೆ ಇತಿಮಿತಿ ಇರಬೇಕು ಎಂದು ಕಥೆ ಮೂಲಕ ದೊಡ್ಡಮನಿ ತಿಳಿಸಿದರು.

ಇತ್ತಿಚೆಗೆ ಮದುವೆಯಾದ ಸಂಘಟನೆಯ ನಾಗರಾಜ-ಚೈತ್ರಾ ಹಾಗೂ ಅಪಣಾ೯-ವಿಜಯ ದಂಪತಿಗಳನ್ನು ಸತ್ಕರಿಸಲಾಯಿತು.

ಆರಂಭದಲ್ಲಿ ಮಹಾದೇವಿ ಅರಳಿ ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು. ವಿ.ಕೆ. ಪಾಟೀಲ, ಆನಂದ ಕರಕಿ, ಬಿ. ಪಿ. ಜೇವಣಿ, ಬಸವರಾಜ ಬಿಜ್ಜರಗಿ ವಚನ ವಿಶ್ಲೇಷಣೆ ಮಾಡಿದರು. ಈರಣ್ಣಾ ದೇಯಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶೇಖರ ವಾಲಿ ಇಟಗಿ, ಗುರುಸಿದ್ದಪ್ಪ ರೇವಣ್ಣವರ, ಲಕ್ಷ್ಮೀ ಜೆವಣಿ, ಬಸವರಾಜ ಕರಡಿಮಠ, ಶಶಿಭೂಷಣ ಪಾಟೀಲ, ಶಂಕರ ಗುಡಸ, ಬಸನಗೌಡ ಪಾಟೀಲ, ಜಯಶ್ರೀ ಚವಲಗಿ, ಜ್ಯೋತಿ ಬದಾಮಿ, ಅಶೋಕ ಉಳ್ಳೆಗಡ್ಡಿ, ಎಂ.ವೈ. ಮೆಣಸಿನಕಾಯಿ, ಶಿವಾನಂದ ತಲ್ಲೂರ, ಲಕ್ಷೀಕಾಂತ ಗುರವ ಮತ್ತಿತರ ಶರಣರು ಉಪಸ್ಥಿತರಿದ್ದರು. ಚನ್ನಪ್ಪ ನರಸನ್ನವರ ದಾಸೋಹ ಸೇವೆಗೈದರು. ಸಂಗಮೇಶ ಅರಳಿ ನಿರೂಪಿಸಿದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *