ಡಾ. ಚಂದ್ರಶೇಖರ ಎಂ. ವಿರುಪಣ್ಣವರ ಅವರಿಗೆ ಬಸವಚೇತನ ಪುರಸ್ಕಾರ ಪ್ರದಾನ

ಬಸವ ಮೀಡಿಯಾ
ಬಸವ ಮೀಡಿಯಾ

ಹಾನಗಲ್ಲ:

ವಚನಗಳನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸಿರುವ, ಸಮಾಜಸೇವೆಯಲ್ಲಿ ತೊಡಗಿಸಿಕೊಂಡು, ಅಮೆರಿಕಾದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಹಾನಗಲ್ಲ ತಾಲೂಕು ಅಕ್ಕಿಆಲೂರಿನ ಡಾ. ಚಂದ್ರಶೇಖರ ಎಂ. ವಿರುಪಣ್ಣವರ ಅವರಿಗೆ ‘ಬಸವಚೇತನ ಪುರಸ್ಕಾರ’ ಪ್ರದಾನ ಮಾಡಲಾಯಿತು.

ಅಕ್ಕಿಆಲೂರಿನ ಮುತ್ತಿನಕಂತಿಮಠದ ಆವರಣದಲ್ಲಿ ಶನಿವಾರ ನಡೆದ ದುಂಡಿ ಬಸವೇಶ್ವರ ಜನಪದ ಕಲಾಸಂಘದ 34ನೇ ವರ್ಷದ ಕನ್ನಡ ನುಡಿ ಸಂಭ್ರಮ-2026, ಸಮಾರಂಭದಲ್ಲಿ ಕಾನೂನು ಸಚಿವ ಹೆಚ್.ಕೆ. ಪಾಟೀಲ ಪುರಸ್ಕಾರ ಪ್ರದಾನ ಮಾಡಿದರು.

ಸಮಾರಂಭದ ಸಾನಿಧ್ಯವನ್ನು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಅಧ್ಯಕ್ಷತೆಯನ್ನು ಕಲಾಸಂಘದ ಕಾರ್ಯದರ್ಶಿ ಷಣ್ಮುಖಪ್ಪ ಮುಚ್ಚಂಡಿ ವಹಿಸಿದ್ದರು.

ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ರಾಜಶೇಖರ ಕಟ್ಟೇಗೌಡ್ರು, ಟಿ.ಆರ್. ಮಠ, ಕೆ.ಎಫ್. ಕಮ್ಮಾರ, ಟಾಕನಗೌಡ ಪಾಟೀಲ, ವಿವೇಕಾನಂದ ವಿರುಪಣ್ಣವರ, ಪ್ರಕಾಶ ಗೋದಿ, ಪಂಚಾಕ್ಷರಿಗೌಡ ಪಾಟೀಲ, ಕೊಟ್ರೇಶಪ್ಪ ಬಸಣ್ಣಿ, ಅಕ್ಬರಸಾಬ್ ಲತೀಫಸಾಬ್ನವರ, ಕೊಟ್ಟೂರಬಸಪ್ಪ ಬೆಲ್ಲದ ಮತ್ತಿತರರು ಉಪಸ್ಥಿತರಿದ್ದರು.

22ರಿಂದ 24ರವರೆಗೆ ನಡೆದ ನುಡಿ ಸಂಭ್ರಮದಲ್ಲಿ ನಾಡು ನುಡಿ ಕುರಿತಾದ ಉಪನ್ಯಾಸ, ನೃತ್ಯ ಹಾಗೂ ಗೀತೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *