ಬೆಂಗಳೂರು
ಕಳೆದ ನವೆಂಬರ್‌ನಲ್ಲಿ ರಸ್ತೆ ಅಪಘಾತದಲ್ಲಿ ಲಿಂಗೈಕ್ಯರಾದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ಪುತ್ರಿ ಚೈತನ್ಯಾ ಎಂ. ಬೀಳಗಿ ಅವರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಲಭಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ವತಃ ಚೈತನ್ಯಾ ಬೀಳಗಿ ಅವರಿಗೆ ನೇಮಕಾತಿ ಆದೇಶ ಪ್ರತಿಯನ್ನು ಬುಧವಾರ ಹಸ್ತಾಂತರ ಮಾಡಿದರು.
ಕುಮಾರಿ ಚೈತನ್ಯಾ ಅವರನ್ನು 49,050 – 92,500 ರೂ. ಗಳ ವೇತನ ಶ್ರೇಣಿಯಲ್ಲಿ ಸಚಿವಾಲಯದಲ್ಲಿ ಸಹಾಯಕ ಹುದ್ದೆಗೆ ಎರಡು ವರ್ಷಗಳ ಪರೀಕ್ಷಾರ್ಥಾವಧಿಯ ಮೇರೆಗೆ ನೇಮಕ ಮಾಡಲಾಗಿದೆ.
ಈ ಸಂದರ್ಭದಲ್ಲಿ ಸಚಿವರುಗಳಾದ ಎಂ.ಬಿ. ಪಾಟೀಲ, ಎಚ್.ಕೆ. ಪಾಟೀಲ, ಶಿವಾನಂದ ಪಾಟೀಲ, ಸಚೇತಕರಾದ ಅಶೋಕ ಪಟ್ಟಣ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ ಅವರು ಉಪಸ್ಥಿತರಿದ್ದರು.
ಸೇವೆಯಲ್ಲಿದ್ದಾಗಲೇ ನಿಧನರಾಗಿದ್ದ ಮಹಾಂತೇಶ್ ಅವರ ಅವಲಂಬಿತರಿಗೆ ನೆರವಾಗಲು ಸರ್ಕಾರವು ಕರ್ನಾಟಕ ನಾಗರೀಕ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1996ರ ನಿಯಮ 6(1)ರನ್ವಯ ಈ ಕ್ರಮ ಕೈಗೊಂಡಿದೆ.

💐
ಲಿಂಗೈಕ್ಯ ಮಹಾಂತೇಶ್ ಬಿಳಗಿ ಪುತ್ರಿ ಕುಮಾರಿ ಚೈತನ್ಯ ಬಿಳಗಿ ಅವರಿಗೆ ಅನುಕಂಪ ಆಧಾರದ ಮೂಲಕ ಸರ್ಕಾರಿ ನೌಕರಿ ಆದೇಶ ವನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಖುದ್ದಾಗಿ ಕೊಟ್ಟಿರುವುದು ಸಂತಸದ ವಿಚಾರ. ಆದ್ದರಿಂದ ಸಿದ್ದರಾಮಯ್ಯ ಅವರಿಗೆ ಶರಣು ಸಮರ್ಪಿಸುವೆ.