ಸಮಯ ಸಿಕ್ಕಾಗ ಹೊಂಚುಹಾಕಿ ಪ್ರತೀಕಾರ ತೆಗೆದುಕೊಳ್ಳುವುದು ಲಿಂಗಾಯತ ಧರ್ಮದ ನಿಲುವಲ್ಲ

ಬಸವಾದಿ ಶರಣರು ದ್ವೇಷವನ್ನು ಇಟ್ಟುಕೊಂಡು, ಸಮಯ ಸಿಕ್ಕಾಗ ಪ್ರತೀಕಾರ ತೀರಿಸಿಕೊಳ್ಳುವ ವಿಚಾರಗಳನ್ನು ಒಪ್ಪುವುದಿಲ್ಲ. ಇದು ಲಿಂಗಾಯತ ಧರ್ಮದ ನಿಲುವಲ್ಲ.

ಸೋದರ ಮಾವ ಕೀಚಕನ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಕೊಲೆಮಾಡಿದ ಶ್ರೀ ಕೃಷ್ಣ, ಆಸ್ತಿಗಾಗಿ ಪಾಂಡವರು ಕೌರವರಿಗೆ ಜಗಳವಾಡಿಸಿ, ಕೊಲೆಗಳನ್ನು ಮಾಡಿಸಿದ ಶ್ರೀ ಕೃಷ್ಣ. “ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು” “ದುಷ್ಟರ ಸಂಹಾರ, ಶಿಷ್ಟರ ರಕ್ಷಣೆ” ಕೃಷ್ಣನ ನೀತಿ.

ಕಳ್ಳ, ಜಗಳಗಂಟ, ಚೂರಿ ಚಿಕ್ಕಣ್ಣ, ಹೆಂಡ ಇಳಿಸುವವ, ಸೂಳೆಯರು, ಬೀದಿ ಕಸಗುಡಿಸುವ ಮಹಿಳೆ, ಕಟ್ಟಿಗೆ ಮಾರುವವರು, ಹಡಪದ, ಕಂಬಾರ, ಕುಂಬಾರ, ಮಾದಿಗ, ಸಮಗಾರ, ಇಂತಹ ದೂಷಿತ, ಕೆಳವರ್ಗದ, ಶಿಕ್ಷೆಗೆ ಅರ್ಹರಾದವರನ್ನು ಮಹಾಮನೆಗೆ ಕರೆತಂದು, ಅಂತವರ ಮನ ಪರಿವರ್ತನೆ ಮಾಡಿ, ಕಾಯಕದ ಮಹತ್ವವನ್ನು ತಿಳಿಸಿ, ಶರಣರನ್ನಾಗಿಸಿ, ಬದುಕನ್ನು ಕಟ್ಟಿ ಕೊಟ್ಟ ಬಸವಣ್ಣ.

ಇದು “ಸಮಾನತೆಯ ಬಸವ ನೀತಿ.!”
“ಇದು ದಯಾವಂತ ನೀತಿ”
“ಅಜ್ಞಾನವನ್ನು ಅರಿವಿನಿಂದ, ಕ್ಷಮೆಯಿಂದ ತೆಗೆಯಬೇಕು”
ಇದು ಪರಿವರ್ತನೆ.

Share This Article
Leave a comment

Leave a Reply

Your email address will not be published. Required fields are marked *