ಚಾಮರಾಜನಗರ
ನಂಜೇದೇವನಪುರದ ಗ್ರಾಮಸ್ಥರು ಗುರುಮಲ್ಲೇಶ್ವರ ದಾಸೋಹ ಮಠದಲ್ಲಿ ಒಂದು ವಾರದ ಲಿಂಗಾಯತ ಧರ್ಮ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಮೂಡುಗೂರು ಮಠದ ಉದ್ದಾನೇಶ್ವರ ಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಅಷ್ಟಾವರಣ ಅಂತರಂಗ ಬಹಿರಂಗದಲ್ಲಿ ಅವರಿಸಿಕೊಂಡಿದೆ ಅದನ್ನು ಹೊರ ತರಬೇಕಾಗಿದೆ, ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದೇವನೂರು ಪ್ರಶಾಂತ್ ಅವರು ಅಷ್ಟಾವರಣದ ಪ್ರವಚನ ಕಾರ್ಯಕ್ರಮವನ್ನು ಜನರ ಮನಮುಟ್ಟುವಂತೆ ಮಾಡಿ ನಂತರ ಪ್ರಶ್ನೋತ್ತರ ಭಾಗದಲ್ಲಿ ಭಕ್ತಾದಿಗಳಿಗೆ ಅರ್ಥಗರ್ಭಿತವಾದ ವಿಚಾರಗಳನ್ನು ತಿಳಿಸಿಕೊಟ್ಟರು.
ಪ್ರವಚನ ಸಮಾರೋಪ ಸಮಾರಂಭದ ದಿನ ವಿಶ್ವ ಬಸವ ಸೇನೆಯ ಕಾರ್ಯಕರ್ತರು ಕಿರು ಕಾಣಿಕೆಯನ್ನು ನೀಡಿ ಅವರಿಗೆ ಗೌರವವನ್ನು ಸಲ್ಲಿಸಿದರು. ಈ ಕಾರ್ಯಕ್ರಮದ ಮುಖ್ಯ ನೇತೃತ್ವ ವಹಿಸಿಕೊಂಡ ರಾಜೇಂದ್ರ ಸ್ವಾಮಿಗಳವರಿಗೆ ನೆರೆದಿದ್ದ ಎಲ್ಲಾ ಜನಸ್ತೋಮ ಮೆಚ್ಚುಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಪ್ರತಿದಿನವೂ ದಾಸೋಹ ಕಾರ್ಯಕ್ರಮ ಹಾಗೂ ಶರಣರ ವಚನ ಗಾಯನ ಕಾರ್ಯಕ್ರಮ ಶ್ರೀಮಠದಲ್ಲಿ ಸಂಜೆ ಆರರಿಂದ ರಾತ್ರಿ ಹತ್ತು ಗಂಟೆವರೆಗೂ ನಡೆಯುತ್ತಿತ್ತು. ಸುತ್ತಮುತ್ತಲಿನಿಂದ ಗ್ರಾಮಸ್ಥರು ಅಕ್ಕಪಕ್ಕದ ಹಳ್ಳಿಯ ಜನರು ಆ ಶರಣ ಬಂಧುಗಳು ಬಂದು ಪ್ರವಚನ ಕಾರ್ಯಕ್ರಮವನ್ನು ಕೇಳಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.