‘ದಾನ’ ಸೃಷ್ಟಿಸಿದ್ದ ಅಸಮಾನತೆಯ ಪ್ರತಿರೋಧಿಸಿದ ‘ದಾಸೋಹ’

ಇತಿಹಾಸದಲ್ಲಿ ಅಸಮಾನತೆ ಹುಟ್ಟುಹಾಕಿ, ಕೆಳವರ್ಗದವರನ್ನು ಶೋಷಿಸಲು ಬೆಳೆದ ಆರ್ಥಿಕ ವ್ಯವಸ್ಥೆಯೇ ‘ದಾನ’.

ಯುದ್ಧ, ತೆರಿಗೆ ಮೂಲಕ ಪ್ರಜೆಗಳಿಂದ ಸಂಪತ್ತು ಸಂಗ್ರಹಿಸಿ ಭೋಗಿಸುತ್ತಿದ್ದವರು ರಾಜರು. ಅದನ್ನು ದಾನ ಧರ್ಮದ ಹೆಸರಿನಲ್ಲಿ ಸೆಳೆದುಕೊಂಡು ಭೋಗಿಸುತ್ತಿದ್ದವರು ಪುರೋಹಿತರು.

ನಮ್ಮ ನಾಡಿನ ೨೫,೦೦೦ ಶಾಸನಗಳಲ್ಲಿ ೨೦,೦೦೦ ಸಾವಿರ ಶಾಸನಗಳು ಕೇವಲ ದಾನಗಳನ್ನು ದಾಖಲಿಸುತ್ತವೆ. ದಾನಕ್ಕೆ ವಿರುದ್ಧವಾಗಿ ಹುಟ್ಟಿದ ತತ್ವವೇ ‘ದಾಸೋಹ’.

ದಾನದಲ್ಲಿ ಒಂದು ವಸ್ತುವಿನ ಮೇಲಿನ ಹಕ್ಕನ್ನು ಒಬ್ಬ ವ್ಯಕ್ತಿ ಇನ್ನೊಬ್ಬನಿಗೆ ವರ್ಗಾಯಿಸುತ್ತಾನೆ. ಆದರೆ ದಾಸೋಹದಲ್ಲಿ ಯಾವುದೇ ಹಕ್ಕಿನ ಪ್ರಶ್ನೆಯೇ ಇಲ್ಲ.

ಈ ಲೋಕದ ಸಂಪತ್ತೆಲ್ಲ ಶಿವನದು, ನಾವೆಲ್ಲ ಅದನ್ನು ಹಂಚಿಕೊಳ್ಳುವ ದಾಸೋಹಿಗಳು ಮಾತ್ರ. ವಚನಗಳಲ್ಲಿ ‘ದಾನ’ ಪದ ಶಿವನಿಗೆ ಮಾತ್ರ ಬಳಕೆಯಾಗಿದೆ, ವ್ಯಕ್ತಿಗಳಿಗಲ್ಲ.

ಪುರೋಹಿತರಿಗೆ ದಾನಮಾಡಿ ದೇವರನ್ನು ತೃಪ್ತಿಪಡಿಸುವ ಬದಲು, ಪ್ರಜೆಗಳಿಗೆ ನೀಡಿ ದೇವರನ್ನು ತಲುಪುವ ಹೊಸ ತತ್ವ ತೆರೆದುಕೊಂಡಿತು.

(‘ದಾಸೋಹ: ಐತಿಹಾಸಿಕ ಅಗತ್ಯದ ಸೃಷ್ಟಿ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೧)

Share This Article
Leave a comment

Leave a Reply

Your email address will not be published. Required fields are marked *