ನಾಥ ಪಂಥದ ರಂಭಾಪುರಿಯನ್ನು ವಶಪಡಿಸಿಕೊಂಡ ಪಂಚಾಚಾರ್ಯರು

ಪಂಚಾಚಾರ್ಯರ ನಿಜ ಸ್ವರೂಪ 4/12

ರಂಭಾಪುರಿ ಪೀಠ ಮೂಲತಃ ನಾಥ ಪಂಥಕ್ಕೆ ಸೇರಿತ್ತು. 16ನೇ ಶತಮಾನಲ್ಲಿ ಪೀಠಕ್ಕೆ ಬಂದ ಚನ್ನ ಬಸವೇಶ್ವರರು ಬಸವ ಭಕ್ತರು. ಅವರ ನಂತರ ಈ ಪೀಠ ಪಂಚಾಚಾರ್ಯ ಪರಂಪರೆಗೆ ಸೇರಿಕೊಂಡಿತು.

ಇದನ್ನು ಸೇರಿಸಿಕೊಳ್ಳಲು ಆರಾಧ್ಯರು ಮತ್ತೊಬ್ಬ ನಾಥ ಗುರು ರೇವಣಸಿದ್ಧರನ್ನು ಬಳಸಿಕೊಂಡರು. ರೇವಣಸಿದ್ಧರು ಬಸವಣ್ಣನ ಸಮಕಾಲೀನರಾಗಿದ್ದರೂ ಶರಣ ಚಳುವಳಿ ಸೇರದೆ ಪ್ರತ್ಯೇಕವಾಗಿದ್ದರು.

ಆದರೆ 16ನೇ ಶತಮಾನದ ವೀರಶೈವ ಪುರಾಣಗಳಲ್ಲಿ ಅವರು ರೇಣುಕಾಚಾರ್ಯರಾಗಿ ಬದಲಾದರು. ಇಷ್ಟಲಿಂಗ ಹಿಡಿದು, ಸ್ಥಾವರ ಲಿಂಗದಿಂದ ಉದ್ಭವಿಸಿ ರಂಭಾಪುರಿ ಪೀಠದ ಆಚಾರ್ಯರಾದರು.

ವೀರಶೈವರ ಗ್ರಂಥ ಸಿದ್ಧಾಂತ ಶಿಖಾಮಣಿಯಲ್ಲಿ ಅವರು ಶರಣರ ಸಿದ್ದಾಂತವನ್ನು ಅಗಸ್ತ್ಯಮುನಿಗೆ ಬೋಧಿಸುತ್ತಾರೆ. 12ನೇ ಶತಮಾನದಲ್ಲಿ ಬದುಕಿದ್ದ ಅವರ ಕಾಲ ಕೃತಯುಗಕ್ಕೆ ಬದಲಾಗುತ್ತದೆ.

ಪ್ರಮುಖ ನಾಥ ಗುರುವಾಗಿದ್ದ ರೇವಣಸಿದ್ಧರಿಗೆ ಅಪಾರ ಭಕ್ತರಿದ್ದರು. ಅವರ ಹೊಸ ಸ್ವರೂಪ, ಪುರಾಣಗಳ ಪ್ರಭಾವದಿಂದ ಅವರಲ್ಲಿ ಅನೇಕರು ಪಂಚಾಚಾರ್ಯರ ವ್ಯವಸ್ಥೆಯೊಳಗೆ ಬಂದರು.

ಮೂಲ ಪೀಠದ ಚನ್ನಬಸವೇಶ್ವರರು ತಮ್ಮ ಕೃತಿಗಳಲ್ಲಿ ನಾಥ ಪಂಥದ ಮುಕ್ತಿ ಮುನಿನಾಥರನ್ನು ತಮ್ಮ ಪುರಾತನರೆಂದು ಸ್ಮರಿಸುತ್ತಾರೆ. ತಪ್ಪಿಯೂ ರೇವಣಸಿದ್ಧರ ಹೆಸರನ್ನು ಎಲ್ಲಿಯೂ ಹೇಳಿಲ್ಲ.

(‘ಬಾಳೇಹಳ್ಳಿಯಲ್ಲಿ ರಂಭಾಪುರಿ ಪೀಠದ ಸ್ಥಾಪನೆಯ ಕಾಲ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೩)

Share This Article
Leave a comment

Leave a Reply

Your email address will not be published. Required fields are marked *