ದಾವಣಗೆರೆ
ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ನಿವೃತ್ತಿ ಘೋಷಿಸಿಬೇಕೆಂದು ನಡೆದ ಸಿರಿಗೆರೆ ತರಳಬಾಳು ಮಠದ ಭಕ್ತರ ಸಭೆ ಆಗ್ರಹಿಸಿದೆ.
ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಶ್ರೀ ಮಠದ ಸದ್ಯದ ಪರಿಸ್ಥಿತಿಯೂ ಚರ್ಚೆಯಾಯಿತು.
“ಶಿಕ್ಷಣ ಸಂಸ್ಥೆ, ಇಂಜಿನಿಯರಿಂಗ್ ಕಾಲೇಜು ಹೀಗೆ ಶಿಕ್ಷಣ ಕ್ಷೇತ್ರಕ್ಕೆ ಶ್ರೀಮಠ ಅಪಾರ ಕೊಡುಗೆ ನೀಡುತ್ತಿತ್ತು. ಆದರೆ, ಇಂದು ಅದೆಲ್ಲಾ ಮುಚ್ಚುವ ಪರಿಸ್ಥಿತಿ ಬಂದಿವೆ ಎನ್ನುವುದು ನೋವಿನ ಸಂಗತಿ,” ಎಂದು ಶಿವಶಂಕರಪ್ಪ ಹೇಳಿದರು.
ಮಠದಲ್ಲಿ ಸುಮಾರು 300-400 ಕೋಟಿ ಹಣವಿದ್ದು, ಇವೆಲ್ಲಾ ಭಕ್ತರು 10 ಪೈಸೆಯಿಂದ ಕೋಟ್ಯಾಂತರ ರೂಪಾಯಿ ಕೊಟ್ಟಿರುವ ಕಾಣಿಕೆ, ಎಂದರು.
ಸಭೆಯಲ್ಲಿ ಮಾತನಾಡುತ್ತ ಉದ್ಯಮಿ, ಸಮುದಾಯದ ಮುಖಂಡ ಅಣಬೇರು ರಾಜಣ್ಣ ಮಠದ ವಿದ್ಯಾಸಂಸ್ಥೆಗಳು ಮುಚ್ಚುತ್ತಿವೆ, ಕಲ್ಯಾಣ ಮಂಟಪಗಳು ಹಾಳಾಗುತ್ತಿವೆ, ಮಠಕ್ಕೆ ಹೋದವರಿಗೆ ಊಟವನ್ನೂ ಹಾಕಲ್ಲ ಎಂದು ದೂರಿದರು.
ಮಾಜಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ‘ಇಲ್ಲಿ ಸೇರಿರುವವರು ಮಠದ ಭಕ್ತರೇ, ನಮ್ಮ ಹಿರಿಯರು ಕಟ್ಟಿದ ವಿದ್ಯಾಸಂಸ್ಥೆಗಳು ಹಾಳಾಗುತ್ತಿರುವುದನ್ನು ನೋಡಿ ಸುಮ್ಮನಿರಬೇಕಾ’ ಎಂದು ಪ್ರಶ್ನಿಸಿದರು.