ಕನ್ನಡಿಗರಲ್ಲಿ ಕಾಣದ ಹೋರಾಟದ ಮನೋಭಾವ

ಕನ್ನಡಿಗರಲ್ಲಿ ಹೋರಾಟದ ಮನಸ್ಸಿನ ಅಭಾವವಿದೆ, ಸ್ವಾಭಿಮಾನಕ್ಕಿಂತ ಸಹನೆಯೇ ಹೆಚ್ಚು. ಉತ್ತರ ಭಾರತದಿಂದ ಬಂದ ವೈದಿಕ ಧರ್ಮದ ಪ್ರಭಾವದಲ್ಲಿ ಶತಮಾನಗಳ ಕಾಲ ಬದುಕಿದ ಪರಿಣಾಮವಿದು.

ವೈದಿಕದಲ್ಲಿ ಒಂದು ದ್ವಂದ್ವವಿದೆ. ವ್ಯಕ್ತಿಗಳು ದೇವರಿಗೆ ಸಮಾನ ಎನ್ನುವ ‘ಸೋಹಂ’ ತತ್ವ (ನಾನೆ ಅವನು). ಸಮಾಜವನ್ನು ನಾಲ್ಕು ವರ್ಣಗಳಾಗಿ ವಿಭಜಿಸಿ, ಅವುಗಳನ್ನು ಭಿನ್ನವಾಗಿರಿಸುವ ಮತ್ತೊಂದು ತತ್ವ.

ವ್ಯಕ್ತಿಗಳಿಗೆ ಮೋಕ್ಷ ಪ್ರಾಪ್ತಿಸುವ ಆಧ್ಯಾತ್ಮಿಕ ಸಂದೇಶಗಳು ಈ ಧರ್ಮದಲ್ಲಿ ರಾರಾಜಿಸಿದವು. ಉದಾ: ಸತ್ಯಂ ವದ, ಧರ್ಮಂ ಚರ ” (ಸತ್ಯವನ್ನು ಹೇಳು, ಸದಾಚಾರವನ್ನು ಅನುಸರಿಸು).

ಆದರೆ ಸಮಾಜದಲ್ಲಿನ ಅನ್ಯಾಯ, ಅಸಮಾನತೆ ಪ್ರಶ್ನಿಸುವ ಚಿಂತನೆ ವಿರಳವಾಯಿತು. ವಿಪ್ರನಿಂದ ಅಂತ್ಯಜನವರೆಗೆ ಎಲ್ಲರೂ ಒಂದೇ ಎಂಬ ಸಾಮಾಜಿಕ ಸಂದೇಶಕ್ಕೆ ಈ ಧರ್ಮದಲ್ಲಿ ಆಸ್ಪದವಿರಲಿಲ್ಲ.

ವೈದಿಕ ಧರ್ಮದಲ್ಲಿ ಆಧ್ಯಾತ್ಮಿಕ ಸಂದೇಶವನ್ನು ಸಾಮಾನ್ಯ ಘೋಷಣೆಯ ಮೂಲಕ ಸಾರುವವರು ಮಹಾತ್ಮರಾಗುತ್ತಾರೆ. ಆದರೆ ಸಮಾಜದ ಒಳಿತಿಗಾಗಿ ಹೋರಾಡುವವರು ಹುತಾತ್ಮರಾಗುತ್ತಾರೆ.

ಅಂತವರು ಜೀವನದ ಉದ್ದಕ್ಕೂ ಸಣ್ಣ, ಸಣ್ಣ ಶಿಲುಭೆಗಳನ್ನು ಏರಬೇಕಾಗುತ್ತದೆ. ಇಂತಹ ಆಧ್ಯಾತ್ಮದ ಪ್ರಭಾವದಲ್ಲಿ ಬೆಳೆದ ಕನ್ನಡಿಗರು ಹೋರಾಟದ ಮನೋಭಾವನೆ ರೂಡಿಸಿಕೊಳ್ಳಲಿಲ್ಲ.

(ಆಳ್ವಾಸ್ ನುಡುಸಿರಿ ಸಮ್ಮೇಲನ ಅಧ್ಯಕ್ಷ ಭಾಷಣದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೭)

Share This Article
Leave a comment

Leave a Reply

Your email address will not be published. Required fields are marked *