ಮುಂಡರಗಿ
ಪಟ್ಟಣದಲ್ಲಿ ಮೊದಲ ಬಾರಿಗೆ ಉತ್ಸವದ ಪಲ್ಲಕ್ಕಿಯನ್ನು ಶರಣೆಯರು ಹೊತ್ತು ಮೆರವಣಿಗೆಯಲ್ಲಿ ಸಾಗಿದರು.
ಶ್ರೀ ಜಗದ್ಗುರು ತೋಂಟದಾರ್ಯ ಮಠದಲ್ಲಿ ೧೫ ದಿನಗಳ ಕಾಲ ಜರುಗಿದ ಅನುಭಾವಿಗಳ ಅನುಭಾವ ದರ್ಶನ ಮಾಲಿಕೆಯ ಮಂಗಲೋತ್ಸವ ಕಾರ್ಯಕ್ರಮದ ಅಂಗವಾಗಿ ಬಸವಣ್ಣನವರ, ಯಡಿಯೂರು ಸಿದ್ದಲಿಂಗೇಶ್ವರರ ಭಾವಚಿತ್ರ ಮತ್ತು ವಚನ ಸಾಹಿತ್ಯ ಗ್ರಂಥಗಳ ಪಲ್ಲಕ್ಕಿ ಉತ್ಸವ ಮಂಗಳವಾರ ಜರುಗಿತು.
ಉತ್ಸವಕ್ಕೆ ಚಾಲನೆ ನೀಡಿದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ, ಪಲ್ಲಕ್ಕಿಯನ್ನು ಇದೇ ಮೊದಲ ಬಾರಿಗೆ ಮಹಿಳೆಯರೇ ಹೊತ್ತು ಸಾಗಲು ಅವಕಾಶ ಮಾಡಿಕೊಡಲಾಗಿದೆ.
ಶ್ರೀಮಠದಲ್ಲಿ ಹೆಣ್ಣು ಗಂಡು ಎನ್ನುವ ಭೇದ ಭಾವವಿಲ್ಲ. ಬಸವಾದಿ ಪ್ರಮಥರ ತತ್ವ ಸಿದ್ಧಾಂತದ ಪ್ರಕಾರ ತೋಂಟದಾರ್ಯ ಮಠ ನಡೆದುಕೊಂಡು ಬರುತ್ತಿದೆ. ಈ ಪಲ್ಲಕ್ಕಿ ಉತ್ಸವವು ಜಂಗಮಾತ್ಮಕ ವಿಚಾರವಾಗಿದೆ ಎಂದರು.
ಪ್ರವಚನ ಸಮಿತಿ ಅಧ್ಯಕ್ಷ ಎಸ್.ಎಸ್.ಗಡ್ಡದ, ಕಾರ್ಯದರ್ಶಿ ಅಡಿವೆಪ್ಪ ಚಲವಾದಿ, ಶಿವಕುಮಾರ ಬೆಟಗೇರಿ, ವಿಶ್ವನಾಥ ಉಳ್ಳಾಗಡ್ಡಿ, ವೀರೇಂದ್ರ ಅಂಗಡಿ, ಪವನ್ ಚೋಪ್ರಾ, ಪಾಲಾಕ್ಷಿ ಗಣದಿನ್ನಿ, ಸದಾಶಿವಯ್ಯ ಕಬ್ಬೂರಮಠ, ಮಂಗಳಾ ಸೀರಿ, ನೀಲಮ್ಮ ಗಿಂಡಿಮಠ, ಮಂಗಳಾ ಕರ್ಜಗಿ, ಶಿವಗಂಗಾ ನವಲಗುಂದ, ಶಾಂತಾ ಕುಬಸದ, ಈರಮ್ಮ ಹಾಲಗಿ, ಅನ್ನಕ್ಕ ಸಜ್ಜನರ, ಮಂಗಳಾ ಅಮರಗೋಳಮಠ, ಮತ್ತೀತರಿದ್ದರು.