ಬೀದರ್
ಲಿಂಗಾಯತ ಮಹಾಮಠದ ಪ್ರವಚನ ಅಭಿಯಾನದ ಕರಪತ್ರವನ್ನು ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಗೀತಾ ಈಶ್ವರ ಖಂಡ್ರೆ ಬೀದರದಲ್ಲಿ ಭಾನುವಾರ ಬಿಡುಗಡೆ ಮಾಡಿದರು.
ನಗರದಲ್ಲಿ ಲಿಂಗಾಯತ ಮಹಾಮಠದ ವತಿಯಿಂದ ಹಮ್ಮಿಕೊಳ್ಳಲಾದ 770 ಬಸವ ತತ್ವ ಪ್ರವಚನಗಳ ಅಭಿಯಾನದ ಕರಪತ್ರ ಬಿಡುಗಡೆಗೊಳಿಸಿ ಆರೋಗ್ಯಪೂರ್ಣ ಸಮಾಜಕ್ಕೆ ಬಸವಾದಿ ಶರಣರ ತತ್ವಗಳ ಪ್ರಚಾರ ಅಗತ್ಯವಾಗಿದೆ ಎಂದು ಹೇಳಿದರು.
ಪ್ರವಚನಗಳ ಅಭಿಯಾನದ ಅಂಗವಾಗಿ ಗ್ರಾಮ, ಹೋಬಳಿ, ಪಟ್ಟಣ, ನಗರ ಸೇರಿದಂತೆ 770 ಕಡೆಗಳಲ್ಲಿ ಪ್ರಭುದೇವ ಸ್ವಾಮೀಜಿ ಪ್ರವಚನ ನೀಡಲಿದ್ದಾರೆ ಎಂದು ಲಿಂಗಾಯತ ಮಹಾಮಠದ ಪ್ರಮುಖರಾದ ರಮೇಶ ಮಠಪತಿ ಮಾಹಿತಿ ನೀಡಿದರು.
ಮೊದಲ ಪ್ರವಚನ ಗೋರ್ಟಾ(ಬಿ), ಎರಡನೇ ಪ್ರವಚನ ನೆರೆಯ ತೆಲಂಗಾಣದ ಜಹೀರಾಬಾದ್ನಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಪ್ರಮುಖರಾದ ಜಯರಾಜ ಖಂಡ್ರೆ, ಡಾ. ಶಿವಕುಮಾರ ಶೆಟಕಾರ್, ಡಾ. ರಾಜಶೇಖರ ಸೇಡಂಕರ್, ಹಾವಶೆಟ್ಟಿ ಪಾಟೀಲ, ಕೃಪಾಸಿಂಧು ಪಾಟೀಲ, ಸೂರ್ಯಕಾಂತ ರಾಮಶೆಟ್ಟಿ, ಕಾಮಶೆಟ್ಟಿ ಚಿಕ್ಕಬಸೆ, ಸೋಮಶೇಖರ ಪಾಟೀಲ, ಕವಿತಾ ಪ್ರಭಾ, ಡಾ. ಜಯಶ್ರೀ ರತಿಕಾಂತ ಸ್ವಾಮಿ, ಅನುರಾಧ ತಟಪಟ್ಟಿ, ಉಮಾ ಮಣಗೆ, ಡಾ. ಶಾಂತಲಾ ಕೌಜಲಗಿ, ಶಾಂತಾ ಖಂಡ್ರೆ ಮತ್ತಿತರರು ಇದ್ದರು.
ಶಿವಕುಮಾರ ಪಾಖಾಲ್ ಸ್ವಾಗತಿಸಿದರು. ಪ್ರಭು ತಟಪಟ್ಟಿ ವಂದಿಸಿದರು