ಕಾಪು (ಪಡುಬಿದ್ರಿ)
ಕಾಪು ತಾಲ್ಲೂಕಿನ ಮಜೂರಿನ ಉರಗ ಪ್ರೇಮಿ ಗೋವರ್ಧನ್ ರಾವ್ ಪ್ರತಿ ನಾಗರಪಂಚಮಿಯಂದು ಜೀವಂತ ನಾಗನಿಗೆ ನೀರು, ಸೀಯಾಳ ಹಾಗೂ ಅರಶಿನ ಹುಡಿಯನ್ನು ಎರೆದು, ಆರತಿ ಬೆಳಗಿ ಪೂಜೆ ಮಾಡಲಾಗುತ್ತಾರೆ.
ಗೋವರ್ಧನರಾವ್ ಗಾಯಗೊಂಡ ನಾಗರ ಹಾವುಗಳನ್ನು ರಕ್ಷಿಸಿ, ಶುಶ್ರೂಷೆ ಮಾಡಿ ಪೂರ್ಣವಾಗಿ ಗುಣಮುಖಗೊಂಡ ಹಾವನ್ನು ಮತ್ತೆ ಕಾಡಿಗೆ ಸೇರಿಸುತ್ತಾರೆ.
ಗಾಯಗೊಂಡು ಶುಶ್ರೂಷೆಯಲ್ಲಿರುವ ಹಾವುಗಳಿಗೆ ನಾಗರಪಂಚಮಿಯಂದು ಪೂಜೆ ಕೂಡ ಮಾಡುತ್ತಾರೆ. ನಾಗರ ಹಾವು ಮೃತಪಟ್ಟರೆ, ಅವರೆ ಬಂದು ನಾಗರಹಾವಿನ ಅಂತ್ಯಕ್ರಿಯೆ ಮಾಡುತ್ತಾರೆ.
ವರ್ಷಕ್ಕೆ ಸುಮಾರು 20 ರಿಂದ 25 ನಾಗರ ಹಾವುಗಳನ್ನು ಶುಶ್ರೂಷೆ ಮಾಡಿ ಕಾಡಿನಲ್ಲಿ ಬಿಡುವುದು ಇವರ ಕಾಯಕ ಆಗಿದೆ.