ಬಸವ ಸಮಿತಿ ನೀಡುವ ಗೌರವ, ಸನ್ಮಾನಗಳಿಗೆ ಈ ವರ್ಷ ಆಯ್ಕೆಯಾದವರ ಪಟ್ಟಿ ಬಿಡುಗಡೆಯಾಗಿದೆ.
ದಾಸೋಹ ರತ್ನ ಪುರಸ್ಕಾರ:
ಧರ್ಮಪ್ರಕಾಶ ಶ್ರೀ ಮುರಿಗೆಪ್ಪ ಚಿಗಟೇರಿ ಮನೆತನ-ದಾವಣಗೆರೆ
ಬಸವ ವಿಭೂಷಣ ಪುರಸ್ಕಾರ:
ಡಾ. ಸಿ.ಎಂ. ಕುಂದಗೋಳ-ಸಂಯೋಜಕರು, ಬಸವ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
ಬಸವಭೂಷಣ ಪುರಸ್ಕಾರ:
೧ ಶ್ರೀ ಹರೀಶ ಆರ್. ಹಿರೇಮಠ-ಹ್ಯೂಸ್ ಟನ್, ಟೆಕ್ಲಾಸ್, ಯುಎಸ್ಎ
೨ ಶ್ರೀ ಶಂಕರ ಗುಡಾಸ್ ಕುಟುಂಬ-ಬೆಳಗಾವಿ
೩ ಶ್ರೀ ವಚನ ಕುಮಾರಸ್ವಾಮಿ ದಂಪತಿಗಳು-ಮೈಸೂರು
ಬಸವ ಶ್ರೀ ಪುರಸ್ಕಾರ:
ಶ್ರೀ ವೀರೇಂದ್ರ ಮಂಗಲಗೆ ಔರಂಗಬಾದ, ಮರಾಠವಾಡ, ಮಹಾರಾಷ್ಟ್ರ
ವಿಶಿಷ್ಟ ಸಾಧನೆಗೈದಿರುವ ಮನೆತನದವರಿಗೆ ಹಾಗೂ ಮಹನೀಯರುಗಳಿಗೆ ಬಸವ ಸಮಿತಿಯಿಂದ ಈ ಗೌರವ ಕೊಡಮಾಡಲಾಗುತ್ತಿದೆ, ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಬಸವ ಸಮಿತಿಯ ಸಂಸ್ಥಾಪಕರಾದ ಡಾ. ಬಿ.ಡಿ. ಜತ್ತಿ ಅವರ 112ನೇ ಜಯಂತಿ ಮಹೋತ್ಸವ ಹಾಗೂ ಬಸವ ಸಮಿತಿ ವಜ್ರ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪುರಸ್ಕಾರಕ್ಕೆ ಆಯ್ಕೆಯಾದವರನ್ನು ಗೌರವಿಸಲಾಗುವುದು.
ಸಮಾರಂಭ ಸೆಪ್ಟೆಂಬರ್ 14,2024 ಶನಿವಾರ 10.30 ಗಂಟೆಗೆ ಬೆಂಗಳೂರಿನ ಬಸವ ಸಮಿತಿ ಸಭಾಂಗಣದಲ್ಲಿ ನಡೆಯಲಿದೆ.
ಶ್ರೀ ಬಸವರಾಜ ಹೊರಟ್ಟಿ ಸಭಾಪತಿಗಳು, ಕರ್ನಾಟಕ ವಿಧಾನ ಪರಿಷತ್ತು ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿ.ಎಸ್. ಪರಮಶಿವಯ್ಯ ಮಾಜಿ ಅಧ್ಯಕ್ಷರು, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಬರಲಿದ್ದಾರೆ. ಅಧ್ಯಕ್ಷತೆಯನ್ನು ಡಾ. ಅರವಿಂದ ಜತ್ತಿ ಅಧ್ಯಕ್ಷರು, ಬಸವ ಸಮಿತಿ, ಬೆಂಗಳೂರು ಹಾಗೂ ಸಾನಿಧ್ಯವನ್ನು ಬೇಲಿ ಮಠಾಧ್ಯಕ್ಷರು, ಬೇಲಿಮಠ ಸಂಸ್ಥಾನ, ಬೆಂಗಳೂರು ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ 2023-24 ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಕೆ.ಎಲ್.ಇ. ಬಸವ ಬಾಲಕಿಯರ ವಸತಿ ಶಾಲೆ ವಿದ್ಯಾರ್ಥಿನಿಯರಿಗೆ, ಲಿಂಗೈಕ್ಯ ಸಂಗವ್ವ ಜತ್ತಿಯವರ ಸಂಸ್ಮರಣೆಯಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಗುವುದು, ಎಂದು ಬಸವ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.