ಕಲಬುರಗಿ:
ಇವತ್ತಿನ ಸಮಾಜದಲ್ಲಿ ಶರಣರನ್ನು ವೈದಿಕರು ತಮ್ಮ ಅನುಕೂಲಕ್ಕೆ ಚಿತ್ರಿಸುವ ಪ್ರಯತ್ನ ನಡೆಸಿದ್ದಾರೆ. ದೇಹವೇ ದೇಗುಲವೆಂದ ಶರಣರ ಸಂದೇಶವನ್ನು ನಾವೆಲ್ಲರೂ ತಿಳಿದುಕೊಂಡು, ಗುಡಿ ಗುಂಡಾರಗಳಿಂದ ದೂರ ಉಳಿದು, ಕಾಯಕ ದಾಸೋಹ ಮಹತ್ವದ ಸಮಸಮಾಜ ಕಟ್ಟಬೇಕಾಗಿದೆ. ಸಮಾಜದ ಒಳತಿಗಾಗಿ ನಾವೆಲ್ಲ ಶ್ರಮಿಸೋಣ ಎಂದು ಕೊಪ್ಪಳದ ಹಿರಿಯ ಬಂಡಾಯ ಸಾಹಿತಿ, ಶರಣ ಅಲ್ಲಮಪ್ರಭು ಬೆಟ್ಟದೂರ ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾ, ಬಸವಪರ ಸಂಘಟನೆಗಳ ಆಶ್ರಯದಲ್ಲಿ ನಡೆದಿರುವ ಶ್ರಾವಣ ತಿಂಗಳ ‘ವಚನವೈಭವ’ ೨೩ನೇ ದಿನ ಶರಣ ಜಗನ್ನಾಥ ರಾಚೊಟ್ಟೆ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.
ಶರಣ ಮಡಿವಾಳ ಮಾಚಿದೇವ ತಂದೆಯವರ ಕುರಿತು ಶರಣ ಶಿವರಂಜನ ಸತ್ಯಂಪೇಟೆ ಮಾತನಾಡುತ್ತಾ, ವೀರಭದ್ರನ ಅವತಾರ ಅಂತ ಹೇಳಿ ವೈದಿಕರು ಮಾಚಿದೇವರ ಇಡೀ ಜೀವನ ಚರಿತ್ರೆಯನ್ನು ಮೂಢನಂಬಿಕೆಗೆ ತಳ್ಳುತ್ತಿರೋದು ದುರಂತ, ಇದರ ಬಗ್ಗೆ ಸಮಾಜ ಜಾಗೃತಿಯಿಂದ ಇರಬೇಕೆಂದರು.
ಅಧ್ಯಕ್ಷತೆಯನ್ನು ಶರಣ ಎಸ್.ಎನ್.ಪಾಟೀಲ ವಹಿಸಿ ಮಾತನಾಡಿದರು.
ಜಾಗತಿಕ ಲಿಂಗಾಯತ ಮಹಾಸಭೆಯ ಆರ್.ಜೆ. ಶೆಟಗಾರ, ಶಶಿಕಾಂತ ಪಸಾರ, ಸಿದ್ದರಾಮ ಯಳವಂತಗಿ, ಧನರಾಜ ತಾಂಬೋಳಿ, ಹನುಮಂತರಾಯ ಕೂಸನೂರ, ಸಾವಿತ್ರಿ ಪಾಲಕಿ, ನಳಿನಿ ಮಹಾಗಾಂವಕರ, ಬಸಮ್ಮ ರಾಜಾಪುರ ಮತ್ತೀತರರು ಭಾಗವಹಿಸಿದ್ದರು.