ಬಸವನ ಬಾಗೇವಾಡಿ
ಬಸವಣ್ಣನವರ ಜನ್ಮ ಸ್ಥಳದಲ್ಲಿ ಇದೇ ಪ್ರಥಮ ಬಾರಿಗೆ ಆಯೋಜಿಸಲಾಗಿದ್ದ ಬಸವ ಬೈಕ್ ರೇಸಿಗೆ ಉತ್ತಮ ಪ್ರತಿಕ್ರಿಯೆ ಬಂದಿದೆ, ಎಂದು ರಾಷ್ಟ್ರೀಯ ಬಸವ ಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ತಿಳಿಸಿದ್ದಾರೆ.
ಬಸವ ಬೈಕ್ ರೇಸನ್ನು ಆಯೋಜಿಸಿದ್ದು ಇದೇ ಮೊದಲ ಬಾರಿ ವರ್ಷವಾದರೂ, ಮುಂದಿನ ವರ್ಷ ಮತ್ತೆ ಆಯೋಜಿಸಲಾಗುವುದೆಂದು ಹೇಳಿದರು.
ವೇಗವಾಗಿ ಚಲಿಸುವ ಬೈಕ್ ರೇಸುಗಳಲ್ಲಿ ಅಪಾಯವಿರುತ್ತದೆ. ಅವುಗಳನ್ನು ಆಯೋಜಿಸಲು ವಿಶೇಷ ಪರಿಣಿತಿ, ಅನುಭವ ಬೇಕಾಗಿರುತ್ತದೆ.
ಆದರೆ ನಿಧಾನವಾಗಿ ಚಲಿಸುವ ಬೈಕ್ ರೇಸುಗಳನ್ನು ಆಯೋಜಿಸುವುದು ಸುಲುಭ ಮತ್ತು ಯುವಕರಿಗೆ ಇದು ಮುಖ್ಯ ಆಕರ್ಷಣೆಯಾಗುತ್ತದೆ.
ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಇಂತಹ ಸ್ಲೋ ಬೈಕ್ ರೇಸ್ ಅನ್ನು ಆಯೋಜಿಸಲು ಇಚ್ಚಿಸುವ ಸಂಘಟನೆಗಳಿಂದ ಬಂದಿರುವ ಕೆಲವು ಪ್ರಶ್ನೆಗಳಿಗೆ ಉತ್ತರಿಸುತ್ತಾ ತಮ್ಮ ಅನುಭವ ಹಂಚಿಕೊಂಡರು.
1) ಕಾರ್ಯಕ್ರಮ ಆಯೋಜಿಸುವ ಬಗ್ಗೆ ಪೊಲೀಸ ಠಾಣೆಗೆ ಮೊದಲೇ ಮಾಹಿತಿ ನೀಡಬೇಕು.
2) ಕಮಿಟಿ ನಿರ್ಣಯವೆ ಅಂತಿಮ ನಿರ್ಣಯ ಎಂದು ಮೊದಲೇ ಸ್ಪರ್ಧಾಳುಗಳಿಗೆ ತಿಳಿಸಬೇಕು.
3) ಸ್ಪರ್ಧೆ ನಡೆಸುವ ಆವರಣದ ಸುತ್ತಲು ವೈಟ್ ಲೈನ್ ಹಾಕುವ ಮೂಲಕ ಪ್ರೇಕ್ಷಕರು ಒಳಗೆ ಬರದಂತೆ ತಡೆಯಬೇಕು.
4) ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸಲು ಒಂದು ಯುವಕರ ತಂಡದ ಅವಶ್ಯಕತೆ ಇದೆ.
5) ಸ್ಪರ್ಧೆಯಲ್ಲಿ ಭಾಗವಹಿಸಲು 250 ರೂಪಾಯಿ ಪ್ರವೇಶ ದರ ವಿಧಿಸಲಾಗಿತ್ತು. ಈ ರೀತಿ ಸಂಗ್ರಹವಾದ ದುಡ್ಡಿನಿಂದಲೇ ಬಹುಮಾನ ನೀಡುವ ಯೋಚನೆಯಿತ್ತು.
ಕೊಟ್ಟ ಬಹುಮಾನಗಳು: ಪ್ರಥಮ ಬಹುಮಾನ: 25,000; ದ್ವಿತೀಯ ಬಹುಮಾನ: 15,000; ತೃತೀಯ ಬಹುಮಾನ: 10,000 ನೀಡಲಾಗಿದೆ.
6) ರೇಸಿಗಿಂತ ಮುಂಚೆಯೇ ವ್ಯಾಪಕವಾಗಿ ಪ್ರಚಾರ ಕೊಡಬೇಕು.