ಗುಳೇದಗುಡ್ಡ ಬಸವ ಕೇಂದ್ರದ ವತಿಯಿಂದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ಗುಳೇದಗುಡ್ಡ ಬಸವ ಕೇಂದ್ರದ ವತಿಯಿಂದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಶನಿವಾರದಂದು
ಶರಣ ಹುಚ್ಚಪ್ಪ ಹೂಕ್ರಾಣಿ ಸರ್ (ಈರಣ್ಣ ತೋಣಗಟ್ಟಿ) ಇವರ ಮನೆಯಲ್ಲಿ ಜರುಗಿತು.

ಶರಣ ಆದಯ್ಯ ತಂದೆಯವರ ವಚನ,
ಮುತ್ತು ನೀರಲ್ಲಿ ಹುಟ್ಟಿ ಮರಳಿ ನೀರಾಗದಂತೆ
ತಿಳಿಯ ಕಾಸಿದ ತುಪ್ಪ ಕ್ಷೀರವಾಗದಂತೆ
ತೊಟ್ಟುಬಿಟ್ಟ ಹಣ್ಣು ಹೂಮಿಡಿಯಾಗದಂತೆ
ಸಂಸಾರದಲ್ಲಿ ಹುಟ್ಟಿ ಆದ ಹೊದ್ದದೆ
ಸ್ವಯಂಪ್ರಕಾಶ ಲಿಂಗದ ಬೆಳಗಿನಲ್ಲಿ ಬೆಳೆದು
ತಲ್ಲೀಯವಾಗಿರ್ದರಯ್ಯಾ
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು.

ಈ ವಚನ ಕುರಿತ ಗೋಷ್ಠಿಯಲ್ಲಿ ಶರಣರಾದ ಪ್ರೊ. ಶ್ರೀಕಾಂತ ಗಡೇದ, ಡಾ.ಗಿರೀಶ ನೀಲಕಂಠಮಠ, ಪ್ರೊ. ಮಹಾದೇವಯ್ಯ ನೀಲಕಂಠಮಠ, ಪ್ರೊ. ಸಿದ್ಧಲಿಂಗಪ್ಪ ಬರಗುಂಡಿ ಅವರುಗಳು ಅನುಭಾವಗೈದರು.

ಸಂಘಟನೆಯ ಶರಣರು, ಹೂಕ್ರಾಣಿ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Share This Article
3 Comments
  • ಬಸವ ಮೀಡಿಯಾ ಗಮನಿಸಿದೆ ಖುಷಿ ಆಯ್ತು. ಇಲ್ಲಿಗೆ ಲೇಖನ ಕಳಿಸುವುದಾದರೆ ಹೇಗೆ ?ತಿಳಿಸಿ.
    ಬಸವ ಬೆಳಗಿನ ಶರಣು ಶರಣಾರ್ಥಿಗಳು.🌱🙏🏻

    • ಸರ್

      ಶರಣು ಶರಣಾರ್ಥಿಗಳು

      ನಿಮ್ಮ ಲೇಖನ basavamedia1@gmail.com ಕಳಿಸಬಹುದು

      ಜೊತೆಗೆ ನಿಮ್ಮ ಫೋನ್ ನಂಬರ್ ಅನ್ನೂ ಇಮೇಲ್ ಮಾಡಿದರೆ ನಮ್ಮ ವಾಟ್ಸ್ ಆಪ್ ಗುಂಪಿಗೆ ಸೇರಿಸುತ್ತೇವೆ

      ಧನ್ಯವಾದ

Leave a Reply

Your email address will not be published. Required fields are marked *