ಭಾಲ್ಕಿ ಶ್ರೀಗಳಿಂದ ಸಿದ್ದಗಂಗಾ ಮಠ ವಚನ ಕಮ್ಮಟ ಉದ್ಘಾಟನೆ

ಬಸವ ಮೀಡಿಯಾ
ಬಸವ ಮೀಡಿಯಾ


ತುಮಕೂರು

ಭಾಲ್ಕಿ ಮಠದ ಡಾ ಶ್ರೀ ಬಸವಲಿಂಗಪಟ್ಟದೇವರು ಸಿದ್ದಗಂಗಾ ಮಠ ಮೂರು ದಿನಗಳ ವಚನ ಕಮ್ಮಟವನ್ನು ಮಂಗಳವಾರ ಉದ್ಘಾಟಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿದ್ದರು.

ಬಸವ ತತ್ವ ಮತ್ತು ಆಚರಣೆಗಳಲ್ಲಿ ತರಬೇತಿ ನೀಡುವ ಉದ್ದೇಶದಿಂದ ಆಯೋಜಿಸಲಾಗಿರುವ ಕಮ್ಮಟದಲ್ಲಿ ಸುಮಾರು ನೂರು ಮಠಾಧಿಪತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಮಠದ ಆಪ್ತರೊಬ್ಬರು ಹೇಳಿದರು.

ಪ್ರತಿ ದಿನವೂ ಇಷ್ಟ ಲಿಂಗ, ಯೋಗಾಸನ, ಷಟ್ಸ್ಥಲ ಧ್ವಜಾರೋಹಣಗಳ ಜೊತೆಗೆ ವಿಚಾರ ಘೋಷ್ಠಿಗಳು ನಡೆಯಲಿವೆ ಎಂದು ಹೇಳಿದರು. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀ ಗುರುಮಹಾಂತ ಸ್ವಾಮಿಗಳು, ಶ್ರೀ ಮಹಾಲಿಂಗ ಸ್ವಾಮಿಗಳು, ಶ್ರೀ ಶ್ರೀಕಾಂತ ಸ್ವಾಮಿಗಳು ಮುಂತಾದವರು ವಿಚಾರ ಘೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.

ಸಮಾರೋಪ ಭಾಷಣವನ್ನು ಗದಗಿನ ಮಠದ ಶ್ರೀ ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಮಾಡಲಿದ್ದಾರೆ.

ಸಿದ್ದಗಂಗಾ ಮಠದಲ್ಲಿ ಸುಮಾರು ಮೂರು ದಶಕಗಳ ಇಂತಹ ಕಾರ್ಯಕ್ರಮ ನಡೆಯುತ್ತಿದೆ ಎಂದು ಮಠದ ಆಪ್ತರು ಹೇಳಿದರು. ಸುಮಾರು 26 ವರ್ಷಗಳ ಹಿಂದೆ ನಡೆದಿದ್ದ ಶರಣ ಶಿಬಿರದಲ್ಲಿ 1000 ಜನ ಭಾಗವಹಿಸಿದ್ದರು, ಎಂದು ಹೇಳಿದರು.

ಲಿಂಗಾಯತ ಸಮಾಜದಲ್ಲಿ ಬಸವ ತತ್ವದ ಬಗ್ಗೆ ಜಾಗೃತಿ ಮೂಡುತ್ತಿರುವ ಹಿನ್ನಲೆಯಲ್ಲಿ ಮಠಾಧಿಪತಿಗಳನ್ನು ನಿಜಾಚರಣೆಗಳಲ್ಲಿ ತಯಾರು ಮಾಡಲು ಪ್ರಮುಖ ಮಠಗಳು ವಚನ ಕಮ್ಮಟಗಳನ್ನು ನಡೆಸಲು ಶುರುಮಾಡಿವೆ ಎಂದರು.

ಜೂಲೈನಲ್ಲಿ ಸಾಣೇಹಳ್ಳಿಯಲ್ಲಿ ನಡೆದ ವಚನ ಕಮ್ಮಟದ ಮಾದರಿಯಲ್ಲಿಯೇ ಸಿದ್ದ ಗಂಗಾ ಮಠದ ಕಮ್ಮಟ ನಡೆಯಲಿದೆ ಎಂದರು.

ಮುಂದಿನ ತಿಂಗಳು ಚಿತ್ರದುರ್ಗದ ಮುರುಘಾ ಮಠದಲ್ಲಿ 9 ದಿನಗಳ ವಚನ ಕಮ್ಮಟ ನಡೆಯಲಿದೆ.

Share This Article
2 Comments
  • ಇಂತಹ ವಚನ ಕರ್ನಾಟಕಗಳು ಇನ್ನು ಹೆಚ್ಚು ಹೆಚ್ಚು ನಡೆಯಲಿ ನಮ್ಮಂತಹ ಸಾಮಾನ್ಯ ಜನಗಳು ಸಹ ಭಾಗವಹಿಸುವ ಅವಕಾಶ ಕಲ್ಪಿಸಿ ಮತ್ತು ಬಸವ ತತ್ವ ಹಾಗೂ ಬಸವಾದಿ ಶರಣರ ವಚನಗಳನ್ನು ಹೆಚ್ಚು ಹೆಚ್ಚು ಕಲಿಯೋಣ ಮತ್ತು ಅದರಂತೆ ನಡೆಯೋಣ ಅಪ್ಪ ಬಸವಣ್ಣನವರನ್ನು ಮನೆ ಮನಗಳಲ್ಲಿ ನೆಲೆಸಲು ತಮ್ಮ ಕೈಲಾದ ಪ್ರಯತ್ನ ಮಾಡೋಣ ಹಾಗೂ ಇಂಥ ಶರಣರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗುತ್ತೇವೆ ಎಂದು ಈ ಮೂಲಕ ವಚನವನ್ನು ನೀಡುತ್ತೇವೆ ಶರಣು ಶರಣಾರ್ಥಿ

Leave a Reply

Your email address will not be published. Required fields are marked *