ಧಾರವಾಡ
(ಕರ್ನಾಟಕ ಹೈಕೋರ್ಟ್ಗೆ ನಾಡಿನ ಚಿಂತಕರು ಬರೆದಿರುವ ಪತ್ರ)
ಧಾರವಾಡದ ಹೈಕೋರ್ಟ್ ಸರ್ಕ್ಯೂಟ್ ಪೀಠದಲ್ಲಿ ನ್ಯಾಯಮೂರ್ತಿ ಶ್ರೀಕೃಷ್ಣ ದೀಕ್ಷಿತ್ರವರು ನ್ಯಾಯಕೋರಿ ಬಂದಿದ್ದ ಸತಿ-ಪತಿಗಳಿಬ್ಬರನ್ನು ಕೊಪ್ಪಳದ ಗವಿ ಸಿದ್ಧೇಶ್ವರ ಸ್ವಾಮೀಜಿಗಳ ಮಧ್ಯಸ್ಥಿಕೆಯಲ್ಲಿ ವಿವಾದವನ್ನು ಬಗೆಹರಿಸಿಕೊಳ್ಳಲು ಸೂಚಿಸಿರುವುದು ಅತ್ಯಂತ ವಿಷಾದನೀಯ ಮತ್ತು ಕಾನೂನು ಬಾಹಿರ ನಡೆಯಾಗಿದೆ ಇದನ್ನು ನಾವು ಬಲವಾಗಿ ವಿರೋಧಿಸುತ್ತೇವೆ .
ಜನರು ಅಂತಿಮವಾಗಿ ನ್ಯಾಯಾಲಯಕ್ಕೆ ಹೋಗುವುದು ನ್ಯಾಯ ಸಿಗುತ್ತದೆಯೆಂಬ ಭರವಸೆಯಿಂದ . ಆದರೆ , ನ್ಯಾಯಾಧೀಶರು ತಮ್ಮ ಕಾನೂನಬದ್ಧ ಕರ್ತವ್ಯವನ್ನು ನಿರ್ವಹಿಸುವ ಬದಲು, ಸತಿ-ಪತಿಯನ್ನು ಮಠಾಧೀಶರೊಬ್ಬರ ಬಳಿಗೆ ಮಧ್ಯಸ್ಥಿಕೆವಹಿಸಿ ವಿವಾದ ಬಗೆಹರಿಸಲು ಸೂಚಿಸುವುದು ಅಥವಾ ನಿರ್ದೇಶಿಸುವುದು, ಮಠಗಳು ಸಂವಿಧಾನ ಕೊಡಮಾಡಿರುವ ನ್ಯಾಯಾಲಯಗಳಿಗಿಂತ ದೊಡ್ಡವು ಎಂಬ ಭಾವನೆಯನ್ನು ಜನರಲ್ಲಿ ಬೆಳೆಸುತ್ತವೆ. ನ್ಯಾಯಾಲಯಗಳು ವಾದ -ಪ್ರತಿವಾದಗಳನ್ನು ಆಲಿಸಿ , ಸಾಕ್ಷ್ಯಾಧಾರಗಳನ್ನು ಸಮಗ್ರವಾಗಿ ಪರಿಶೀಲಿಸಿ ನ್ಯಾಯ ಒದಗಿಸುವ ಬದಲು ಮಠದ ಸ್ವಾಮೀಜಿಯವರ ಮಧ್ಯಸ್ಥಿಕೆಗೆ ಸೂಚಿಸುವುದು ಯಾವ ಬಗೆಯ ನ್ಯಾಯ ಎಂದು ನಮಗೆ ಅರ್ಥವಾಗುತ್ತಿಲ್ಲ.
ನಿರ್ಧಿಷ್ಟ ಜಾತಿ ಧರ್ಮಕ್ಕೆ ಸೇರಿದ ಮಠಮಾನ್ಯಗಳು ವಿವಾದಗಳನ್ನು ಬಗೆಹರಿಸುವ ನ್ಯಾಯಾಲಯಗಳಾದರೆ , ಸಂವಿಧಾನದ ಅಡಿಯಲ್ಲಿ ಸ್ಥಾಪಿತವಾಗಿರುವ ನ್ಯಾಯಾಲಯಗಳ ಅವಶ್ಯಕತೆಯಾದರು ಏನು ಎಂಬ ಪ್ರಶ್ನೆ ಮೂಡುತ್ತದೆ . ನ್ಯಾಯಾಲಯಗಳ ಬದಲು ನಾವು ಮಠಮಾನ್ಯಗಳನ್ನೇ ನ್ಯಾಯಾಲಯಗಳೆಂದು ಘೋಷಿಸಿಬಿಡಬಹುದು. ಗೌರವಾನ್ವಿತ ನ್ಯಾಯಾಧೀಶರ ಈ ನಡೆ ಸಂವಿಧಾನ ವಿರೋಧಿ ನಡೆಯಾಗಿದ್ದು, ಈ ಹಿಂದೆ ಮೇಲ್ಜಾತಿ ಮತ್ತು ಮೇಲ್ವರ್ಗದವರು ನಡೆಸುತ್ತಿದ್ದ ಪಂಚಾಯತಿ ಕಟ್ಟೆಯ ತೀರ್ಮಾನಗಳನ್ನು ನೆನೆಪಿಸುತ್ತದೆ. ಇದು ಕಾನೂನಿನ ನಿಯಮದ ಪ್ರಕಾರ ನ್ಯಾಯದಾನ ಮಾಡುವ ಬದಲು ಮತೀಯತೆ, ಜಾತಿ ಮತ್ತು ಧರ್ಮದ ನೆಲೆಯಲ್ಲಿ ಅನ್ಯಾಯವನ್ನು ಕ್ರಮಬದ್ಧಗೊಳಿಸುವ ಕ್ರಮವಾಗಿದೆ.
ನ್ಯಾಯಾಧೀಶರಿಗೆ ಮಧ್ಯಸ್ಥಿಕೆಯ ಅಗತ್ಯ ಕಂಡಿದ್ದರೆ, ಕಾನೂನು ಸೇವಾ ಪ್ರಾಧಿಕಾರ ನಡೆಸುವ ಕಾನೂನು ಬದ್ದ ಸಂಧಾನ ಕೇಂದ್ರಕ್ಕೆ (ಮೀಡಿಯೇಷನ್ ಸೆಂಟರ್ ) ಕಳಿಸಲು ಸೂಚಿಸಬಹುದಿತ್ತು . ಅದನ್ನು ಬಿಟ್ಟು ಮಠಾಧೀಶರ ಮಧ್ಯಸ್ಥಿಕೆ ಸೂಚಿಸಿರುವುದು ಸಂವಿಧಾನ ಬದ್ಧ ನ್ಯಾಯಾಧೀಶರ ನ್ಯಾಯ ಪೀಠಕ್ಕಿಂತ ಧರ್ಮಾಧಾರಿತ ಮಠಾಧೀಶರ ಪೀಠವೇ ಮೇಲು ಎಂಬ ಸಂದೇಶ ರವಾನಿಸುತ್ತದೆ .
ಎಲ್ಲಕಿಂತ ಮಿಗಿಲಾಗಿ ವಿವಾದ ಬಗೆಹರಿಸಲಿರುವ ಪರ್ಯಾಯ ವ್ಯಸ್ಥೆಗೆ (ಎಡಿಆರ್ ) ಅಥವಾ ಮಧ್ಯಸ್ಥಿಕೆಗೆ ಎಲ್ಲೆಂದರಲ್ಲಿ ಶಿಫಾರಸು ಮಾಡುಲು ಕಾನೂನಿನಲ್ಲಿ ಅವಕಾಶ ಇಲ್ಲ. ಮೀಡಿಯೇಷನ್ ಮಾಡುವವರಿಗೂ ಕೆಲವು ಅರ್ಹತೆಗಳಿವೆ. ಆ ಅರ್ಹತೆ ಗವಿಸಿದ್ದೇಶ್ವರ ಶ್ರೀಗಳಿಗೆ ಇದೆ ಎಂಬುದನ್ನು ನ್ಯಾಯಾಲಯ ಖಚಿತಪಡಿಸಿಕೊಂಡಿದೆಯೇ ಎಂಬ ಬಗ್ಗೆ ನ್ಯಾಯಾಲಯ ಏನನ್ನು ಹೇಳಿಲ್ಲ .
ದಂಪತಿಗಳು ನೇರವಾಗಿ ಸ್ವಾಮೀಜಿಯ ಬಳಿ ಹೋಗಿ ಮಧ್ಯಸ್ಥಿಕೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದಕ್ಕೂ, ನ್ಯಾಯಾಲಯವೇ ಅವರನ್ನು ಸ್ವಾಮೀಜಿಯ ಬಳಿ ಹೋಗುವಂತೆ ಸೂಚಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ನಾವು ವ್ಯಕ್ತಿಯೊಬ್ಬರ ಬಳಿ ನಾವಾಗಿಯೇ ಹೋಗುವುದು ನಮ್ಮ ನಂಬಿಗೆ ವಿಶ್ವಾಸವಾದರೆ ನ್ಯಾಯಾಲಯದ ಮೊರೆ ಹೋಗುವುದು ನಮ್ಮ ವೈಯುಕ್ತಿಕ ನಂಬಿಕೆ ವಿಶ್ವಾಸಗಳನ್ನು ಮೀರಿ ಕಾನೂನಿನ ಚೌಕಟ್ಟಿನಲ್ಲಿ ಸಂವಿಧಾನದ ಆಶಯದಂತೆ ವಾಸ್ತವಿಕ ನ್ಯಾಯವನ್ನು ಕೊಡಮಾಡುವುದಾಗಿದೆ. ಇವೆರಡನ್ನು ಅದಲು-ಬದಲಾಗಿ ಅಥವಾ ಪರ್ಯಾಯವಾಗಿ ನೋಡುವುದು ನ್ಯಾಯದ ಪರಿಕಲ್ಪನೆ ಮತ್ತು ಅದಕ್ಕಾಗಿ ನಾವು ರೂಪಿಸಿಕೊಂಡಿರುವ ನ್ಯಾಯಾಂಗ ವ್ಯವಸ್ಥೆಯನ್ನು ಅಣಕಿಸುವಂತಿದೆ.
ಸುಪ್ರೀಂ ಕೋರ್ಟು ಈ ತೀರ್ಮಾನವನ್ನು ಗಂಭೀರವಾಗಿ ಪರಿಗಣಿಸಿ ಸಂವಿಧಾನ ಬಾಹಿರವಾಗಿರುವ ಹೈಕೋರ್ಟಿನ ನ್ಯಾಯಾದೀಶರ ಇಂಥ ನಡೆಗಳ ಬಗ್ಗೆ ಕ್ರಮ ತಗೆದುಕೊಳ್ಳಬೇಕು. ಸೂಕ್ತವಾದ ನಿರ್ದೇಶನವನ್ನು ಅದೀನ ನ್ಯಾಯಾಲಯದ ನ್ಯಾಯಾಧೀಶರಿಗೆ ನೀಡಬೇಕೆಂದು ನಾವೆಲ್ಲ ಒತ್ತಾಯಿಸುತ್ತೇವೆ.
ಈ ತೀರ್ಪು ನೀಡಿದ ನ್ಯಾಯಮೂರ್ತಿಗಳೂ ಸಹ ತಮ್ಮ ಈ ತೀರ್ಪನ್ನು ಮರುಪರಿಶೀಲಿಸಬೇಕೆಂದು ನಾವು ಸಾರ್ವಜನಿಕವಾಗಿ ಒತ್ತಾಯಿಸುತ್ತೇವೆ.
ಡಾ. ವಿ ಪಿ ನಿರಂಜನಾರಾಧ್ಯ ಬೆಂಗಳೂರ
ಬಸವರಾಜ ಸೂಳಿಭಾವಿ ಗದಗ
ಡಾ. ವಸುಂಧರ ಭೂಪತಿ ಬೆಂಗಳೂರ
ಬಿ. ಸುರೇಶ ಚಲನಚಿತ್ರ ತಯಾರಕರು ಬೆಂಗಳೂರ
ಡಾ. ಸಬಿಹಾ ಭೂಮಿಗೌಡ ಮೈಸೂರ
ಮೂಡ್ನಾಕೂಡ ಚಿನ್ನಸ್ವಾಮಿ
ಕ.ಮ. ರವಿಶಂಕರ, ಚಿತ್ರದುರ್ಗ
ಲಕ್ಷ್ಮಣ ಕೊಡಸೆ ಬೆಂಗಳೂರ
ಡಾ. ಜಯಲಕ್ಷ್ಮಿ.ಎಚ್.ಜಿ ಬೆಂಗಳೂರ
ಡಾ. ಮಂಜುನಾಥ್.ಬಿ.ಆರ್ ಬೆಂಗಳೂರ
ನಗರಗೆರೆ ರಮೇಶ ಬೆಂಗಳೂರ
ಡಾ. ತುಕಾರಾಮ ಮೈಸೂರ
ಶ್ರೀಪಾದ ಭಟ್ಟ ಬೆಂಗಳೂರ
ಪೂಜಾ ಸಿಂಗೆ ಮಲ್ಲಸಮುದ್ರ
ಪ್ರಕಾಶ ಬಿ ಶಿರಸಿ
ಮುತ್ತು ಬಿಳಯಲಿ ಬೆಟಗೇರಿ
ಜೆ ಎಂ ವೀರಸಂಗಯ್ಯ ಹಗರಿಬೊಮ್ಮನಹಳ್ಳಿ
ಬಸವರಾಜ ಬ್ಯಾಗವಾಟ ದೇವದುರ್ಗ
ಎಸ್ ಸತ್ಯಾ ಬೆಂಗಳೂರ
ವಿಶುಕುಮಾರ ಬೆಂಗಳೂರ
ಅನಿಲ ಹೊಸಮನಿ ವಿಜಯಪುರ
ವಿ ಕೆ ಸಂಜ್ಯೋತಿ ಬೆಂಗಳೂರ
ಕೆ ಎಸ್ ವಿಮಲಾ ಬೆಂಗಳೂರ
ಕೆ ವೆಂಕಟರಾಜು ಚಾಮರಾಜನಗರ
ಸುರೇಂದ್ರ ರಾವ್ ಬೆಂಗಳೂರ
ಪ್ರಶಾಂತ್ ಹೊಸಪೇಟೆ
ಕರಿಬಸಪ್ಪ ಎಂ ದಾವಣಗೆರೆ
ಪ್ರಭಾಕರ್ ಎಸ್ ಚಾಮರಾಜಪೇಟೆ
ಡಾ. ಕೆ. ನಾರಾಯಣ ಸ್ವಾಮಿ, ಬೆಂಗಳೂರು
ಡಾ. ಎಚ್. ಬಿ. ಪೂಜಾರ ಬೆಟಗೇರಿ
ಡಿ. ಎಂ ಬಡಿಗೇರ ಕೊಪ್ಪಳ
ಶಶಿಕಾಂತ ಕೆ ಲಿಂಗಸುಗೂರ
ಶರಣಪ್ಪ ಬಾಚಲಾಪುರ ಕೊಪ್ಪಳ
ಕಾರಳ್ಳಿ ಶ್ರೀನಿವಾಸ್ ಬೆಂಗಳೂರ
ಜಿ.ಪಿ.ಬಸವರಾಜು, ಮೈಸೂರು
ಡಾ. ನವೀನ್ ಮಂಡಗದ್ದೆ, ಶಿವಮೊಗ್ಗ
ರಮೇಶ ಗಬ್ಬೂರ ಗಂಗಾವತಿ
ಡಾ. ಚಂದ್ರಮತಿ ಸೋಂದಾ ಮೈಸೂರ
ಸವಿರಾಜ ಆನಂದೂರ ಬೆಂಗಳೂರ
ಪೃಥ್ವಿರಾಜ ಮಂಡ್ಯ
ಎಸ್ ಜಿ ಚಿಕ್ಕನರಗುಂದ ರಾಮದುರ್ಗ
ನೂರ್ ಜಹಾನ್, ಹೊಸಪೇಟೆ
ಸುರೇಶ ಶಂಕರಪುರ ನಂಜನಗೂಡ
ತ್ರೀಭುವನೇಶ್ವರಿ ಗೌರಿಬಿದನೂರ
ಅರಕಲಗೂಡ ಜಯಕುಮಾರ ಬೆಂಗಳೂರ
ಮೋದೂರು ತೇಜ
ನಿಂಗು ಬೆಣಕಲ್ಲ
ಕುರಕುರಿ ದರಣೇಂದ್ರ ಶಿರಸಿ
ವಾಗೀಶ ಎಂ ಆರ್, ಹೊಸಪೇಟೆ
ಎನ್ ಬಷಿರುದ್ದಿನ್ ಸೇಡಂ
ಸಿ.ಎಸ್.ಭೀಮರಾಯ, ಕಲಬುರ್ಗಿ
ಶಂಕರಗೌಡ ಸಾತ್ಮಾರ ಹುಬ್ಬಳ್ಳಿ
ಮಧುರ ಎನ್.ಕೆ , ದಾವಣಗೆರೆ
-ನಾ ದಿವಾಕರ ಮೈಸೂರ
ರಜನಿ ಗರುಡ ಧಾರವಾಡ
ಧ್ರುವ ಪಾಟೀಲ ಹಂಪಿ
ಸೂರ್ಯ ನಂದನ ರೆಡ್ಡಿ ಎಂ ವಿ
ಚಂದ್ರಶೇಖರ ಗಂಟೆಪ್ಪಗೋಳ ವಿಜಯಪುರ
ನಾಗರಾಜು ಮಂಡ್ಯ
ಚಂದ್ರಕಾಂತ ಅಂಗಡಿ ದೆಹಲಿ
ತೇಜಸ್ವಿ ಬಿ. ನಾಯ್ಕ, ಗೋಕರ್ಣ
ಕೇಶವ ಕಟ್ಟಿಮನಿ ಬಾಲೇಹೊಸೂರ
ಡಾ. ಕೆ ಆರ್ ದುರ್ಗಾದಾಸ ಧಾರವಾಡ
ಎಚ್.ಎಸ್.ಬಸವಪ್ರಭು. ಕಲಬುರಗಿ
ಮಹಾದೇವ ಹಡಪದ ಧಾರವಾಡ
ಡಾ. ವೈ ಬಿ ಹಿಮ್ಮಡಿ ಬೆಳಗಾವಿ
ಡಾ ಪ್ರದೀಪ್ ಮಾಲ್ಗುಡಿ ಘಟಪ್ರಭಾ
ಸುಮತಿ ಡಿ.ಜಿ ಮೈಸೂರ
ರವೀಂದ್ರನಾಥ ಸಿರಿವರ ಬೆಂಗಳೂರ
ನಾಗರಾಜ ಹರಪನಹಳ್ಳಿ ಕುಮಟಾ
ಈರಪ್ಪ ಸುತಾರ ಜಮಖಂಡಿ
ಶರಣು ಶೆಟ್ಟರ ಕಲ್ಲೂರ
ಧರ್ಮರಾಜ ಎಂ ಕಲ್ಯಾಣಿ, ಬೆಂಗಳೂರು.
ಎಂ ಶಿವಕುಮಾರ ಮೈಸೂರ
ಸಿದ್ಧಾರ್ಥ ಸಿಂಗೆ, ಅಥಣಿ
ಕೆ.ಪ್ರಭಾಕರನ್, ಶಿವಮೊಗ್ಗ.
ಶರೀಫ್ ಬಿಳೆಯಲಿ ಗದಗ
ನಿಂಗಜ್ಜ ಚೌದರಿ ಶಹಾಪುರ
ನಾಗರಾಜ ಎಂ ಎನ್ ಮೊಳಕಾಲ್ಮೂರ
ಪ್ರೊ. ತುಮಕೂರು ಚಂದ್ರಕಾಂತ
ಡಾ. ರಶ್ಮಿ ಹೆಗಡೆ ತಲಘಟ್ಟಪುರ
ಮಹೇಶಕುಮಾರ ಹನಕೆರೆ ಶಿರಸಿ
ಸಿ. ಅಶೋಕ ದಾವಣಗೆರೆ
ಮಹೇಶ ಸಿಂಗೆ ಚಿಕ್ಕೋಡಿ
ಹೇಮಾ ಪಟ್ಟಣಶೆಟ್ಟಿ ಧಾರವಾಡ
ಅಶೋಕ ಲೋಣಿ