ಕಲಬುರಗಿ:
ಮಕ್ಕಳಲ್ಲಿ ವಚನಗಳ ಮಹತ್ವ ಅರಿಯಲು ಹಾಗೂ ವ್ಯಕ್ತಿತ್ವ ವಿಕಸನ ಮೂಡಿಸಲು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ವಚನಗಳ ಸ್ಪರ್ಧೆಯನ್ನು ಅಕ್ಟೋಬರ್ 4ರಂದು ಬೆಳಗ್ಗೆ 10.00 ಗಂಟೆಗೆ ನಗರದ ಕೋಟನೂರ(ಡಿ) ಹತ್ತಿರದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆ ಪಕ್ಕದ ಗುರುದೇವ ಸೇವಾ ಸಂಸ್ಥೆ, ಸಮಾಧಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಉಪ ನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಇಲಾಖೆ (ಡಿಡಿಪಿಐ) ಸೂರ್ಯಕಾಂತ ಮದಾನೆ ತಿಳಿಸಿದ್ದಾರೆ.
ಪ್ರಯುಕ್ತ ತಮ್ಮ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ (5 ರಿಂದ 7ನೇ ತರಗತಿವರೆಗೆ) ಹಾಗೂ ಪ್ರೌಢ ಶಾಲಾ (8 ರಿಂದ 10ನೇತರಗತಿವರೆಗೆ) ವಿಭಾಗದಿಂದ ‘ ಪ್ರತಿ ಶಾಲೆ ಹಾಗೂ ಪ್ರತಿ ವಿಭಾಗಕ್ಕೆ ಒಬ್ಬರನ್ನು ಆಯ್ಕೆ ಮಾಡಿ ಗೊತ್ತುಪಡಿಸಿದ ಸ್ಥಳ ಹಾಗೂ ದಿನಾಂಕಕ್ಕೆ ಹಾಜರಾಗುವಂತೆ ಸೂಚಿಸಿ ಅಗತ್ಯ ಕ್ರಮ ವಹಿಸಲು ಎಲ್ಲಾ ಮುಖ್ಯ ಗುರುಗಳಿಗೆ ನಿರ್ದೇಶನ ನೀಡಿದ್ದಾರೆ.
ಈ ಕುರಿತು ಸ್ಥಳೀಯ ಗುರುದೇವ ಸೇವಾ ಸಂಸ್ಥೆ, ಸಮಾಧಾನ ಮನವಿ ಸಲ್ಲಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
 
							 
			     
			
 
                                