(ವಚನ ಮೂರ್ತಿ ಶ್ರೀ ಶ್ರೀಶೈಲ ಮಸೂತಿ ಅವರು ಇತ್ತೀಚೆಗೆ ಕೆಮಿಸ್ಟ್ರಿ ಅಧ್ಯಾಪಕರಾಗಿ ಸರಕಾರಿ ನೌಕರಿಯಿಂದ ನಿವೃತ್ತಿಯಾದರು.)
ನಿಮ್ಮ ಉಪ ಜೀವನ ವಿದ್ಯೆಯ ಕರ್ತವ್ಯ ನಿಷ್ಟೆ ಬದುಕು ಅತ್ಯಂತ ಸಾರ್ಥಕವಾಗಿ ಕಳೆದಿರುವಿರಿ. ಧರ್ಮಪಿತ ಬಸವಣ್ಣನವರ ಕಾಯಕವೇ ಕೈಲಾಸ ಮಾತು ಅಕ್ಷರಶಃ ಸತ್ಯ ಮಾಡಿ ತೋರಿದಿರಿ.
ನುಡಿಯಲ್ಲಿ ಎಚ್ಚೆತ್ತು ನಡೆಯಲ್ಲಿ ಅನುಸರಿಸಿದಿರಿ.
ಯೌವ್ವನದ ಹೊರಮಿಂಚಿನ ವಿದ್ಯಾರ್ಥಿಗಳ ಬಾಳಿಗೆ ಜ್ಞಾನದ ತೈಲ ಎರೆದಿರಿ.
ಕುಟುಂಬದ ನೋವುಗಳನ್ನು ವಿಷಕಂಠನಾಗಿ ನುಂಗಿ ನೀರು ಕುಡಿದಿರಿ.
ಅರವತ್ತು ವರುಷದ ಜೀವನ ಶ್ರೀಗಂಧದಂತೆ ಸವೆದಿರಿ.
ತನು ಮನ ಧನ, ಅಂಧ ಅನಾಥ ವೃದ್ಧ ಜೀವಗಳಿಗೆ ಧಾರೆ ಎರೆದಿರಿ.
ಮುಂದಿನ ನಡೆ ಏನು ಎಂದು ಕೈಕಟ್ಟಿ ಕೂಡದಿರಲು ನಿರ್ಧರಿಸಿ
ಬುದ್ಧ ಬಸವ ಭೀಮ ತೋರಿದ ಜ್ಞಾನದ ಬೆಳಕು ಪಸರಿಸಲು ಸಂಕಲ್ಪ ಗೈದಿರಿ.
ಶ್ರೀ ನುಡಿಗೆ ನೀವೆ ಸಂಪತ್ತಾಗಿ
ಶೈಲ ನುಡಿಗೆ ಪರ್ವತವಾಗಿ
ಮಸೂತಿ ನುಡಿಗೆ ನಿಮ್ಮ ಹೃದಯವೇ ನೆಮ್ಮದಿಯ ಪ್ರಾರ್ಥನೆ ಮಂದಿರವಾಗಲಿ..
ಅರವತ್ತರ ನಿವೃತ್ತಿ ಜೀವನ ಆನಂದದಾಯಕವಾಗಿ ಸಾಗಲಿ, ಮರಳಿ ಅರಳುವ ಜೀವ ನಿಮ್ಮದಾಗಿ ನಮ್ಮೆನ್ನೆಲ್ಲ ಜ್ಞಾನದ ಬೆಳಕಿನಲ್ಲಿ ಮುನ್ನೆಡೆಸಿರಿ, ಬುದ್ಧ ಬಸವ ಭೀಮರ ಶಕ್ತಿ ನಿಮ್ಮನ್ನು ಸದಾ ಕಾಪಾಡಲಿ.
ಶುಭಾರೈಕೆ
ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು
ಕಲ್ಯಾಣ ಮಹಾಮನೆ ಗುಣತೀರ್ಥವಾಡಿ-ಬಸವಕಲ್ಯಾಣ.