ಸಾಣೇಹಳ್ಳಿಯಲ್ಲಿ ನಡೆದ ಎರಡು ದಿನದ ಸರ್ವೋದಯ ಚಿಂತನ ಗೋಷ್ಠಿ

ಬಸವ ಮೀಡಿಯಾ
ಬಸವ ಮೀಡಿಯಾ

ಸಾಣೇಹಳ್ಳಿ

ಇಲ್ಲಿನ ಶ್ರೀಮಠದ ಆವರಣದಲ್ಲಿ ಅಕ್ಟೋಬರ್ 1 ಮತ್ತು 2 ರಂದು ಎರಡು ದಿನಗಳ ಕಾಲ ಪರಿಸರ, ಕೃಷಿ, ಆರೋಗ್ಯ, ಶಿಕ್ಷಣ, ರಾಜಕೀಯ ಈ ಎಲ್ಲ ಕ್ಷೇತ್ರಗಳ ಬಗ್ಗೆ ಚರ್ಚಿಸಲಾಯಿತು.

ಇತ್ತೀಚಿಗೆ ಎಲ್ಲ ಕ್ಷೇತ್ರಗಳಲ್ಲೂ ಅವನತಿ ಕಾಣುತ್ತಿದೆ. ಆ ಕಾರಣಕ್ಕಾಗಿ ಕರ್ನಾಟಕದ ಮುತ್ಸದ್ಧಿ ಚಿಂತಕರು ಸಾಣೇಹಳ್ಳಿ ಶ್ರೀಮಠದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ಪುನರುತ್ಥಾನಗೊಳಿಸಬೇಕು ಎನ್ನುವುದರ ಬಗ್ಗೆ ಚಿಂತನೆ ಮತ್ತು ಕಾರ್ಯಯೋಜನೆಯ ಬಗ್ಗೆ ಸಂವಾದ ನಡೆಸಲಾಯಿತು.

ಇದೊಂದು ದೊಡ್ಡ ಚಳವಳಿ ರೂಪದಲ್ಲಿ ಬೆಳೆಯಬೇಕು ಎನ್ನುವ ಅರಿವು ಆಧಾರಿತ ಚಿಂತನೆ ಮತ್ತು ಕಾರ್ಯಾಚರಣೆ ಇದರ ಉದ್ದೇಶ.

ಪರಿಸರ, ಕೃಷಿ, ಶಿಕ್ಷಣ, ರಾಜಕೀಯ ಕುರಿತಂತೆ ಸರ್ವೋದಯ ಚಿಂತಕರಾದ ಎಸ್.ಆರ್. ಹಿರೇಮಠ, ಅನಿಲ ಹೆಗಡೆ, ಡಾ. ನಾಡಗೌಡ, ಮಾಜಿ ಶಾಸಕ ಮಹಿಮಾ ಪಟೇಲ್, ಶ್ರೀಕುಮಾರ್, ಎಸ್.ಜಿ. ಸಿದ್ಧರಾಮಯ್ಯ, ಎಂ. ಬಸವರಾಜ, ಅಬ್ದುಲ್ ರಹಿಮಾನ್ ಪಾಷಾ, ಜೆ. ಎಸ್. ಪಾಟೀಲ, ಸಂಚಾಲಕ ಶಿವನಕೆರೆ ಬಸವಲಿಂಗಪ್ಪ ಮತ್ತಿತರ ಪ್ರಗತಿಪರ ಚಿಂತಕರು ಭಾಗವಹಿಸಿದ್ದರು.

ಎರಡು ದಿನಗಳ ಕಾಲ ಸುಧೀರ್ಘವಾಗಿ ಚರ್ಚಿಸಿ ಮಹಾತ್ಮಗಾಂಧೀಜಿಯವರ ಅರಿವು ಸಂಘಟನೆ, ಹೋರಾಟದ ಕಲ್ಪನೆಯನ್ನು ಮುಂದಿಟ್ಟುಕೊಂಡು ಎಲ್ಲ ಜಿಲ್ಲೆಯ ಪ್ರಗತಿಪರ ಚಿಂತಕರು, ಸಾಹಿತಿಗಳು, ಮಠಾಧೀಶರು ಸೇರಿಕೊಂಡು ಕಾರ್ಯಪ್ರವೃತ್ತರಾಗಬೇಕೆಂದು ಈ ಗೋಷ್ಠಿಯಲ್ಲಿ ಚರ್ಚಿಸಲಾಯಿತು.

Share This Article
1 Comment

Leave a Reply

Your email address will not be published. Required fields are marked *