ಹುಬ್ಬಳ್ಳಿ:
ನಾಡಿನ ಸಂಸ್ಕೃತಿಕ ಹಬ್ಬ ‘ವಿಜಯದಶಮಿ’ ಅಂಗವಾಗಿ ಹುಬ್ಬಳ್ಳಿಯಲ್ಲಿ ಶರಣೆಯರ ವಚನ ಹಾಗೂ ಅವರ ಜೀವನ ದರ್ಶನ ಕುರಿತಾದ “ವಚನ ದರ್ಬಾರ್” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಬಸವ ಕೇಂದ್ರ-ಮಹಿಳಾ ಘಟಕದಿಂದ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಬಸವ ಕೇಂದ್ರದ ಸಭಾಭವನದಲ್ಲಿ, ಅಕ್ಟೋಬರ್ 03ರಿಂದ 11ರ ವರೆಗೆ ಪ್ರತಿದಿನ ಸಂಜೆ 4:30ಕ್ಕೆ ಶರಣೆಯರ ವಚನ ಚಿಂತನೆಯ ಅನುಭಾವ ನಡೆಯಲಿದೆ.
ಅ.03ರಂದು ಶರಣೆ ಅಕ್ಕಮ್ಮ ಅವರ ವಚನ ಕುರಿತು ಅನುಭಾವವನ್ನು ಶರಣೆ ಶಾರದಾ ಪಾಟೀಲ,
ಅ.04ರಂದು ಶರಣೆ ಅಮುಗೆ ರಾಯಮ್ಮ ಅವರ ವಚನ ಕುರಿತು ಶರಣೆ ಸುನಂದ ಶಾಗೋಟಿ
ಅ.05ರಂದು ಶರಣೆ ಅಕ್ಕನಾಗಮ್ಮ ವಚನ ಕುರಿತು ದಾಕ್ಷಾಯಿಣಿ ಕೋಳಿವಾಡ
ಅ.06ರಂದು ಸತ್ಯಕ್ಕ ಶರಣೆಯ ವಚನ ಕುರಿತು ಶರಣೆ ಅನುಪಮಾ ಪಾಟೀಲ
ಅ.07ರಂದು ಶರಣೆ ಕದಿರೆ ರೇಮವ್ವೆ ಕುರಿತು ಶರಣೆ ಅನ್ನಪೂರ್ಣಕ್ಕ ಅಗಡಿ
ಅ.08ರಂದು ಶರಣೆ ಮೋಳಿಗೆ ಮಹಾದೇವಿ ವಚನ ಕುರಿತು ಶರಣೆ ಜಯಶ್ರೀ ಹಿರೇಮಠ
ಅ.09ರಂದು ಶರಣೆ ಗೊಗ್ಗವ್ವೆ ವಚನ ಕುರಿತು ಶರಣೆ ಶೋಭಾ ಹಿತ್ತಲಮನಿ
ಅ.10ರಂದು ಶರಣೆ ಕೊಟ್ಟಣದ ಸೋಮವ್ವ ವಚನ ಕುರಿತು ಶರಣೆ ಬಸಮ್ಮ ಕೋಟಿ
ಅ.11ರಂದು ಶರಣೆ ಕಾಳವ್ವೆ ವಚನ ಕುರಿತು ಶರಣೆ ಶಶಿಕಲಾ ಕೊಡೇಕಲ್ಲ ಅವರುಗಳ ಅನುಭಾವ ಇರುತ್ತದೆ.
ಮಹಿಳಾ ಘಟಕದ ಅಧ್ಯಕ್ಷೆ ಸುನಿಲಾತಾಯಿ ಬ್ಯಾಹಟ್ಟಿ, ಕಾರ್ಯಾಧ್ಯಕ್ಷೆ ಡಾ. ಸ್ನೇಹಾ ಭೂಷನೂರ, ಬಸವ ಕೇಂದ್ರದ ಅಧ್ಯಕ್ಷರಾದ ಪ್ರೊ. ಜಿ.ಬಿ. ಹಳ್ಯಾಳ ಅವರುಗಳು ಶರಣ, ಶರಣೆಯರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದಾರೆ.