ಅಕ್ಟೋಬರ್ 7ರಂದು ಲಿಂಗಾಯತ ಮುಖಂಡರಿಗೆ ಶರಣರ ಶಕ್ತಿ ತೋರಿಸುವ ಸಾಧ್ಯತೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ವಿವಾದಕ್ಕೆ ಸಿಲುಕಿರುವ ಶರಣರ ಶಕ್ತಿ ಚಲನಚಿತ್ರವನ್ನು ಅಕ್ಟೋಬರ್ 7ರಂದು ಲಿಂಗಾಯತ ಸಮಾಜದ ಮುಖಂಡರಿಗೆ ತೋರಿಸುವ ಮಾತು ನಡೆದಿದೆ ಎಂದು ತಿಳಿದು ಬಂದಿದೆ.

ಬೆಂಗಳೂರಿನಲ್ಲಿ 30 ಜನರನ್ನು ಕೂರಿಸಬಹುದಾದ ಸಭಾಂಗಣದಲ್ಲಿ ಸಿನೆಮಾವನ್ನು ತೋರಿಸಲು ಚಿತ್ರದ ನಿರ್ದೇಶಕ ನಿರ್ಧರಿಸಿದ್ದಾರೆ ಎಂದು ಲಿಂಗಾಯತ ಸಂಘಟನೆಯ ಮುಖಂಡರೊಬ್ಬರು ಹೇಳಿದರು.

ಗಂಗಾ ಮಾತಾಜಿ, ಭಾಲ್ಕಿ ಶ್ರೀಗಳು, ಗದುಗಿನ ಶ್ರೀಗಳು, ಇಳಕಲ್ಲ ಶ್ರೀಗಳು, ಚನ್ನಬಸವಾನಂದ ಸ್ವಾಮೀಜಿ ಮುಂತಾದ ಪ್ರಮುಖ ಗುರುಗಳು ಚಿತ್ರ ನೋಡಲು ಅಕ್ಟೋಬರ್ 7ರಂದು ಬೆಂಗಳೂರಿಗೆ ಬರುವ ಸಾಧ್ಯತೆಯಿದೆ.

ಅರವಿಂದ ಜತ್ತಿ, ಎಸ್ ಎಂ ಜಾಮದಾರ್, ಗೋರುಚೆ, ಜೆ.ಎಸ್.ಪಾಟೀಲ, ಅಶೋಕ ಬರಗುಂಡಿ ಮುಂತಾದವರನ್ನೂ ಆಹ್ವಾನಿಸಲಾಗುತ್ತಿದೆ ಎಂದು ಹೇಳಿದರು. ಲಿಂಗಾಯತ ಸಮಾಜದ ಒಬ್ಬ ಪ್ರಮುಖ ನಿರ್ಮಾಪಕರೂ ಚಿತ್ರ ವೀಕ್ಷಿಸಲು ಬರುವ ಸಾಧ್ಯತೆಯಿದೆ ಎಂದು ಹೇಳಿದರು.

ಚಿತ್ರ ನೋಡಿದ ನಂತರ ಮುಖಂಡರು ಅಲ್ಲೇ ಸಭೆ ನಡೆಸಿ ಸಮಸ್ಯೆಯಿರುವ ದೃಶ್ಯಗಳನ್ನು, ಚಿತ್ರಗಳಲ್ಲಿ ಅವುಗಳು ಕಾಣಿಸುವ ಅವಧಿಯನ್ನು ನಿಖರವಾಗಿ ಗುರುತಿಸಿ ನಿರ್ಮಾಪಕರಿಗೆ ಬರವಣಿಗೆಯಲ್ಲಿ ನೀಡಲಾಗುವುದು. ಅವರು ಈ ದೃಶ್ಯಗಳನ್ನು ತೆಗೆದುಹಾಕಿದ ಮೇಲೆ ಚಿತ್ರವನ್ನು ಕೆಲವರು ಮತ್ತೆ ನೋಡುತ್ತಾರೆ. ಸಮಸ್ಯೆಯಿರುವ ದೃಶ್ಯಗಳನ್ನು ಯೂಟ್ಯೂಬ್, OTT, ಖಾಸಗಿ ಪ್ರದರ್ಶನ ಎಲ್ಲಿಯೂ ಬಿಡುಗಡೆ ಮಾಡದಂತೆ ನಿರ್ಮಾಪಕರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗುವುದೆಂದು ಹೇಳಿದರು.

ಸಿನಿಮಾ ತಂಡಕ್ಕೆ ಹತ್ತಿರವಾಗಿರುವ ಹುಬ್ಬಳ್ಳಿಯ ನಿವೃತ ಅಧಿಕಾರಿಯೊಬ್ಬರು ಚಿತ್ರ ತೋರಿಸುವ ಮತ್ತು ನಂತರ ಸಮಸ್ಯೆಯಿರುವ ಭಾಗಗಳ ತೆಗೆಸಿ ಹಾಕುವ ಜವಾಬ್ದಾರಿ ಹೊತ್ತಿದ್ದಾರೆಂದು ಹೇಳಿದರು.

ಮಾತಿನ ಮೂಲಕ ಸಮಸ್ಯೆ ಬಗೆಹರಿಯದಿದ್ದರೆ ಬೇರೆ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು. ಶರಣರ, ಬಸವತತ್ವವನ್ನು ಅವಹೇಳನ ಮಾಡಿರುವ ಈ ಚಿತ್ರದಿಂದ ಲಿಂಗಾಯತರ ಧಾರ್ಮಿಕ ಭಾವನೆಗಳಿಗೆ ತೀವ್ರವಾಗಿ ಧಕ್ಕೆಯಾಗಿರುವುದರಿಂದ ಸರಕಾರ ಮತ್ತು ಕೋರ್ಟುಗಳು ಸೂಕ್ತವಾದ ರೀತಿಯಲ್ಲಿ ಸ್ಪಂದಿಸುವ ಭರವಸೆಯಿದೆ ಎಂದು ಹೇಳಿದರು.

ಶರಣರ ಶಕ್ತಿ ಅಕ್ಟೋಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಿದ್ಧವಾಗಿದೆ.

Share This Article
2 Comments
  • It should be censored if anything against our Lingayat community which they have no right to do . We strongly condemn it .

    • ಶರಣ ಜಾಮದರ್ ಮತ್ತು j s Patil ನೋಡಿದರೆ. ಸರಿಯಾದ ನಿರ್ಣಯ ತೆಗೆದುಕೊಳ್ಳುವರು

Leave a Reply

Your email address will not be published. Required fields are marked *