ಬಸವ ಕಲ್ಯಾಣ
ಸ್ವಾಭಿಮಾನಿ ಕಲ್ಯಾಣಪರ್ವದ ಸಮಾರೋಪ ಸಮಾರಂಭದಲ್ಲಿ ರವಿವಾರ 7 ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಮಹಾಜಗದ್ಗುರು ಡಾ.ಮಾತೆ ಗಂಗಾದೇವಿಯವರು ಬಸವ ಧರ್ಮ ಪೀಠದ ಮೂಲ ಧೈಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಪ್ರಯುಕ್ತ ಅವರನ್ನು ಬಸವ ಧರ್ಮ ಪೀಠದ ಗೌರವಾಧ್ಯಕ್ಷರಾಗಿ ಮಾಡಿ, ಬಸವ ಧರ್ಮ ಪೀಠದ ನೂತನ ಅಧ್ಯಕ್ಷರನ್ನಾಗಿ ಡಾ. ಚನ್ನಬಸವಾನಂದ ಸ್ವಾಮೀಜಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಧಾರವಾಡದ ಜಗನ್ಮಾತಾ ಅಕ್ಕಮಹಾದೇವಿ ಅನುಭಾವ ಪೀಠದ ನೂತನ ಪೀಠಾಧ್ಯಕ್ಷರನ್ನಾಗಿ ಸ್ವಾಭಿಮಾನಿ ಕಲ್ಯಾಣ ಪರ್ವದಲ್ಲಿ ಆಯ್ಕೆ ಮಾಡಲಾಯಿತು.
ಬಸವೇಶ್ವರರನ್ನು ಕರ್ನಾಟಕದ ‘ಸಾಂಸ್ಕೃತಿಕ ನಾಯಕ’ ಎಂದು ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆದರೆ ನವೆಂಬರ್ 1ರಂದು ರಾಜ್ಯೋತ್ಸವ ದಿನ ಗ್ರಾಮ ಪಂಚಾಯತ್ ನಿಂದ ಹಿಡಿದು ವಿಧಾನಸೌಧದವರೆಗೆ ಪ್ರತಿಯೊಂದು ಕಚೇರಿಗಳಲ್ಲಿ ಭಾವಚಿತ್ರ ಇಟ್ಟು ಪೂಜಿಸುವಂತೆ ಸೂಚಿಸಬೇಕು. ವಚನ ಸಾಹಿತ್ಯ ಪ್ರಚಾರ ಪ್ರಸಾರಕ್ಕಾಗಿ ವಿಶೇಷ ಅನುದಾನ ಸರ್ಕಾರ ಮೀಸಲಿಡಬೇಕು.
ಆಲಮಟ್ಟಿ ಕೂಡಲಸಂಗಮ ಚಿತ್ರದುರ್ಗ ರೈಲ್ವೆ ಸಮೀಕ್ಷೆ ಆಗಿದೆ. ಕಾಮಗಾರಿ ಬೇಗ ಪೂರ್ಣಗೊಳಿಸಿದರೆ ಬೆಂಗಳೂರು ಮುಂಬೈ ಮತ್ತು ಸೋಲಾಪುರದಿಂದ ಕೂಡಲಸಂಗಮಕ್ಕೆ ನೇರ ಸಂಪರ್ಕ ಒದಗಿಸಿದಂತಾಗುತ್ತದೆ. ಬೇಗ ಕಾಮಗಾರಿ ಪೂರ್ಣಗೊಳಿಸಬೇಕು.
ಬಸವರಾಜ ಪಾಟೀಲ್ ಶಿವಪುರ ಅವರನ್ನು ರಾಷ್ಟ್ರೀಯ ಬಸವ ದಳದ ರಾಜ್ಯಾಧ್ಯಕ್ಷರಾಗಿ ಹಾಗೂ ಎಂಜಿನಿಯ ಹಾವಶೆಟ್ಟಿ ಪಾಟೀಲ್ ಅವರನ್ನು ಲಿಂಗಾಯತ ಧರ್ಮ ಮಹಾಸಭಾದ ಬೀದರ್ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಿ ನಿರ್ಣಯ ಕೈಗೊಳ್ಳಲಾಯಿತು.
ಬೀದರ್ ವಿಮಾನ ನಿಲ್ದಾಣಕ್ಕೆ ವಿಶ್ವಗುರು ಬಸವೇಶ್ವರರ ಹೆಸರಿಡಬೇಕು
ಲಿಂಗಾಯತ ಹೋರಾಟ ತೀವ್ರಗೊಳಿಸುವ ನಿರ್ಣಯ ಕೈಗೊಳ್ಳಲಾಯಿತು.
ಈ ನಿರ್ಣಯಗಳನ್ನು ಬಸವರಾಜ ಪಾಟೀಲ್ ಶಿವಪುರ ಮಂಡಿಸಿದರು. ವೇದಿಕೆ ಮೇಲಿರುವ ಎಲ್ಲಾ ಪೂಜ್ಯ ರು ಹಾಗೂ ಗಣ್ಯರು ಅನುಮೋದಿಸಿದರು.