ಬಸವನಬಾಗೇವಾಡಿ
ಸೆಪ್ಟೆಂಬರ್ ೧ರಂದು ಉದ್ಘಾಟನೆಗೊಳ್ಳಲಿರುವ “ಬಸವ ಸಂಸ್ಕೃತಿ ಅಭಿಯಾನ”ದ ಜಾಗೃತಿಗಾಗಿ ರವಿವಾರ ಬೆಳಿಗ್ಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಬಸವಪರ ಸಂಟನೆಗಳ ನೇತೃತ್ವದಲ್ಲಿ ನೂರಾರು ಬೈಕುಗಳ ರ‍್ಯಾಲಿ ನಡೆಯಿತು.
ಪಟ್ಟಣದ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಪೂಜ್ಯರಾದ ಸಿದ್ಧಲಿಂಗ ಸ್ವಾಮೀಜಿ, ಪ್ರಭು ಚನ್ನಬಸವ ಸ್ವಾಮೀಜಿ, ಮತ್ತಿತರ ಗಣ್ಯರು ಚಾಲನೆ ನೀಡಿದರು.

ಬಸವ ಸ್ಮಾರಕದಿಂದ ಆರಂಭಗೊಂಡು ಪ್ರಮುಖ ಬೀದಿಗಳ ಮುಖಾಂತರ ಸಾಗಿ ಶಿವಾಜಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಕನಕದಾಸ ವೃತ್ತದ ಮೂಲಕ ಅಭಿಯಾನ ಉದ್ಘಾಟನಾ ಸಮಾರಂಭ ನಡೆಯುವ ಅಂತರಾಷ್ಟ್ರೀಯ ಆಂಗ್ಲ ಮಾಧ್ಯಮ ಶಾಲೆಗೆ ತಲುಪಿತು.

ವಿವೇಕ ಬ್ರಿಗೇಡ ಸಂಸ್ಥೆಯ ವಿನೂತ ಕಲ್ಲೂರ, ಬಸಣ್ಣ ಹಾರಿವಾಳ, ರವಿಗೌಡ ಚಿಕ್ಕೊಂಡ, ಬಸವರಾಜ ಕೋಟಿ, ಮಣಿಕಂಠ ಕಲ್ಲೂರ, ಕಾಂತು ಕೊಟ್ರಶೆಟ್ಟಿ, ಶೇಖರ ಗೊಳಸಂಗಿ, ಸಂಗಮೇಶ ಓಲೇಕರ್, ರವಿ ರಾಠೋಡ, ಶಿವಾನಂದ ತೋಳನ್ನೂರ ನೇತೃತ್ವದಲ್ಲಿ ಸುತ್ತಮುತ್ತಲಿನ ಗ್ರಾಮದ ಬಸವ ಅನುಯಾಯಿಗಳು ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.