ಅಭಿಯಾನ: ಬೆಂಗಳೂರಿನಲ್ಲಿ ಬಸವಭಕ್ತರ ಸಂಭ್ರಮದ ಬೈಕ್ ರ‍್ಯಾಲಿ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಬೆಂಗಳೂರು

ನಗರದಲ್ಲಿ ಇಂದು ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲು ಬೈಕ್ ರ್ಯಾಲಿ ನಡೆಯಿತು.

ನೆಲಮಂಗಲಕ್ಕೆ ಆಗಮಿಸಿದ ಬಸವ ರಥವನ್ನು ಮುಂಜಾನೆ 9 ಗಂಟೆಗೆ ಪೂಜ್ಯರು, ಬಸವಪರ ಸಂಘಟನೆಗಳ ಮುಖಂಡರು, ಸದಸ್ಯರು ಹೂಮಾಲೆ ಹಾಕಿ, ಪುಷ್ಪಾರ್ಪಣೆ ಮಾಡಿ ಸ್ವಾಗತಿಸಿದರು.

ತುಮಕೂರು ರಸ್ತೆ, ಶಿವಕುಮಾರ ಸ್ವಾಮೀಜಿ ಫ್ಲೈ ಓವರ್, ಕೆನ್ನಾ ಮೆಟಲ್ ಕಾರ್ಖಾನೆ ಮುಂದೆ ಬೈಕ್ ರ್ಯಾಲಿಗೆ ನೆಲಮಂಗಲದ ಪವಾಡ ಬಸವಣ್ಣ ದೇವರ ಮಠದ ಪೂಜ್ಯ ಸಿದ್ದಲಿಂಗ ಸ್ವಾಮೀಜಿ, ಅಥಣಿ ಮೋಟಗಿಮಠದ ಪ್ರಭುಚೆನ್ನಬಸವ ಸ್ವಾಮೀಜಿ, ಬಸವಕಲ್ಯಾಣದ ಬಸವದೇವರು ಬಸವಧ್ವಜ ಬೀಸಿ ಚಾಲನೆ ನೀಡಿದರು.

ಭಾಗವಹಿಸಿದ್ದ 200ಕ್ಕು ಹೆಚ್ಚು ಬೈಕ್ ಸವಾರರು ಬಸವ ಭಾವಚಿತ್ರ ಇರುವ ಅಭಿಯಾನದ ಟಿಶರ್ಟ್ ಧರಿಸಿದ್ದರು. ಬಸವ ಧ್ವಜವನ್ನು ಹಿಡಿದುಕೊಂಡು, ಬಸವಾದಿ ಶರಣರಿಗೆ ಹಾಗೂ ಬಸವ ಸಂಸ್ಕೃತಿ ಅಭಿಯಾನಕ್ಕೆ ಜಯ ಘೋಷ ಹಾಕುತ್ತ ಸಾಗಿದರು.

ದಾವಣಗೆರೆಯ ಬಸವ ಕಲಾ ಲೋಕದವರು ವಾಹನ ಒಂದರಲ್ಲಿ ಕುಳಿತು, ಧ್ವನಿವರ್ಧಕದ ಮೂಲಕ ಬಸವ ಪ್ರಾರ್ಥನೆ, ವಚನ ಗಾಯನ ಮಾಡುತ್ತ ಬೈಕ್ ರ್ಯಾಲಿಯೊಂದಿಗೆ ಸಾಗುತ್ತಿದ್ದರು.

ರಾಜಾಜಿನಗರ, ಬಸವ ಮಂಟಪದ ಬಸವ ಪುತ್ಥಳಿ ಬಳಿ ಬಸವ ರಥ, ಬೈಕ್ ರ್ಯಾಲಿಗೆ ಪೂಜ್ಯ ಡಾ. ಗಂಗಾ ಮಾತಾಜಿ, ಬಸವಯೋಗಿ ಸ್ವಾಮೀಜಿ ಸೇರಿದಂತೆ ಅನೇಕ ಪೂಜ್ಯರು, ಬಸವಪರ ಸಂಘಟನೆಗಳ ಪ್ರಮುಖರು, ಸದಸ್ಯರು ಸ್ವಾಗತ ಮಾಡಿದರು.

ಬಸವ ಮಂಟಪದಲ್ಲಿ ಉಪಹಾರ ವ್ಯವಸ್ಥೆ ಮಾಡಲಾಗಿತ್ತು, ರ್ಯಾಲಿಯಲ್ಲಿ ಪಾಲ್ಗೊಂಡ ಎಲ್ಲರು ಉಪಹಾರ ಸೇವಿಸಿದರು. ಅಲ್ಲಿಂದ ರ್ಯಾಲಿ ಮತ್ತೆ ಮುಂದುವರೆಯಿತು.

ಹಲವಾರು ಕಡೆ ಬಸವ ರಥಕ್ಕೆ ಬಸವಪರ ಸಂಘಟನೆಗಳು, ಮುಖಂಡರಿಂದ ಸ್ವಾಗತ ದೊರೆಯಿತು.

ನಿಜಗುಣಮಠದ ವತಿಯಿಂದ ರಥವನ್ನು ಸ್ವಾಗತ ಮಾಡಿಕೊಳ್ಳಲಾಯಿತು. ಮಠದಲ್ಲಿ ಎಲ್ಲರೂ ಪ್ರಸಾದ ಮಾಡಿದರು. ರ್ಯಾಲಿ ಮುಂದುವರೆಯಿತು.

ರ್ಯಾಲಿ ಜಾಲಹಳ್ಳಿ ಕ್ರಾಸ್, ಯಶವಂತಪುರ, ರಾಜಾಜಿನಗರ, ಗೋವಿಂದರಾಜ ನಗರ, ದೀಪಾಂಜಲಿ ನಗರ, ಅಜಂಪೇಟ್, ಮೆಜೆಸ್ಟಿಕ್, ಬಸವೇಶ್ವರ ವೃತ್ತ ಮೂಲಕ ಸೀದಾ ಅರಮನೆ ಮೈದಾನವನ್ನು ಸಂಜೆ 4 ಗಂಟೆಗೆ ತಲುಪಿ, ಅಲ್ಲಿಯೇ ಮುಕ್ತಾಯಗೊಳ್ಳಲಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LtQQbJpNF0P0HdzSbg74pu

Share This Article
1 Comment
  • ರಾಜಧಾನಿಯಲ್ಲಿ ಇಷ್ಟು ಸಂಖ್ಯೆಯಲ್ಲಿ ಹುಡುಗರು ಏನು ಲೆಕ್ಕಕ್ಕೆ ಇಲ್ಲ.

Leave a Reply

Your email address will not be published. Required fields are marked *