20ನೇ ದಿನದ ಅಭಿಯಾನ
ಕಲ್ಯಾಣ ಗೀತೆಯೊಂದಿಗೆ ಸಾರ್ವಜನಿಕ ಸಮಾರಂಭ ಮಂಗಲ.
ಕಾರ್ಯಕ್ರಮಕ್ಕೆ ಅಡಚಣೆ
ಕೆಲವು ವ್ಯಕ್ತಿಗಳ ವಿರೋಧದಿಂದ ಕಾರ್ಯಕ್ರಮ ಕೆಲವು ಕಾಲ ನಿಂತಿತ್ತು. ಹೆಚ್ಚಿನ ಮಾಹಿತಿ ಲಭ್ಯವಾದಂತೆ ಹಂಚಿಕೊಳ್ಳುತ್ತೇವೆ.
ಉಪನ್ಯಾಸ
ಶಿವಮೊಗ್ಗದ ಶುಭಾ ಮರವಂತೆ ಅವರಿಂದ ‘ಶರಣರು ಮತ್ತು ಕಲೆ’ ವಿಷಯವಾಗಿ ಉಪನ್ಯಾಸ.
ಅನುಭಾವ
ಮೈಸೂರಿನ ಡಾ. ಶ್ರೀಕಂಠ ಸ್ವಾಮೀಜಿ ಅವರಿಂದ ‘ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ’ ವಿಷಯವಾಗಿ ಅನುಭಾವ.
ಆಶೀರ್ವಚನ
ಸಾಣೆಹಳ್ಳಿ ಶ್ರೀಗಳಿಂದ, ಭಾಲ್ಕಿ ಬಸವಲಿಂಗ ಪಟ್ಟದ್ದೇವರಿಂದ ಆಶೀರ್ವಚನ.
ಸಾರ್ವಜನಿಕ ಸಮಾವೇಶ
ಜ್ಯೋತಿ ಬೆಳಗಿಸಿ ಪೂಜ್ಯರು ಹಾಗೂ ಗಣ್ಯರು ಸಮಾವೇಶ ಉದ್ಘಾಟಿಸಿದರು. ಬಸವ ಭಾವಚಿತ್ರಕ್ಕೆ ಪುಷ್ಪಾರ್ಪಣೆ ನಡೆಯಿತು. ಸಕಲೇಶಪುರದ ಮಹಿಳಾ ಘಟಕದ ಶರಣೆಯರಿಂದ ಬಸವ ಪ್ರಾರ್ಥನೆ.
‘ದಾರ್ಶನಿಕ ಬಸವಣ್ಣ’ ಹಾಗೂ ‘ವಚನ ವ್ಯಕ್ತಿತ್ವ ವಿಕಸನ’ ಎಂಬ ಎರಡು ಕಿರು ಪುಸ್ತಕಗಳು ಬಿಡುಗಡೆಗೊಂಡವು.






ಸದ್ಭಾವನಾ ಪಾದಯಾತ್ರೆ
ಜಿಲ್ಲಾಧಿಕಾರಿ ಕಚೇರಿಯಿಂದ ಹಾಸನಾಂಬ ಕಲಾಕ್ಷೇತ್ರದವರೆಗೆ ಸಾಗಿದ ಸದ್ಭಾವನಾ ಪಾದಯಾತ್ರೆ.



ಕಲ್ಯಾಣ ಗೀತೆಯೊಂದಿಗೆ ಸಂವಾದ ಮುಕ್ತಾಯ.
ಸಂವಾದ ವಿಡಿಯೋ, ಫೋಟೋ



ಬಂದ ಪ್ರಶ್ನೆಗಳು
- ಬಸವಣ್ಣನವರು ದೇಹವೇ ದೇಗುಲ ಎಂದಿದ್ದರೂ, ಇತ್ತೀಚಿಗೆ ದೇಗುಲಗಳ ಸಂಖ್ಯೆ ಹೆಚ್ಚಾಗುತ್ತಿದೆ ಏಕೆ?
- ಬಸವತತ್ವ ನಮ್ಮ ರಾಜ್ಯ, ದೇಶದಲ್ಲಿ ಏಕೆ ಪ್ರಚಲಿತದಲ್ಲಿ ಇಲ್ಲ?
- ಸೂಳೆ ಸಂಕವ್ವೆ ಅಂತವರನ್ನು ಬದಲಾಯಿಸಿದ ಬಸವಣ್ಣನವರ ನಿಲುವು, ಪ್ರಸ್ತುತ ಸ್ಥಿತಿಯನ್ನೇಕೆ ಬದಲಾಯಿಸಿಲ್ಲ?
- ವಿಶ್ವವಿಖ್ಯಾತಿ ಪಡೆದಿರುವ ಬಸವೇಶ್ವರರ ಹೆಸರನ್ನು ಯಾವುದೇ ವಿಶ್ವವಿದ್ಯಾಲಯಕ್ಕೆ ಇಟ್ಟಿಲ್ಲ ಏಕೆ?
- ಲಿಂಗಪೂಜೆ ಬಗ್ಗೆ ಶರಣರ ಅಭಿಪ್ರಾಯವೇನು?
- ಲಿಂಗಪೂಜೆಯ ಮಹತ್ವ ಎಲ್ಲರಿಗೂ ಏಕೆ ತಿಳಿಸಿಲ್ಲ?
- ಕಲ್ಯಾಣ ಕ್ರಾಂತಿ ಆದಮೇಲೆ ಬಸವಣ್ಣ ಬಸವಕಲ್ಯಾಣ ಬಿಟ್ಟು ಕೂಡಲಸಂಗಮಕ್ಕೆ ಬಂದದ್ದು ಸರಿಯೆ?
- ಲಿಂಗಾಯತ ಮಠಾಧೀಶರು ಕುಂಕುಮ ಹಚ್ಚುವುದು ಎಷ್ಟು ಸರಿ?
- ಅನುಭವ ಮಂಟಪದಂತೆ ಇಂದು ಸಂಘ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆಯೇ?
- ಬಸವತತ್ವದಿಂದ ಬದಲಾವಣೆ ಹೇಗಾಗುತ್ತೆ?
- ಬಸವತತ್ವದಲ್ಲಿ ಸಮಾನತೆ ಇದೆ ಎಂದರೆ, ಮಹಿಳೆಯರಿಗೆ ಮಠದ ಉತ್ತರಾಧಿಕಾರಿಯಾಗಲು ಅವಕಾಶವಿದೆಯ?
- ಶರಣೆ ಅಕ್ಕಮಹಾದೇವಿ ಅವರ ದಿಗಂಬರತೆ ಸ್ವೀಕಾರಾರ್ಹವೆ?
- ಗುರು ಲಿಂಗ ಜಂಗಮ ಈ ಮೂರರ ವ್ಯತ್ಯಾಸವೇನು?
- ಶತಶತಮಾನಗಳ ಕಳೆದರೂ ವಚನಗಳ ಅರಿವು ಇಂದೂ ಏಕಿದೆ?
- ಜಾತಿವ್ಯವಸ್ಥೆ ವಿರುದ್ಧ ಬಸವೇಶ್ವರರು ಹೋರಾಡಿದರೂ ಪ್ರಸ್ತುತ ಸಮಾಜದಲ್ಲಿ ಜಾತಿ ವ್ಯವಸ್ಥೆ ಪ್ರಬಲವಾಗಿದೆ ಏಕೆ?
- ಅಂತರ್ಜಾತಿ ವಿವಾಹ ಮಠದಲ್ಲಿ ಎಷ್ಟರಮಟ್ಟಿಗೆ ನಡೆಯುತ್ತವೆ?
- ಹಿಂದೆ 7 ಸಾವಿರ ಮಠಗಳಿದ್ದವು, ಇಂದು ಸಾವಿರಕ್ಕೆ ಕುಸಿದಿವೆ ಏಕೆ?
- ಸ್ಥಾವರಕ್ಕಳಿಯುಂಟು ಎಂದ ಬಸವಣ್ಣನವರ ಮೂರ್ತಿಯನ್ನು, ಅವರ ಗುಡಿಯನ್ನು ಕಟ್ಟುವುದು ಎಷ್ಟು ಸರಿ?
- ಬಸವಾದಿ ಶರಣರ ವಚನಗಳು ಪ್ರಸ್ತುತ ಸಮಾಜಕ್ಕೆ ದಿವ್ಯ ಔಷಧ ಆಗಬಲ್ಲವೆ?
ಸಂವಾದ ಕಾರ್ಯಕ್ರಮ ಆರಂಭ
ಶಾಸಕ ಬಾಲಕೃಷ್ಣ ಅವರು ಮಾತನಾಡಿದರು. ಚನ್ನರಾಯಪಟ್ಟಣದಲ್ಲಿ ಬಸವಣ್ಣನವರ ಪುತ್ಥಳಿ ಅನಾವರಣಗೊಳಿಸುವುದಾಗಿ ಹೇಳಿದರು.






ಉದ್ಘಾಟನೆ
ಪೂಜ್ಯರು ಹಾಗು ಗಣ್ಯರಿಂದ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ. ಮಲ್ಲಿಕಾರ್ಜುನ ಸ್ವಾಮೀಜಿ ಅವರಿಂದ ಆಶಯ ನುಡಿ.




ಇಂದಿನ ಕಾರ್ಯಕ್ರಮ
ಸಂವಾದ
ಮುಂಜಾನೆ 11 ಗಂಟೆಗೆ ಹಾಸನಾಂಬ ಕಲಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳೊಂದಿಗೆ ವಚನ ಸಂವಾದ.
ಪಾದಯಾತ್ರೆ
ಮಧ್ಯಾಹ್ನ 4 ಗಂಟೆಗೆ ಪ್ರಮುಖ ಬೀದಿಗಳಲ್ಲಿ ಸದ್ಭಾವನಾ ಪಾದಯಾತ್ರೆ, ಬಸವಣ್ಣನವರ ರಥದ ಮೆರವಣಿಗೆ.
ಬಹಿರಂಗ ಸಮಾವೇಶ
ಸಂಜೆ 5 ಗಂಟೆಗೆ ಸಾರ್ವಜನಿಕ ಸಮಾರಂಭ ಹಾಸನಾಂಬ ಕಲಾಕ್ಷೇತ್ರದಲ್ಲಿ.
ನಾಟಕ
ರಾತ್ರಿ 8 ಗಂಟೆಗೆ ‘ಜಂಗಮದೆಡೆಗೆ’ ನಾಟಕ ಪ್ರದರ್ಶನ ಸಾಣೇಹಳ್ಳಿ ಶಿವಸಂಚಾರ ಕಲಾತಂಡದಿಂದ.