ಬೆಳಗಾವಿ
ಲಿಂಗಾಯತ ಮಠಾಧೀಶರು ಈ ತಿಂಗಳು “ಬಸವ ಸಂಸ್ಕೃತಿ ಅಭಿಯಾನ”ವನ್ನು ಹಮ್ಮಿಕೊಂಡಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಈಗ ತುರ್ತಾಗಿ ಅವಶ್ಯಕತೆ ಇರುವುದು “ಲಿಂಗಾಯತ ಧರ್ಮದ ಜಾತಿ ಸಮೀಕ್ಷೆ ಅಭಿಯಾನ”.
ಏಕೆಂದರೆ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಆಯೋಗದಿಂದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಇದೇ ತಿಂಗಳ 20ರಿಂದ ಆರಂಭಿಸಲಾಗುವುದು.
ಸದ್ಯಕ್ಕೆ ಈ ಆಯೋಗವು ಜಾತಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಲಿಂಗಾಯತರ ಒಟ್ಟು 78 ಜಾತಿ/ಉಪಜಾತಿಗಳನ್ನು ಪಟ್ಟಿ ಮಾಡಲಾಗಿದೆ. ಅಂದರೆ ಹಲವಾರು 103 ಲಿಂಗಾಯತ ಜಾತಿ/ಉಪಜಾತಿಗಳು ಸದ್ಯಕ್ಕೆ ಆಯೋಗದ ಪಟ್ಟಿಯಲ್ಲಿ ಕಾಣಿಸುತ್ತಿಲ್ಲ. ಅವುಗಳನ್ನು ತಕ್ಷಣವೇ ಸೇರ್ಪಡೆ ಮಾಡುವ ಅವಶ್ಯಕತೆ ಇದೆ.
ರಾಜ್ಯದಲ್ಲಿ ಒಟ್ಟು 181 ಒಳಪಂಗಡಗಳನ್ನು ಹೊಂದಿರುವ ಲಿಂಗಾಯತ ಸಮುದಾಯವು ಬಹುದೊಡ್ಡ ಸಮಾಜವಾಗಿದ್ದರೂ ಕೂಡ ಸಮೀಕ್ಷೆ/ಜನಗಣತಿಯಲ್ಲಿ ಒಟ್ಟು ಜನಸಂಖ್ಯೆಯ ಕೇವಲ 11% ಮಾತ್ರ ಲಿಂಗಾಯತರು ಎಂದು ದಾಖಲಿಸಲಾಗಿದೆ.
ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ನಮೂದಿಸಲು ಅವಕಾಶವಿಲ್ಲದ ಕಾರಣದಿಂದ ಬಹುತೇಕ ಜನರು ಧರ್ಮವನ್ನು “ಹಿಂದೂ” ಅಥವಾ “ಇತರರು” ಎಂದು ನಮೂದಿಸಿದ ಕಾರಣ, ಲಿಂಗಾಯತರ ನೈಜ ಜನಸಂಖ್ಯೆ ವರದಿಯಾಗುತ್ತಿಲ್ಲ. ಧರ್ಮ, ಜಾತಿ ಮತ್ತು ಉಪಜಾತಿ ಕಾಲಂಗಳಲ್ಲಿ ಬಹುತೇಕ ಒಳಪಂಗಡಗಳಿಗೆ ‘ಲಿಂಗಾಯತ’ ಎಂದು ಬರೆಸಲು ಅವಕಾಶವೇ ಇಲ್ಲದಂತಾಗಿ, ಅಂಕಿ-ಅಂಶಗಳ ಪ್ರಕಾರ, ಲಿಂಗಾಯತ ಸಮುದಾಯ ಕ್ಷೀಣಿಸುತ್ತಿದೆ.
ಆದ್ದರಿಂದ, ಈ ತಿಂಗಳು ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸರ್ಕಾರವು ಧರ್ಮದ ಕಾಲಂನಲ್ಲಿ “ಲಿಂಗಾಯತ” ಎಂದು ನಮೂದಿಸಲು ಅವಕಾಶ ಮಾಡಿಕೊಡಬೇಕು. ಒಂದು ವೇಳೆ ಧರ್ಮದ ಕಾಲಂನಲ್ಲಿ “ಲಿಂಗಾಯತ” ಎಂದು ಬರೆಯಲು ಅವಕಾಶ ಕೊಡದಿದ್ದರೆ, ಧರ್ಮದ ಕಾಲಂನಲ್ಲಿ “ಯಾವುದೂ ಇಲ್ಲ” ಎಂದು ನಮೂದಿಸಿ, ಜಾತಿ ಕಾಲಂನಲ್ಲಿ “ಲಿಂಗಾಯತ” ಅಥವಾ “ಲಿಂಗಾಯತದ ಜೊತೆಗೆ ತಮ್ಮ ಉಪಜಾತಿ”ಯನ್ನು ನಮೂದಿಸಲು ಅವಕಾಶ ಮಾಡಿಕೊಡಬೇಕು. ಅಥವಾ ಜಾತಿ ಕಾಲಂನಲ್ಲಿ “ಲಿಂಗಾಯತ” ಮಾತ್ರ ಮತ್ತು ಉಪಜಾತಿ ಕಾಲಂನಲ್ಲಿ”ತಮ್ಮ ಉಪಜಾತಿ/ಕುಲಕಸಬು/ಒಳಪಂಗಡ”ವನ್ನು ನಮೂದಿಸುವಂತೆ ಅವಕಾಶ ಮಾಡಿಕೊಡಬೇಕು.
ಯಾವುದೇ ಕಾರಣಕ್ಕೂ “ಹಿಂದೂ ಅಥವಾ ಇತರೆ” ಎಂದು ಧರ್ಮದ ಕಾಲಂನಲ್ಲಿ ಲಿಂಗಾಯತರನ್ನು ಸೇರಿಸಬಾರದು ಎಂದು ಒತ್ತಾಯಿಸಬೇಕು.
ಈ ನಿಟ್ಟಿನಲ್ಲಿ ಮಠಾಧೀಶರು ಮತ್ತು ಲಿಂಗಾಯತ ಸಂಘಟನೆಗಳು, ಶರಣರು, ಕಾರ್ಯಕರ್ತರು ತ್ವರಿತ ನಿರ್ಧಾರಕ್ಕೆ ಬಂದು “ಬಸವ ಧರ್ಮ ಜಾತಿ ಸಮೀಕ್ಷೆ ಅಭಿಯಾನ” ಹಮ್ಮಿಕೊಳ್ಳಬೇಕು ಮತ್ತು ಲಿಂಗಾಯತ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕು.
ರಾಜ್ಯ ಸರ್ಕಾರ ಲಿಂಗಾಯತವನ್ನು ಪ್ರತ್ಯೇಕ ಧರ್ಮ ಎಂದು ಸಾಂವಿಧಾನಿಕವಾಗಿ ಪರಿಗಣಿಸಿ ಈ ಸಂಬಂಧ ಮಾರ್ಚ್ 2008ರಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಪ್ರಯುಕ್ತ ಕರ್ನಾಟಕದ ಜನಗಣತಿ /ಜಾತಿ ಸಮೀಕ್ಷೆಯಲ್ಲಿ ಧರ್ಮದ ಕಾಲಂ ನಲ್ಲಿ ಹಿಂದೂ ಬೌದ್ಧ ಸಿಖ್ ಮುಸ್ಲಿ೦ ಕ್ರೈಸ್ತರು ಜೈನರಂತೆಯೇ ಲಿಂಗಾಯವವನ್ನು ಧರ್ಮದ ಕಾಲಂ ನಲ್ಲಿ ಸೇರಿಸಲೇಬೇಕಾದದ್ದು ರಾಜ್ಯ ಸರ್ಕಾರದ ಇಂದಿನ ತುರ್ತು ಕಾರ್ಯವಾಗಿದೆ. ಹಾಲಿ ರಾಜ್ಯಾದ್ಯಂತ ನಡೆಯುತ್ತಿರುವ ಬಸವ ಸಂಸ್ಕೃತಿ ಅಭಿಯಾನವು ಈ ಕುರಿತು ಲಿಂಗಾಯತದ ಎಲ್ಲಾ ಒಳಪಂಗಡಗಳಲ್ಲಿ ಜಾಗೃತಿ ಮಾಡಿಸುವ ಅಭಿಯಾನವಾಗಲಿ. . . .
ರಾಜ್ಯ ಸರ್ಕಾರ ಲಿಂಗಾಯತವನ್ನು ಪ್ರತ್ಯೇಕ ಧರ್ಮ ಎಂದು ಸಾಂವಿಧಾನಿಕವಾಗಿ ಪರಿಗಣಿಸಿ ಈ ಸಂಬಂಧ ಮಾರ್ಚ್ 2018ರಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಪ್ರಯುಕ್ತ ಕರ್ನಾಟಕದ ಜನಗಣತಿ /ಜಾತಿ ಸಮೀಕ್ಷೆಯಲ್ಲಿ ಧರ್ಮದ ಕಾಲಂ ನಲ್ಲಿ ಹಿಂದೂ ಬೌದ್ಧ ಸಿಖ್ ಮುಸ್ಲಿ೦ ಕ್ರೈಸ್ತರು ಜೈನರಂತೆಯೇ ಲಿಂಗಾಯವವನ್ನು ಧರ್ಮದ ಕಾಲಂ ನಲ್ಲಿ ಸೇರಿಸಲೇಬೇಕಾದದ್ದು ರಾಜ್ಯ ಸರ್ಕಾರದ ಇಂದಿನ ತುರ್ತು ಕಾರ್ಯವಾಗಿದೆ. ಹಾಲಿ ರಾಜ್ಯಾದ್ಯಂತ ನಡೆಯುತ್ತಿರುವ ಬಸವ ಸಂಸ್ಕೃತಿ ಅಭಿಯಾನವು ಈ ಕುರಿತು ಲಿಂಗಾಯತದ ಎಲ್ಲಾ ಒಳಪಂಗಡಗಳಲ್ಲಿ ಜಾಗೃತಿ ಮಾಡಿಸುವ ಅಭಿಯಾನವಾಗಲಿ. . . .
ರಾಜ್ಯ ಸರಕಾರವು ಈಗಾಗಲೇ ಗೆಜೆಟ್ ಹೊರಡಿಸಿದ್ದರೆ, ಧರ್ಮದ ಕಾಲಂ ನಲ್ಲಿ ಲಿಂಗಾಯತ ಅಂತ ತೋರಿಸಬೇಕು. ಹಾಗಿಲ್ಲದಿದ್ದಲ್ಲಿ, ತುರ್ತಾಗಿ ಲಿಂಗಾಯತ ಅಂತ ಸೇರಿಸಬೇಕೆಂದು ಕಾನೂನು ಕ್ರಮ ಕೈಗೊಳ್ಳಬಹುದಲ್ಲವೇ? ಇತರೆ ಅಂತ ತೋರಿಸಿದರೆ ಯಾವುದೇ ಪ್ರಯೋಜನ ಇಲ್ಲ. ಎಲ್ಲ ಪ್ರಮುಖರು ಈ ಬಗ್ಗೆ ತುರ್ತಾಗಿ ನಿರ್ಣಯಿಸಬೇಕಿದೆ.
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಘಟಕದ ಎಲ್ಲಾ ಶಾಖೆಗಳು ಮೇಲ್ ಮೂಲಕ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಆಯೋಗದ ಗಮನ ಸೆಳೆದಿದೆ
ಬಸವಣ್ಣ ನವರು ಜ್ಯಾತಿ ಭೇದ ಹೋಗಲಾಡಿಸಿ ಸಮಾನತೆಗೆ ದಾರಿ ಮಾಡಿದರು ಈಗಿನ ಅನುಯಾಯಿ ಗಳು ಜಾತಿ ಗಣತಿಯನ್ನೇ ವಿರೋಧಿಸಿ ಆರ್ಥಿಕ ಆಧಾರ ಮೇಲೆ ಮೀಸಲಾತಿಯನ್ನು ಕೇಳಬೇಕು