ಮಂಗಳೂರಿನಲ್ಲಿ ಬಸವ ಸಂಸ್ಕೃತಿ ಅಭಿಯಾನ

ಬಸವ ಮೀಡಿಯಾ
ಬಸವ ಮೀಡಿಯಾ
12Posts
Auto Updates

ಅಭಿಯಾನದ 18ನೇ ದಿನ

3 weeks agoSeptember 19, 2025 7:12 pm

ಮಂಗಲ

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ ಗಟ್ಟಿ ಅವರಿಂದ ಶರಣು ಸಮರ್ಪಣೆ. ಕಲ್ಯಾಣ ಗೀತೆಯೊಂದಿಗೆ ಬಹಿರಂಗ ಸಮಾವೇಶ ಮಂಗಲಗೊಂಡಿತು

3 weeks agoSeptember 19, 2025 6:20 pm

ಆಶೀರ್ವಚನ

ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಹಂದಿಗುಂದ ಶಿವಾನಂದ ಸ್ವಾಮೀಜಿ, ಕ್ರೈಸ್ತ ಧರ್ಮಗುರು ವಿಶಾಲ್ ಮೋನಿಸ್, ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ಅವರಿಂದ ಆಶೀರ್ವಚನ.

3 weeks agoSeptember 19, 2025 6:19 pm

ಬಹುಮಾನ ವಿತರಣೆ

ಅಭಿಯಾನದ ಅಂಗವಾಗಿ ಪದವಿ ಮಟ್ಟದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಚನ ಗಾಯನ ಸ್ಪರ್ಧೆಯ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ನಂತರ ವಿಜೇತ ಮಕ್ಕಳು ವಚನ ಗಾಯನ ಮಾಡಿದರು.

3 weeks agoSeptember 19, 2025 5:40 pm

ಬಸವಣ್ಣನವರ ಮೇಲೆ ಹೊಸ ಬ್ಯಾರಿ ಕೃತಿ

ಶಮೀಮಾ ಮುಕ್ತಾರ್ ಅವರ ‘ಬಸವಣ್ಣ: ಒರು ಹಯಾಲ್’ ಬ್ಯಾರಿ ಕೃತಿ ಬಿಡುಗಡೆ. ಹಯಲ್ ಅಂದರೆ ಬ್ಯಾರಿ ಭಾಷೆಯಲ್ಲಿ ಚಿಂತನೆ ಎಂದು ಅರ್ಥ. ಇದು ಸಾಣೇಹಳ್ಳಿ ಶ್ರೀಗಳ ಪುಸ್ತಕದ ಅನುವಾದ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎನ್. ಎಲ್. ಮುಕುಂದರಾಜ ಪುಸ್ತಕ ಬಿಡುಗಡೆ ಮಾಡಿದರು. ಎನ್. ಎಲ್. ಮುಕುಂದರಾಜ ಅವರಿಂದ ಉಪನ್ಯಾಸ ಕೂಡ ನಡೆಯಿತು.

3 weeks agoSeptember 19, 2025 5:15 pm

ಸಂಜೆಯ ಸಮಾರಂಭ

ಉಮರ್ ಯು.ಎಚ್. ಅವರಿಂದ ಪ್ರಾಸ್ತಾವಿಕ ಮಾತುಗಳು. ಚಿಂತಕ, ಮಾಜಿ ಶಾಸಕ ವೈ. ಎಸ್. ವಿ. ದತ್ತ ಅವರಿಂದ ಉಪನ್ಯಾಸ.

3 weeks agoSeptember 19, 2025 4:11 pm

ಸಾಮರಸ್ಯ ನಡಿಗೆ

ಶ್ರೀ ನಾರಾಯಣಗುರು ವೃತ್ತದಿಂದ ತುಳು ಭವನಕ್ಕೆ ಸಾಗಿದ ಪಾದಯಾತ್ರೆ.

3 weeks agoSeptember 19, 2025 1:32 pm

ಮಂಗಲ

ಕಲ್ಯಾಣ ಗೀತೆಯೊಂದಿಗೆ ಸಂವಾದ ಕಾರ್ಯಕ್ರಮ ಮಂಗಲಗೊಂಡಿತು.

3 weeks agoSeptember 19, 2025 12:22 pm

ವಿದ್ಯಾರ್ಥಿಗಳೊಂದಿಗೆ ಸಂವಾದ – ಫೋಟೋಗಲ್ಲಿ

3 weeks agoSeptember 19, 2025 11:39 am

ಬಂದ ಪ್ರಶ್ನೆಗಳು

  • ವಚನಕಾರರ ಸಂದೇಶಗಳು ಇಂದಿಗೂ ಪ್ರಸ್ತುತವೇ?
  • ಸಂಸ್ಕೃತಿಯನ್ನು ಉಳಿಸುವುದು ಹೇಗೆ?
  • ಬಸವಾದಿ ಶರಣರ ಅನುಭವಮಂಟಪ ಎಂಬ ಸಂಸತ್ತಿಗೂ, ಈಗಿನ ಸಂಸತ್ತಿಗೂ ಹೋಲಿಕೆ ಏನು?
  • ಬಸವಣ್ಣನವರ ಲಿಂಗಾಯತ ಧರ್ಮ ಸರ್ವಸಮಾನತೆ ಕಲ್ಪಿಸುವುದು ಹೇಗೆ?
  • ವೀರಶೈವ ಲಿಂಗಾಯತ ಗೊಂದಲವೇಕೆ? ಎರಡೂ ಕಡೆಯ ಗುರುಗಳು ಒಂದಾಗಿ ಸಮಸ್ಯೆ ಪರಿಹರಿಸಬಹುದಲ್ಲ?
  • ಇಂದಿನ ರಾಜಕೀಯ, ಜಾತಿ, ಧರ್ಮದ ಗೊಂದಲದಲ್ಲಿ ನಾವೆಲ್ಲ ಹೇಗೆ ಬದುಕಬೇಕು?
  • ಈ ಭ್ರಷ್ಟ ವ್ಯವಸ್ಥೆಯಲ್ಲಿ ಶ್ರಮಪಟ್ಟು ಓದಿದವರಿಗೆ, ಪ್ರತಿಭಾವಂತರಿಗೆ ಹೇಗೆ ಸ್ಥಾನಮಾನ ಸಿಗುತ್ತೆ?
  • ಅನುಭವ ಮಂಟಪವನ್ನು ಸ್ಥಾಪಿಸಿದ ಬಸವಣ್ಣನವರು ಅಧ್ಯಕ್ಷರಾಗಲಿಲ್ಲ, ಅಲ್ಲಮಪ್ರಭುಗಳೇ ಏಕಾದರು?
  • ವಚನ ಸಾಹಿತ್ಯ ಮಠಾಧಿಪತಿಗಳಿಂದ ಹೈಜಾಕ್ ಏಕೆ?
  • ಹಿಂದೂ ಧರ್ಮ, ಸನಾತನ ಧರ್ಮ, ಲಿಂಗಾಯತ ಧರ್ಮ ಇವುಗಳನ್ನು ಯಾವ ದೃಷ್ಟಿಕೋನದಿಂದ ನೋಡಬೇಕು?
  • ಬಸವಕಲ್ಯಾಣದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿದ ಬಸವಣ್ಣನವರು ಕೂಡಲಸಂಗಮದಲ್ಲಿ ಏಕೆ ಐಕ್ಯರಾದರು?
  • ಮಕ್ಕಳನ್ನು ಮೊಬೈಲ್ ದಾಸ್ಯದಿಂದ ಹೊರತರಲು ತಮ್ಮ ಕಾರ್ಯವೇನು?
  • ಸರಕಾರ ಈ ಅಭಿಯಾನಕ್ಕೆ ಕೈಜೋಡಿಸಿದೆಯೇ?

3 weeks agoSeptember 19, 2025 11:30 am

ಸಂವಾದ ಕಾರ್ಯಕ್ರಮ ಆರಂಭ


ದಿಕ್ಸೂಚಿ ಭಾಷಣ ಶೇಗುಣಸಿ ಮಹಾಂತಪ್ರಭು ಶ್ರೀಗಳಿಂದ.

3 weeks agoSeptember 19, 2025 11:35 am

ಪ್ರಸ್ತಾವನೆ ನುಡಿ: ಬ್ಯಾರಿ ಅಕಾಡೆಮಿಯ ಉಮರ್ ಯು.ಹೆಚ್.

ಲಿಂಗಾಯತ ಸ್ವಾಮೀಜಿಗಳು ಬಸವತತ್ವವನ್ನು ನಾಡಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಕರಾವಳಿಗೆ ಕಪ್ಪು ಚುಕ್ಕಿ ಇಡುವ ಪ್ರಯತ್ನಗಳು ನಡೆಯುತ್ತಿವೆ. ಆದರೂ ಇಲ್ಲಿ ಇಷ್ಟೊಂದು ಜನ ಬಂದಿರುವುದು ನೋಡಿದರೆ ಬಹು ಸಂಸ್ಕೃತಿಯ ಬೇರು ಬೇರು ಗಟ್ಟಿಯಾಗಿದೆ ಎಂದು ತೋರಿಸುತ್ತದೆ.

3 weeks agoSeptember 19, 2025 11:26 am

ಇಂದಿನ ಕಾರ್ಯಕ್ರಮ

ಸಂವಾದ
ಬೆಳಿಗ್ಗೆ 10 ಗಂಟೆಗೆ ವಿದ್ಯಾರ್ಥಿ ಯುವಜನರೊಂದಿಗೆ ‘ವಚನ ಸಂವಾದ’ ತುಳುಭವನ, ಉರ್ವ ಸ್ಟೋರ್.

ಪಾದಯಾತ್ರೆ
ಮಧ್ಯಾಹ್ನ 3 ಗಂಟೆಗೆ ‘ವರ್ಣರಂಜಿತ ಪಾದಯಾತ್ರೆ’ ಶ್ರೀ ನಾರಾಯಣಗುರು ವೃತ್ತ, ಲೇಡಿಹಿಲ್ ನಿಂದ ತುಳುಭವನಕ್ಕೆ.

ಬಹಿರಂಗ ಸಭೆ
ಸಂಜೆ 4:30 ಗಂಟೆಗೆ ಸಾರ್ವಜನಿಕ ಸಮಾವೇಶ ತುಳುಭವನ, ಉರ್ವ ಸ್ಟೋರ್.

ನಾಟಕ
ಸಂಜೆ 6.30ಕ್ಕೆ ನಾಟಕ ‘ಜಂಗಮದೆಡೆಗೆ’ ಸಾಣೆಹಳ್ಳಿ ಶಿವಸಂಚಾರ ಕಲಾತಂಡದಿಂದ.

Share This Article
Leave a comment

Leave a Reply

Your email address will not be published. Required fields are marked *