22ನೇ ದಿನದ ಅಭಿಯಾನದ ಲೈವ್ ಬ್ಲಾಗ್
ಧನ್ಯವಾದ ಪ್ರಸನ್ನ ಎಸ್.ಎಂ
ಫೋಟೋ, ವಿಡಿಯೋ, ಮಾಹಿತಿ ನೀಡಿದ ಪ್ರಸನ್ನ ಅವರಿಗೆ ಧನ್ಯವಾದ.
ಆಶೀರ್ವಚನ, ಶರಣು ಸಮರ್ಪಣೆ
ಭಾಲ್ಕಿಯ ಪೂಜ್ಯ ಬಸವಲಿಂಗಪಟ್ಟದ್ದೇವರಿಂದ ಆಶೀರ್ವಚನ.
ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ, ಇತಿಹಾಸ, ಭವಿಷ್ಯ ಕುರಿತು ಇಳಕಲ್ಲದ ಗುರುಮಹಾಂತಪ್ಪಗಳು ವಿವರವಾಗಿ ಮಾತನಾಡಿದರು.
ಪ್ರಕಾಶ ಅವರಿಂದ ಎಲ್ಲರಿಗೂ ಶರಣು ಸಮರ್ಪಣೆ.
ಕಲ್ಯಾಣ ಗೀತೆಯೊಂದಿಗೆ ಸಮಾರಂಭ ಮಂಗಲಗೊಂಡಿತು.
ಸಂವಾದದ ಫೋಟೋಗಳು




ಸಂವಾದ ಕಾರ್ಯಕ್ರಮ: ಬಂದ ಪ್ರಶ್ನೆಗಳು
ಪಾಪ ಪುಣ್ಯ ಕರ್ಮ ಇದೆಯಾ? ಅವಿದ್ರೆ ಅವು ಹೇಗೆ ನಮ್ಮ ಬೆನ್ನು ಬೀಳುತ್ತವೆ?
ಸಂಸ್ಕೃತ ಪಾಠಶಾಲೆಗಳಂತೆ ವಚನ ಪಾಠಶಾಲೆಗಳನ್ನು ಯಾಕೆ ಆರಂಭಿಸಬಾರದು?
ಜಾತಿ ವ್ಯವಸ್ಥೆ ಬಗ್ಗೆ ಬಸವಣ್ಣನವರ ನಿಲುವು ಏನಿತ್ತು?
ಜಾತಿ ಜನಗಣತಿ ವಿಷಯದಲ್ಲಿ ಮಠ, ಜನಾಂಗ ಉಳಿಸಲು ಒಂದು ಸ್ಪಷ್ಟ ಸಂದೇಶ ನೀಡಿ.
ಲಿಂಗದೀಕ್ಷೆ ಲಿಂಗಾಯತರಿಗೆ ಮಾತ್ರ ಏಕೆ ಸೀಮಿತಗೊಂಡಿದೆ?
ಲಿಂಗಾಯತ ಸ್ವತಂತ್ರ ಧರ್ಮ ಹೇಗೆ?
ಇಷ್ಟಲಿಂಗ ಮತ್ತು ಗುಡಿಯ ಸ್ಥಾವರಲಿಂಗಕ್ಕು ಇರುವ ವ್ಯತ್ಯಾಸ?
ಇಷ್ಟಲಿಂಗ ಧಾರಣೆ ವೀರಶೈವ ಪದ್ಧತಿಯೊ, ಲಿಂಗಾಯತ ಪದ್ಧತಿಯೊ?
ಲಿಂಗಾಯತ ಮಠಾಧೀಶರು ದೇವಸ್ಥಾನ ಉದ್ಘಾಟನೆಯನ್ನು ಮಾಡುತ್ತಾರೆ, ಇಷ್ಟಲಿಂಗ ಕುರಿತು ಸಹ ಹೇಳುತ್ತಾರೆ, ಸ್ಪಷ್ಟನೆ ನೀಡಿ.
ಲಿಂಗಾಯತ ಸ್ವತಂತ್ರ ಧರ್ಮ ಹೇಗೆ?
ಇಷ್ಟಲಿಂಗ ಮತ್ತು ಗುಡಿಯ ಸ್ಥಾವರಲಿಂಗಕ್ಕು ಇರುವ ವ್ಯತ್ಯಾಸ?
ಇಷ್ಟಲಿಂಗ ಧಾರಣೆ ವೀರಶೈವ ಪದ್ಧತಿಯೊ, ಲಿಂಗಾಯತ ಪದ್ಧತಿಯೊ?
ಲಿಂಗಾಯತರಿಗೆ ಲಿಂಗಾಯತ ತತ್ವ ಸಿದ್ಧಾಂತ ತಿಳಿಯದಿರಲು ಮಠಾಧೀಶರು ಕಾರಣವೋ ಭಕ್ತರು ಕಾರಣವೋ?
ಜಾತಿ ಗಣತಿಯಲ್ಲಿ ಯಾವ ರೀತಿ ಬರೆಸಬೇಕು? ಏನು ಬರೆಸಬೇಕು? ಜನಸಾಮಾನ್ಯರಿಗೆ ಇನ್ನೂ ಏನೂ ತಿಳಿದಿಲ್ಲ?
ವಿಶ್ವವಿದ್ಯಾಲಯಗಳಲ್ಲಿ ಬಸವ ತತ್ವ ಅಧ್ಯಯನಕ್ಕೆ ಯಾಕೆ ಸರಿಯಾದ ಅವಕಾಶ ಇಲ್ಲ?
ಸ್ವತಂತ್ರ ಧರ್ಮದ ಹೋರಾಟವನ್ನು ರಾಜಕಾರಣಿಗಳನ್ನು ಹೊರಗಿಟ್ಟು, ನೀವೆಲ್ಲ ಮಠಾಧೀಶರು ಯಾಕೆ ನಡೆಸುವುದಿಲ್ಲ?
ಸ್ವತಂತ್ರ ಧರ್ಮ ಎಂದು ಬರೆದರೆ ಮುಂದಿನ ದಿನಗಳಲ್ಲಿ ಏನು ಪರಿಣಾಮವಾಗುತ್ತೆ?
ಸಾರ್ವಜನಿಕ ಸಮಾರಂಭ, ಸಂವಾದ ಕಾರ್ಯಕ್ರಮ
ಸಾರ್ವಜನಿಕ ಸಮಾರಂಭ ಸಂವಾದ ಕಾರ್ಯಕ್ರಮ ಎರಡನ್ನೂ ಒಟ್ಟಿಗೆ ಮಾಡಲು ನಿರ್ಣಯ.
ಜೆ.ಎಲ್.ಎಂ. ಜಿಲ್ಲಾಧ್ಯಕ್ಷ ಎಸ್. ಮಹಾದೇವಪ್ಪ ಸರ್ವರನ್ನು ಸ್ವಾಗತಿಸಿದರು.
ಎಲ್. ಶಿವಲಿಂಗಪ್ಪ ರಚಿಸಿದ ಬಸವಣ್ಣನವರ ಕಲಾಕೃತಿಗಳ ಬಿಡುಗಡೆ
ಬಸವ ಭಾರತ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಬೇಲಿಮಠದ ಶಿವರುದ್ರ ಮಹಾಸ್ವಾಮಿಗಳಿಂದ ‘ಲಿಂಗಾಯತ ಧರ್ಮ ಮತ್ತು ವೈದಿಕ ಧರ್ಮ’ ಕುರಿತು ಅನುಭಾವ.
ಪುಷ್ಪಾರ್ಪಣೆ ಮೂಲಕ ಸಂವಾದ ಕಾರ್ಯಕ್ರಮಕ್ಕೆ ಚಾಲನೆ
ಬಸವ ಮೂರ್ತಿಗೆ ಪೂಜ್ಯರು ಹಾಗೂ ಗಣ್ಯರು ಪುಷ್ಪಾರ್ಪಣೆ ಮಾಡುವ ಮೂಲಕ ವಚನ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜೆ.ಎಲ್.ಎಂ. ಜಿಲ್ಲಾಧ್ಯಕ್ಷ ಎಸ್. ಮಹಾದೇವಪ್ಪ ಸರ್ವರನ್ನು ಸ್ವಾಗತಿಸಿದರು.



ಬೇಲಿಮಠದ ಶಿವರುದ್ರ ಮಹಾಸ್ವಾಮಿಗಳಿಂದ ‘ಲಿಂಗಾಯತ ಧರ್ಮ ಮತ್ತು ವೈದಿಕ ಧರ್ಮ’ ಕುರಿತು ಅನುಭಾವ.

ನೀನು ಯಾರು ಲಿಂಗಾಯತ ವಿಡಿಯೋ
ಸುತ್ತೂರು ಮಠ ತಲುಪಿದ ಸಾಮರಸ್ಯ ನಡಿಗೆ
ಚಾಮುಂಡಿಪುರಂ ವೃತ್ತದಿಂದ ಬಸವ ರಥಕ್ಕೆ ಪುಷ್ಪಾರ್ಪಣೆ ಮಾಡಿ ಶುರುವಾದ ಸಾಮರಸ್ಯ ನಡಿಗೆ ಸುತ್ತೂರು ಮಠ ತಲುಪಿತು.
ಸಾಮರಸ್ಯ ನಡಿಗೆಯ ಚಿತ್ರಗಳು


















ಬಸವ ರಥಕ್ಕೆ ಸ್ವಾಗತ
ನಿವೇದಿತಾ ನಗರ ಪಾರ್ಕ್ ನಲ್ಲಿ ಬಸವ ರಥಕ್ಕೆ ಪೂಜ್ಯರು, ಗಣ್ಯರು ಸ್ವಾಗತ ಮಾಡಿಕೊಂಡರು.



ಇಂದಿನ ಕಾರ್ಯಕ್ರಮ
ಬಸವ ರಥ
ಬೆಳಿಗ್ಗೆ 10:30 ಗಂಟೆಗೆ ಬಸವ ರಥಕ್ಕೆ ಸ್ವಾಗತ, ನಿವೇದಿತಾ ನಗರ ಪಾರ್ಕ್.
ಪಾದಯಾತ್ರೆ
ಬೆಳಗ್ಗೆ 11 ಗಂಟೆಗೆ ‘ಸಾಮರಸ್ಯ ನಡಿಗೆ’ ಚಾಮುಂಡಿಪುರ ವೃತ್ತದಿಂದ ಸುತ್ತೂರು ಮಠದವರೆಗೆ.
ಸಂವಾದ
ಮಧ್ಯಾಹ್ನ 12 ಗಂಟೆಗೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ‘ವಚನ ಸಂವಾದ’ ಸುತ್ತೂರು ಶಾಖಾ ಮಠ, ಚಾಮುಂಡಿ ಬೆಟ್ಟದ ತಪ್ಪಲು.
ಬಹಿರಂಗ ಸಭೆ
ಮಧ್ಯಾಹ್ನ 2:30 ಗಂಟೆಗೆ ಸಾರ್ವಜನಿಕ ಸಮಾರಂಭ, ಸುತ್ತೂರು ಶಾಖಾ ಮಠ, ಚಾಮುಂಡಿ ಬೆಟ್ಟದ ತಪ್ಪಲು.
ನಾಟಕ ಪ್ರದರ್ಶನ
ಸಂಜೆ 5:30 ಗಂಟೆಗೆ ನಾಟಕ ‘ಜಂಗಮದೆಡೆಗೆ’ ಸಾಣೇಹಳ್ಳಿ ಶಿವಸಂಚಾರ ಕಲಾವಿದರಿಂದ.
11 ಗಂಟೆಗೆ ಸಾಮರಸ್ಯ ನಡಿಗೆ

ಜೈ ಬಸವೇಶ … ತಿಳಿದು ಕೊಂಡಿದ್ದುಕ್ಕಿಂತ ಯಶಸ್ವಿ vaagi ಸಾಗಿದೆ… 5ಲಕ್ಷ ಮೇಲೆ ಜನ ಬೆಂಗಳೂರು ಸಮಾರೋಪ ಸಮಾರಂಭ….
ಜೈ ಬಸವೇಶ … ತಿಳಿದು ಕೊಂಡಿದ್ದುಕ್ಕಿಂತ ಯಶಸ್ವಿ vaagi ಸಾಗಿದೆ… 5ಲಕ್ಷ ಮೇಲೆ ಜನ ಬೆಂಗಳೂರು ಸಮಾರೋಪ ಸಮಾರಂಭ…. ಉಘೇ ಉಘೇ ಲಿಂಗಾಯತ
ನಮ್ಮ ಧರ್ಮ ಗುರು ಶ್ರೀ ಬಸವೇಶ್ವರ…