ಬೆಂಗಳೂರು
ಐತಿಹಾಸಿಕ ಬಸವ ಸಂಸ್ಕೃತಿ ಅಭಿಯಾನವನ್ನು ಯಶಸ್ವಿಗೊಳಿಸಲು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಬಸವ ಸಂಘಟನೆಗಳ ಸಭೆ ಬುಧವಾರ ನಡೆಯಿತು.
ನಂತರ ಒಕ್ಕೂಟದ ಹಿರಿಯ ಶ್ರೀಗಳು ಸಚಿವ ಎಂ.ಬಿ ಪಾಟೀಲರೊಂದಿಗೆ ಅಭಿಯಾನದ ಮುಖ್ಯವಾಗಿ ಸಮಾರೋಪ ಕಾರ್ಯಕ್ರಮಕ್ಕೆ ನಡೆಸಬೇಕಿರುವ ಸಿದ್ದತೆಯ ಬಗ್ಗೆ ವಿವರವಾಗಿ ಚರ್ಚಿಸಿದರು.

ಅಭಿಯಾನವು ಬಸವ ತತ್ವವನ್ನು ಜನಮನದಲ್ಲಿ ಮತ್ತಷ್ಟು ಗಾಢವಾಗಿ ಬಿತ್ತಲು ಸಹಕಾರಿಯಾಗಲಿದೆಯೆಂಬ ಆಶಯ ಸಭೆಯಲ್ಲಿ ವ್ಯಕ್ತವಾಯಿತು.
ಸೆಪ್ಟೆಂಬರ್ 1ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ `ಬಸವ ಸಂಸ್ಕೃತಿ ಅಭಿಯಾನ’ ನಡೆಯಲಿದೆ. ಸಮಾರೋಪ ಸಮಾರಂಭವು ಬೆಂಗಳೂರು ಅರಮನೆ ಮೈದಾನದಲ್ಲಿ ಅಕ್ಟೊಬರ್ 5ರಂದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಸೇರಿದಂತೆ ಅವರು ನಾಡಿನ ಎಲ್ಲೆಡೆಯಿಂದ ಬಸವಣ್ಣನ ಸಾವಿರಾರು ಅನುಯಾಯಿಗಳು ಪಾಲ್ಗೊಳ್ಳಲಿದ್ದಾರೆ.


ಗದಗ ಪೂಜ್ಯ ತೋಂಟದಾರ್ಯ ಡಾ. ಸಿದ್ದರಾಮ ಮಹಾಸ್ವಾಮಿಗಳು, ಸಾಣೆಹಳ್ಳಿ ಶ್ರೀಮಠದ ಪೂಜ್ಯ ಗುರುಗಳಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಹಂದಿಗುಂದದ ಶಿವಾನಂದ ಸ್ವಾಮೀಜಿ, ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಪೂಜ್ಯ ಡಾ. ಅಲ್ಲಮಪ್ರಭು ಸ್ವಾಮೀಜಿ, ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು, ಬಸವಧರ್ಮ ಪೀಠದ ಬಸವ ಯೋಗಿ ಸ್ವಾಮಿಗಳು, ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿಯವರಾದ ಎಸ್. ಎಂ. ಜಾಮದಾರ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ ಸೇರಿದಂತೆ ಸಮಾಜದ ಹಿರಿಯರು, ಮುಖಂಡರುಗಳು ಸಭೆಯಲ್ಲಿ ಉಪಸ್ಥಿತರಿದ್ದು, ತಮ್ಮ ಚಿಂತನೆಗಳನ್ನು ಹಂಚಿಕೊಂಡರು.
ಬಹಳ ಸಂತೋಷ. ಲಿಂಗಾಯತ ಮಠಾಧೀಶರ ಒಕ್ಕೂಟವು ಬಸವ ಸಂಸ್ಕೃತಿಯನ್ನು ರಾಜ್ಯದ ಮತ್ತು ರಾಷ್ಟ್ರದ ಒಳ ಹೊರಗಿನ ಯುವಪೀಳಿಗೆಯಲ್ಲಿ ಬಿತ್ತಿ ಬೆಳೆಸುವ ಸ್ತುತ್ಯ ಕಾರ್ಯಗಳನ್ನು ಕೈಗೊಂಡರೆ ದೇಶ “ಬಸವ ಭಾರತ”ವಾಗಲು ಸಾಧ್ಯವಿದೆ.
ಬಸವ ಸಂಸ್ಕೃತಿ ಅಭಿಯಾನಕ್ಕೆ ಅಭೂತಪೂರ್ವ ಯಶಸ್ಸಿಗೆ ಶುಭ ಕೋರುವವರಲ್ಲಿ ನಾನೂ ಒಬ್ಬ.
ಇದೊಂದು ಮಹತ್ವದ ಸಂದೇಶ, ಬಸವ ಸಂಸ್ಕೃತಿ ದೇಶದಲ್ಲಿ ಪಸರಿಸಲಿ.ಮಾನವ ಸಮಾನತೆಯ ತತ್ವ ಪ್ರಸಾರವಾಗಲಿ.